ಪಕ್ಷಿಕೆರೆ ಸಂತ ಜೂದರ ವಾರ್ಷಿಕ ಉತ್ಸವದ ಹೊರೆಕಾಣಿಕೆ ಮೆರವಣಿಗೆ

Konica Studio

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಪಕ್ಷಿಕೆರೆ ಸಂತ ಜೂದರ ಪುಣ್ಯಕ್ಷೇತ್ರದಲ್ಲಿ ನಡೆಯುವ ಸಾಮೂಹಿಕ ವಿವಾಹ ಮತ್ತು ವಾರ್ಷಿಕ ಉತ್ಸವದ ಅಂಗವಾಗಿ ಭಾನುವಾರ ಪಕ್ಷಿಕೆರೆಯಿಂದ ಚರ್ಚಿಗೆ ಸರ್ವ ಭಕ್ತರಿಂದ ಹೊರೆಕಾಣಿಕೆ ಮೆರವಣಿಗೆ ನಡೆಯಿತು. ಬಿಜೈ ಡಿವೈನ್ ಮರ್ಸಿ ಧ್ಯಾನ ಮಂದಿರ ನಿರ್ದೇಶಕ ರೆ| ಫಾ| ಡೋಲ್ಫಿ ಸೆರಾವೊ ಪ್ರವಚನ ನೀಡಿದರು. ಕಿನ್ನಿಗೋಳಿ ವಲಯದ ಧರ್ಮಗುರು ರೆ| ಫಾ| ಆಲ್ಫ್ರೆಡ್ ಜೆ. ಪಿಂಟೊ, ಬಲಿ ಪೂಜೆ ನೆರವೇರಿಸಿದರು. ಪಕ್ಷಿಕೆರೆ ಚರ್ಚ್ ಧರ್ಮಗುರು ರೆ| ಫಾ| ಆಂಡ್ರು ಲಿಯೊ ಡಿ’ಸೋಜ, ಸಹಾಯಕ ಧರ್ಮಗುರು ರೆ| ಸುನಿಲ್ ಪ್ರವೀಣ್ ಪಿಂಟೊ, ಚರ್ಚ್ ಉಪಾಧ್ಯಕ್ಷ ಡೊಲ್ಪಿ ಮಿರಾಂದ, ಕಾರ್ಯದರ್ಶಿ ಲೂಸಿ ಡಿಸೋಜ, ಲೂವಿಸ್ ಡಿ’ಸೋಜ ಮತ್ತಿತರರಿದ್ದರು.

Comments

comments

Leave a Reply

Read previous post:
ನಾಯಕತ್ವ ಮತ್ತು ಸ್ವ ಉದ್ಯೋಗ ಮಾಹಿತಿ ಶಿಬಿರ

ಕಿನ್ನಿಗೋಳಿ: ಸಿ.ಒ.ಡಿ.ಪಿ ಸಂಸ್ಥೆಯ ಆಶ್ರಯದಲ್ಲಿ ಸ್ವಸಹಾಯ ಸಂಘಗಳಿಗೆ ನಾಯಕತ್ವ ಮತ್ತು ಸ್ವ ಉದ್ಯೋಗ ಮಾಹಿತಿ ಶಿಬಿರ ಮೆನ್ನಬೆಟ್ಟು ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ಸಿ.ಒ.ಡಿ.ಪಿ ಸಂಸ್ಥೆಯ ಸಂಯೋಜಕ ಜೀವನ್ ನಾಯಕತ್ವ...

Close