ಪಕ್ಷಿಕೆರೆ ಸಾಮೂಹಿಕ ವಿವಾಹ

ಕಿನ್ನಿಗೋಳಿ: ಆಡಂಬರದ ಮದುವೆಯ ಬದಲು ಸರಳ ರೀತಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುವ ದಂಪತಿಗಳನ್ನು ಸಮಾಜವು ಗುರುತಿಸಿ ಗೌರವಿಸಬೇಕು ಎಂದು ಕಲ್ಮಾಡಿ ವೆಲಂಕಣಿ ಚರ್ಚ್‌ನ ಧರ್ಮಗುರು ಫಾ| ಅಲ್ಬನ್ ಡಿಸೋಜ ಹೇಳಿದರು.
ಕಿನ್ನಿಗೋಳಿ ಬಳಿಯ ಪಕ್ಷಿಕೆರೆಯ ಸಂತ ಜೂದರ ಚರ್ಚ್‌ನಲ್ಲಿ ಮಂಗಳವಾರ ವಾರ್ಷಿಕ ಮಹೋತ್ಸವದ ಅಂಗವಾಗಿ ನಡೆದ 9ನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮದ ಧಾರ್ಮಿಕ ವಿಧಿ ವಿಧಾನವನ್ನು ನೆರವೇರಿಸಿ ಮಾತನಾಡಿದರು. 7 ಜೋಡಿಗಳು ಸಾಮೂಹಿಕ ವಿವಾಹದಲ್ಲಿ ಗೃಹಸ್ಥಾಶ್ರಮ ಸೇರಿದರು.

ಮೂಲ್ಕಿ ಮೂಡಬಿದರೆ ಶಾಸಕ ಅಭಯಚಂದ್ರ ಜೈನ್ ನವ ದಂಪತಿಗಳಿಗೆ ಚರ್ಚ್ ವತಿಯಿಂದ ನೀಡಿದ ವಿಶೇಷ ಉಡುಗೊರೆಯನ್ನು ಹಸ್ತಾಂತರಿಸಿದರು. ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಸಹಕರಿಸಿದ ೮ ಮಂದಿ ಪ್ರೋತ್ಸಾಹಕರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಪಕ್ಷಿಕೆರೆ ರುಸೆಂಪ್ ನಿರ್ದೇಶಕ ಫಾ| ಒಸ್ವಾಲ್ಡ್ ಮೊತೆರೊ, ಸೇವಕ್ ಪತ್ರಿಕೆ ಸಂಪಾದಕ ಫಾ| ಡೆರಿಲ್ ಫೆರ್ನಾಂಡಿಸ್, ಸಂತ ಅಂತೋನಿ ಆಶ್ರಮದ ಫಾ| ಜೋರ್ಜ್ ಕ್ರಾಸ್ತಾ , ಮೂಡಿಗೆರೆ ಧರ್ಮಗುರು ಫಾ| ಆನಂದ ಪ್ರಭು, ಪಕ್ಷಿಕೆರೆ ಧರ್ಮಗುರು ಫಾ| ಆಂಡ್ರ್ಯು ಲಿಯೋ ಡಿಸೋಜ, ಸಹಾಯಕ ಧರ್ಮಗುರು ಫಾ| ಸುನಿಲ್ ಪ್ರವೀಣ್ ಪಿಂಟೊ, ಚರ್ಚ್ ಉಪಾಧ್ಯಕ್ಷ ಡೊಲ್ಪಿ ಮಿರಾಂದ, ಕಾರ್ಯದರ್ಶಿ ಲೂಸಿ ಡಿಸೋಜ, ಲೂವಿಸ್ ಡಿ’ಸೋಜ ಉಪಸ್ಥಿತರಿದ್ದರು.

ಸಾಮೂಹಿಕ ವಿವಾಹದಲ್ಲಿ ರೋನಾಲ್ಡ್ ವೇಗಸ್-ಪೆರ್ಮನ್ನೂರು ಶಾಲೆಟ್ ಡಿಸೋಜ ಕಾಟಿಪಳ್ಳ, ಪಿಲಿಪ್ ಐವನ್ ಸಲ್ಡಾನ ಶಿರ್ವ-ಪ್ರೆಸಿಲ್ಲಾ ಐವಿ ಬಜ್ಪೆ ಜಗದೇಶ್ ಸದೇಪ್ಪ ಬೆಳಗಾಂ-ಸುಜಾತಾ ಜೋರ್ಜ್ ಫೆರ್ನಾಡಿಂಸ್ ಮೂಡಿಗೆರೆ, ಎಲಿಯಾಸ್ ವೇಗಸ್ ಕೂಳೂರು-ಬೆನ್ನಿ ಡಿಸಿಲ್ವ ಮೈಸೂರು, ವಿಲ್ಸನ್ ಡುಂಗ್ ಡುಂಗ್ ಜಾರ್ಖಂಡ್-ಸರಿತಾ ಸ್ಟೆಲ್ಲಾ ಅಲ್ವಾರಿಸ್ ಜೆಪ್ಪು, ರಾಬರ್ಟ್ ಗಲ್ಬಾವೊ ಕೊಕ್ಕಡ-ಸವಿತಾ ಬೀದರ್, ಲ್ಯಾನ್ಸಿ ಡಿಸೋಜ ಫಜೀರ್-ರೂಪ ಡಿಸೋಜ ಮೈಸೂರು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

ಕಿನ್ನಿಗೋಳಿ ಸಮೀಪದ ಪಕ್ಷಿಕೆರೆ ಸಂತ ಜೂದರ ಪುಣ್ಯಕ್ಷೇತ್ರದಲ್ಲಿ ನಡೆದ ಸಾಮೂಹಿಕ ವಿವಾಹ

Comments

comments

Leave a Reply

Read previous post:
ಪಕ್ಷಿಕೆರೆ ಸಂತ ಜೂದರ ವಾರ್ಷಿಕ ಉತ್ಸವದ ಹೊರೆಕಾಣಿಕೆ ಮೆರವಣಿಗೆ

Konica Studio ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಪಕ್ಷಿಕೆರೆ ಸಂತ ಜೂದರ ಪುಣ್ಯಕ್ಷೇತ್ರದಲ್ಲಿ ನಡೆಯುವ ಸಾಮೂಹಿಕ ವಿವಾಹ ಮತ್ತು ವಾರ್ಷಿಕ ಉತ್ಸವದ ಅಂಗವಾಗಿ ಭಾನುವಾರ ಪಕ್ಷಿಕೆರೆಯಿಂದ ಚರ್ಚಿಗೆ ಸರ್ವ ಭಕ್ತರಿಂದ...

Close