ಮೂಲ್ಕಿ ಶಾರದಾ ಮಹೋತ್ಸವದ ಧಾರ್ಮಿಕ ಸಭೆ

Narendra Kerekadu

ಕಿನ್ನಿಗೋಳಿ: ಸಂಘಟಿತ ಸಮಾಜವಾಗಿ ಬೆಳೆದಿರುವ ಹಿಂದೂ ಧರ್ಮದ ಹಬ್ಬಗಳಿಗೆ ವಿಶೇಷ ಅರ್ಥವಿದ್ದು, ಭಾವನಾತ್ಮಕ ರೀತಿಯಲ್ಲಿ ಆಚರಿಸುವ ದಸರಾ ಮಹೋತ್ಸವವು ಸೇರಿದಂತೆ ಅನೇಕ ಉತ್ಸವಗಳು ಸಾರ್ವಜನಿಕವಾಗಿಯೂ ಆಚರಿಸಲು ಸಾಧ್ಯವಿದೆ, ಸಾಮರಸ್ಯದ ಸಂಕೇತವಾಗಿಯೂ ನಂಬಿಕೊಂಡು ಬಂದಿರುವ ಈ ಉತ್ಸವವನ್ನು ಮೂಲ್ಕಿ ದಸರಾ ರೀತಿಯಲ್ಲಿ ಮತ್ತಷ್ಟು ವಿಜೃಂಭಣೆಯಿಂದ ಆಚರಿಸಬೇಕು ಎಂದು ದೈವದರ್ಶನದ ಮಧ್ಯಸ್ಥ ಕಿಶೋರ್ ಶೆಟ್ಟಿ ದೆಪ್ಪುಣಿಗುತ್ತು ಮೂಲ್ಕಿಯ ಶಾರದಾ ಮಹೋತ್ಸವದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು. ತೋಕೂರು ಗುತ್ತು ಗುಣಪಾಲ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿದ್ದರು. ಗಂಜಿಮಠದ ಕಲಾಸ್ಪರ್ಶ ತಂಡದಿಂದ ವೈವಿಧ್ಯಮಯ ಕಾರ್ಯಕ್ರಮ ನಡೆಯಿತು.
ಮೂಲ್ಕಿ ಪಂಚಾಯಿತಿಯ ಅಧ್ಯಕ್ಷ ಶಶಿಕಾಂತ ಶೆಟ್ಟಿ, ಉದ್ಯಮಿಗಳಾದ ಉದಯ ಪೈ, ಹೇಮಚಂದ್ರ ಕೋಟ್ಯಾನ್ ಕಕ್ವ, ಮಂಗಳೂರು ನಗರಾಭಿವೃದ್ದಿ ಪ್ರಾಧಿಕಾರದ ಸದಸ್ಯೆ ಕಸ್ತೂರಿ ಪಂಜ, ಶಾರದಾ ಮಹೋತ್ಸವ ಸಮಿತಿಯ ಅಧ್ಯಕ್ಷ ಗೋವಿಂದ ಕೋಟ್ಯಾನ್ ಉಪಸ್ಥಿತರಿದ್ದರು. ಹರ್ಷರಾಜ್ ಶೆಟ್ಟಿ ಸ್ವಾಗತಿಸಿದರು, ದಿನೇಶ್ ಕೊಲ್ನಾಡು ಕಾರ್ಯಕ್ರಮ ನಿರೂಪಿಸಿದರು.
ಸಾರ್ವಜನಿಕವಾಗಿ ನಡೆಸಿದ ಹಗ್ಗಜಗ್ಗಾಟ ಸ್ಪರ್ಧೆ ಮತ್ತು ಮಡಿಕೆ ಒಡೆಯುವ ಸ್ಪರ್ಧೆಯ ಬಹುಮಾನವನ್ನು ವಿತರಿಸಲಾಯಿತು.

Comments

comments

Leave a Reply

Read previous post:
ಗೋವಿಂದದಾಸ ಪ.ಪೂ. ಕಾಲೇಜು – ಶಿಬಿರ ಉದ್ಘಾಟನೆ

ಕಿನ್ನಿಗೋಳಿ: ನಾಯಕತ್ವ, ವ್ಯಕ್ತಿತ್ವ ವಿಕಸನ, ಸೇವೆ, ದೀನ ದಲಿತರಿಗೆ ಸಹಾಯ ಹಸ್ತ ಮುಂತಾದುವುಗಳು ರಾಷ್ಟ್ರೀಯ ಸೇವಾ ಯೋಜನೆಯ ಅಂಗಗಳಾಗಿವೆ. ಶಿಬಿರದಲ್ಲಿ ಸ್ವಾವಲಂಬನೆ ಹಾಗೂ ಹಳ್ಳಿ ಜೀವನದ ಸೊಗಡನ್ನು ಕಾಣಬಹುದು...

Close