ಉಳೆಪಾಡಿಯಲ್ಲಿ ಶರನ್ನವರಾತ್ರಿ ಧಾರ್ಮಿಕ ಸಭೆ

ಕಿನ್ನಿಗೋಳಿ : ನಮ್ಮ ನಾಡಿನ ನುಡಿ ಸಂಸ್ಕಾರ ಆಚರಣೆಗಳನ್ನು ಉಳಿಸಿ ಬೆಳಿಸಿಕೊಳ್ಳಬೇಕು ನಾಡಿನ ಅಭ್ಯುದಯಕ್ಕಾಗಿ ಬದ್ಧರಾಗಬೇಕು ಎಂದು ಮಾಜಿ ಕಸಾಪ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದರು.

ಉಳೆಪಾಡಿ ದುರ್ಗಾಪರಮೇಶ್ವರೀ ಮಹಮ್ಮಾಯೀ ದೇವಸ್ಥಾನದಲ್ಲಿ ಮಂಗಳವಾರ ನಡೆದ ಶರನ್ನವರಾತ್ರಿ ಧಾರ್ಮಿಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭ ಸಮಾಜ ಸೇವೆಗಾಗಿ ಶ್ರಮಿಸಿದ ತಾಳಿಪಾಡಿ ಮಠ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ ಆಡಳಿತ ಮೊಕ್ತೇಸರ ದಯಾನಂದ ಭಟ್, ಸಮಾಜಸೇವಿಕೆ ಶ್ರೀಮತಿ ಕೇಸರಿ ಪುರಂದರ ಬಳ್ಕುಂಜೆ, ದೈವಾರಾಧಕ ಆನಂದ ಪಾಣಾರ, ದುರ್ಗಾಪರಮೇಶ್ವರೀ ಮಹಮ್ಮಾಯೀ ದೇವಸ್ಥಾನ ಉಳೆಪಾಡಿ ಕಾರ್ಯಧ್ಯಕ್ಷ ನಾರಾಯಣ ಶೆಟ್ಟಿ ಹಾಗೂ ಪಟ್ಟೆ ಭಜನಾ ಮಂಡಳಿಯನ್ನು ದೇವಳದ ವತಿಯಿಂದ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಯುಗಪುರುಷ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ, ಸಂತೋಷ್ ಕುಮಾರ್ ಬೆಂಗಳೂರು. ಶ್ರೀಮತಿ ಮೋಹನದಾಸ ಸುರತ್ಕಲ್, ಕರುಣಾಕರ ರೈ, ವೈ. ಕೃಷ್ಣ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
ಉಳೆಪಾಡಿ ದುರ್ಗಾಪರಮೇಶ್ವರೀ ಮಹಮ್ಮಾಯೀ ದೇವಸ್ಥಾನದ ಧರ್ಮದರ್ಶಿ ಮೋಹನದಾಸ ಸುರತ್ಕಲ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶರನ್ನವರಾತ್ರಿ ಆರಾಧನೆ ಪ್ರಯುಕ್ತ ಮಾಹಾ ಚಂಡಿಕಾ ಯಾಗ ನಡೆಯಿತು

Comments

comments

Leave a Reply

Read previous post:
ಭ್ರಮರವಾಣಿ, ಹೊಲಿಗೆ ಯಂತ್ರಗಳ ಉದ್ಘಾಟನೆ

Mithuna Kodethoor ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇಗುಲದ ಪ್ರೌಢಶಾಲೆಯಲ್ಲಿ ಶಾಲಾ ವಿಶೇಷಾಂಕ ಭ್ರಮರವಾಣಿಯ ಬಿಡುಗಡೆ ಬುಧವಾರ ನಡೆಯಿತು. ಇದೇ ಸಂದರ್ಭ ಸಂಜೀವನಿ ಟ್ರಸ್ಟ್‌ನ ಡಾ. ಸುರೇಶ್...

Close