ಗೋವಿಂದದಾಸ ಪ.ಪೂ. ಕಾಲೇಜು – ಶಿಬಿರ ಉದ್ಘಾಟನೆ

ಕಿನ್ನಿಗೋಳಿ: ನಾಯಕತ್ವ, ವ್ಯಕ್ತಿತ್ವ ವಿಕಸನ, ಸೇವೆ, ದೀನ ದಲಿತರಿಗೆ ಸಹಾಯ ಹಸ್ತ ಮುಂತಾದುವುಗಳು ರಾಷ್ಟ್ರೀಯ ಸೇವಾ ಯೋಜನೆಯ ಅಂಗಗಳಾಗಿವೆ. ಶಿಬಿರದಲ್ಲಿ ಸ್ವಾವಲಂಬನೆ ಹಾಗೂ ಹಳ್ಳಿ ಜೀವನದ ಸೊಗಡನ್ನು ಕಾಣಬಹುದು ಎಂದು ಜಿಲ್ಲಾ ಪಂಚಾಯಿತಿ ಶಿಕ್ಷಣ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಈಶ್ವರ್ ಕಟೀಲ್ ಹೇಳಿದರು.
ಪದವಿಪೂರ್ವ ಶಿಕ್ಷಣ ಇಲಾಖೆ ಬೆಂಗಳೂರು ಇವರ ಸಹಕಾರದಲ್ಲಿ ಸುರತ್ಕಲ್ ಗೋವಿಂದದಾಸ ಪ.ಪೂ. ಕಾಲೇಜು ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರ ಸೋಮವಾರ ಕೆಮ್ರಾಲ್ ಗ್ರಾಮ ಪಂಚಾಯಿತಿ ಸಭಾ ಭವನದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಗೋವಿಂದದಾಸ ಪ.ಪೂ. ಕಾಲೇಜು ಪ್ರಾಚಾರ್ಯೆ ಸುಜಾತ ಕೆ.ವಿ. ಅಧ್ಯಕ್ಷತೆ ವಹಿಸಿದ್ದರು. ಹಿಂದು ವಿದ್ಯಾದಾಯಿನೀ ಸಂಘದ ಕಾರ್ಯದರ್ಶಿ ಪ್ರೊ. ಗಿರಿಧರ ಹತ್ವಾರ್, ರಾ. ಸೇ.ಯೋ. ಸಲಹಾ ಸಮಿತಿ ಸದಸ್ಯ ಮಹಾಬಲ ಪೂಜಾರಿ ಕಡಂಬೋಡಿ, ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ, ಗೋವಿಂದದಾಸ ಕಾಲೇಜು ಪ್ರಾಚಾರ್ಯ ಪ್ರೊ. ರಾಜಮೋಹನ್ ರಾವ್, ಸಂತಜೂದರ ಇಗರ್ಜಿ ಧರ್ಮಗುರು ರೆ|ಫಾ| ಆಂಡ್ರ್ಯೂ ಲಿಯೋ ಡಿಸೋಜ, ಕೆಮ್ರಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೂಸು, ಕೆಮ್ರಾಲ್ ಗ್ರಾಮ ಪಂಚಾಯಿತಿ ಪಿ.ಡಿ.ಒ ಗಣೇಶ್, ಗ್ರಾ. ಪಂ. ಸದಸ್ಯ ಮಯ್ಯದ್ದಿ ಮತ್ತಿತರರು ಉಪಸ್ಥಿತರಿದ್ದರು.
ಸುಷ್ಮಿತಾ ಸ್ವಾಗತಿಸಿ, ಪ್ಲಾವಿಯಾ ಡಿಸೋಜ ವಂದಿಸಿದರು. ಕೀರ್ತನ್ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಪಕ್ಷಿಕೆರೆ ಸಾಮೂಹಿಕ ವಿವಾಹ

ಕಿನ್ನಿಗೋಳಿ: ಆಡಂಬರದ ಮದುವೆಯ ಬದಲು ಸರಳ ರೀತಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುವ ದಂಪತಿಗಳನ್ನು ಸಮಾಜವು ಗುರುತಿಸಿ ಗೌರವಿಸಬೇಕು ಎಂದು ಕಲ್ಮಾಡಿ ವೆಲಂಕಣಿ ಚರ್ಚ್‌ನ ಧರ್ಮಗುರು ಫಾ| ಅಲ್ಬನ್ ಡಿಸೋಜ...

Close