ಮುಂಬೈ ಬಿಲ್ಲವ ಎಸೋಸಿಯೇಶನ್‌ನಿಂದ ಪ್ರತಿಭಾ ಪುರಸ್ಕಾರ

Bhagyawan Sanil

ಕಿನ್ನಿಗೋಳಿ: ಜೀವನದಲ್ಲಿ ಪ್ರತೀಯೊಂದು ಹಂತದಲ್ಲಿ ಹೊಂದಾಣಿಕೆ ಅತ್ಯಗತ್ಯ.ನಿರ್ಣಾಯಕ ಹಂತಗಳಲ್ಲಿ ಹೊಂದಾಣಿಕೆಯಿಂದ ಯಾವುದೇ ಅಪಾಯದಿಂದ ಪಾರಾಗಲು ಸಾಧ್ಯ ಎಂದು ಮುಂಬೈ ಬಿಲ್ಲವರ ಎಸೋಸಿಯೇಶನ್ ಗೌರವಾಧ್ಯಕ್ಷ ಜಯ.ಸಿ.ಸುವರ್ಣ ಹೇಳಿದರು.
ಸಮಾರಂಭದ ಮುಖ್ಯ ಅತಿಥಿ ಮೂಲ್ಕಿ ಶ್ರೀ ನಾರಾಯಣಗುರು ಸಂಯುಕ್ತ ಪದವಿ ಪೂರ್ವ ಕಾಲೇಜಿನ ಆಡಳಿತಾಧಿಕಾರಿ ಅಡ್ವೆ ರವೀಂದ್ರ ಪೂಜಾರಿ ಮಾತನಾಡಿ, ರಾಷ್ಟ್ರೀಯ ಸೇವೆ, ಪ್ರಗತಿ ಸಾಧನಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ಮತ್ತು ಉತ್ತಮ ಗುಣ ನಡತೆ ಹೊಂದಿದ್ದಲ್ಲಿ ರಾಷ್ಟ್ರದ ಭವಿಷ್ಯ ಉಜ್ವಲಗೊಳ್ಳುತ್ತದೆ ಎಂದರು.
ಹೆಜಮಾಡಿ ಬಿಲ್ಲವರ ಸಂಘದಲ್ಲಿ ಮುಂಬೈ ಬಿಲ್ಲವರ ಎಸೋಸಿಯೇಶನ್ ವತಿಯಿಂದ ದ.ಕ ಮತ್ತು ಉಡುಪಿ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.
ಬಿಲ್ಲವ ಸಮಾಜದ ವಿದ್ಯಾರ್ಥಿಗಳಿಗೆ ಹತ್ತನೇ ತರಗತಿಯಿಂದ ಉನ್ನತ ಶಿಕ್ಷಣ ವರೆಗಿನ 901 ವಿದ್ಯಾರ್ಥಿಗಳಿಗೆ ರೂ11ಲಕ್ಷರೂ ಮೊತ್ತದ ವಿದ್ಯಾರ್ಥಿ ವೇತನ ನೀಡಲಾಯಿತು.ಕಳೆದ 20 ವರ್ಷಗಳಿಂದ ಬಿಲ್ಲವರ ಎಸೋಸಿಯೇಶನ್ ಈ ಕಾರ್ಯವನ್ನು ಪ್ರಾರಂಭದ 5 ವರ್ಷ ಮುಂಬೈಯಲ್ಲಿ ಹಾಗೂ 15 ವರ್ಷಗಳಿಂದ ಕರ್ನಾಟಕದಲ್ಲಿ ನೀಡುತ್ತಾಬಂದಿದೆ.
ಎಸೋಸಿಯೇಶನ್ ಅಧ್ಯಕ್ಷ ಎಸ್.ವಿ.ಅಮೀನ್,ಉದ್ಯಮಿ ಗಣೇಶ್ ಬಂಗೇರಾ,ಗುಜರಾತ್ ಉದ್ಯಮಿ ಮೋಹನ್.ಸಿ.ಪೂಜಾರಿ,ದಾಮೋದರ್ ಎಂ.ಐ,ವೈ ನಾಗೇಶ್,ಚಂದ್ರಕಲಾ,ನಿತ್ಯಾನಂದ ಡಿ.ಕೋಟ್ಯಾನ್,ಚಂದ್ರಶೇಖರ.ಎಸ್.ಪೂಜಾರಿ,ನವೀನ್ ಪೂಜಾರಿ,ಎಂ.ಆನಂದ ಪೂಜಾರಿ,ಸದಾಶಿವ ಕರ್ಕೇರಾ, ಹರೀಶ್ ಸಾಲ್ಯಾನ್,ಸತೀಶ್ ಪೂಜಾರಿ, ಆರ್.ಎಸ್.ಕೋಟ್ಯಾನ್, ಶಂಕರ ಸುವರ್ಣ, ಹೆಜಮಾಡಿ ಬಿಲ್ಲವ ಸಂಘದ ಅಧ್ಯಕ್ಷ ದೊಂಬ ಪೂಜಾರಿ ಮುಖ್ಯ ಅತಿಥಿಯಾಗಿದ್ದರು. ಎಸೋಸಿಯೇಶನ್ ವಿದ್ಯಾ ಉಪಸಮಿತಿ ಕಾರ್ಯಾಧ್ಯಕ್ಷ ಭಾಸ್ಕರ ಮುದ್ದು ಸಾಲ್ಯಾನ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಜ್ಯೋತಿ.ಕೆ.ಸುವರ್ಣ ನಿರೂಪಿಸಿದರು. ಧಂಜಯ.ಎಸ್.ಕೋಟ್ಯಾನ್ ವಂದಿಸಿದರು.

Comments

comments

Leave a Reply

Read previous post:
ಮೂಲ್ಕಿ ಶಾರದಾ ಮಹೋತ್ಸವದ ಧಾರ್ಮಿಕ ಸಭೆ

Narendra Kerekadu ಕಿನ್ನಿಗೋಳಿ: ಸಂಘಟಿತ ಸಮಾಜವಾಗಿ ಬೆಳೆದಿರುವ ಹಿಂದೂ ಧರ್ಮದ ಹಬ್ಬಗಳಿಗೆ ವಿಶೇಷ ಅರ್ಥವಿದ್ದು, ಭಾವನಾತ್ಮಕ ರೀತಿಯಲ್ಲಿ ಆಚರಿಸುವ ದಸರಾ ಮಹೋತ್ಸವವು ಸೇರಿದಂತೆ ಅನೇಕ ಉತ್ಸವಗಳು ಸಾರ್ವಜನಿಕವಾಗಿಯೂ...

Close