ತೋಕೂರು ಐ.ಟಿ.ಐ. ಕಾಲೇಜು : ಭಜನಾ ಸತ್ಸಂಗ

ಕಿನ್ನಿಗೋಳಿ : ದೇವರ ಸ್ಮರಣೆ ಮತ್ತು ಸಂಕೀರ್ತನೆಯಿಂದ ಈಗಿನ ಆಧುನಿಕ ಜೀವನದಲ್ಲಿ ಏಕಾಗ್ರತೆ ಹಾಗೂ ನೆಮ್ಮದಿ ಕಾಣಬಹುದು ಎಂದು ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಅನುವಂಶಿಕ ಮೊಕ್ತೇಸರ ಮುಲ್ಕಿ ದುಗ್ಗಣ್ಣ ಸಾವಂತರು ಹೇಳಿದರು.
ಮುಲ್ಕಿ ರಾಮಕೃಷ್ಣ ಪೂಂಜಾ ಕೈಗಾರಿಕಾ ತರಬೇತಿ ಸಂಸ್ಥೆ ತಪೋವನ ತೋಕೂರುವಿನಲ್ಲಿ ಆಯುಧ ಪೂಜೆ ನಿಮಿತ್ತ ಜರಗಿದ ಭಜನಾ ಸತ್ಸಂಗ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸಿ ಮಾತನಾಡಿದರು. ಐ.ಟಿ.ಐ. ಕಾಲೇಜು ಪ್ರಾಚಾರ್ಯ ವೈ ಎನ್. ಸಾಲಿಯಾನ್ ಅಧ್ಯಕ್ಷತೆ ವಹಿಸಿದ್ದರು.
ತರಬೇತಿ ಅಧಿಕಾರಿ ರಘುರಾಮ ರಾವ್, ಕಾಲೇಜು ಸಿಂಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕುಮಾರಿ ಮೇಘ ಪೈ. ಅವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ಜರಗಿತು. ಕಿರಿಯ ತರಬೇತಿ ಅಧಿಕಾರಿ ಶ್ರೀ ಲಕ್ಷ್ಮೀಕಾಂತ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಡಾ| ಡಿ.ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕ ವರ್ಧಂತಿ

ಕಿನ್ನಿಗೋಳಿ : ಬುಧವಾರರಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರ 45ನೇ ಪಟ್ಟಾಭಿಷೇಕದ ವರ್ಧಂತಿ ಜರಗಿದ ಸಂದರ್ಭ ರಾಜ್ಯ ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಮೂಡಬಿದ್ರೆಯ...

Close