ಹೋಮಿಯೋಪತಿ ಚಿಕಿತ್ಸೆಯಿಂದ ಶಾಶ್ವತ ಪರಿಹಾರ

Narendra Kerekadu

ಕಿನ್ನಿಗೋಳಿ: ಹಳೆಯಂಗಡಿ ಬಳಿಯ ಪಕ್ಷಿಕೆರೆಯ ಪಂಜದ ನವಜ್ಯೋತಿ ಮಹಿಳಾ ಮಂಡಲದ ಸಭಾಂಗಣದಲ್ಲಿ ಹೋಮಿಯೋ ಪದ್ಧತಿಯ ಮಾಹಿತಿ ಶಿಬಿರನಡೆಯಿತು. ಮಂಗಳೂರಿನ ನೆಹರು ಯುವಕಾರ್ಯ ಮತ್ತು ಕ್ರೀಡಾ ಸಚಿವಾಲಯದ ನೆಹರು ಯುವಕೇಂದ್ರ, ಪಂಜದ ನವಜ್ಯೋತಿ ಮಹಿಳಾ ಮಂಡಲ ಮತ್ತು ಮೂಲ್ಕಿ ಯುವವಾಹಿನಿ ಘಟಕದ ಜಂಟಿ ಸಂಯೋಜನೆಯಲ್ಲಿ ಕಾರ್ಯಕ್ರಮ ಹಮ್ಮಿಕೋಳ್ಳಲಾಗಿತ್ತು.
ನವಜ್ಯೋತಿ ಮಹಿಳಾ ಮಂಡಲದ ಅಧ್ಯಕ್ಷೆ ಸರಿತಾ ಆರ್. ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿದ್ದರು. ಆರೋಗ್ಯದ ಬಗ್ಗೆ ಸರಳ ರೀತಿಯಲ್ಲಿ ಹೋಮಿಯೋಪತಿ ಚಿಕಿತ್ಸೆಯಿಂದ ಯಾವುದೇ ಆರೋಗ್ಯದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯ, ಇದು ದೇಹಕ್ಕೆ ಯಾವುದೇ ದುಷ್ಪರಿಣಾಮ ಬೀರದೆ ಆರೋಗ್ಯವಾಗಿ ಬದುಕಲು ಅನುಕೂಲವಾದ ಪದ್ಧತಿ ಆಗಿದೆ ಇದರ ಔಷಧಿಗೆ ನೂರಾರು ವರ್ಷದ ಇತಿಹಾಸ ಇದೆ ಎಂದು ಹೋಮಿಯೋಪತಿ ಚಿಕಿತ್ಸೆಯ ತಜ್ಞೆ ಡಾ.ವಸುಮತಿ ಕೋಡಿಕಲ್ ಹೇಳಿದರು.
ಮೂಲ್ಕಿ ಪಟ್ಟಣ ಪಂಚಾಯಿತಿಯ ಉಪಾಧ್ಯಕ್ಷ ಯೋಗೀಶ್ ಕೋಟ್ಯಾನ್ ಚಿತ್ರಾಪು ಉದ್ಘಾಟಿಸಿ ಮಹಿಳೆಯರು ಆರೋಗ್ಯವಂತರಾದರೆ ಆ ಕುಟುಂಬಕ್ಕೂ ನೆಮ್ಮದಿ, ಸ್ಥಳೀಯ ಮಹಿಳಾ ಸಂಘ ಸಂಸ್ಥೆಗಳ ಮೂಲಕ ಅವರನ್ನು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿರಬೇಕು ಎಂದು ಹೇಳಿದರು.
ಮೂಲ್ಕಿ ಯುವವಾಹಿನಿಯ ದಶಮಾನೋತ್ಸವ ಸವಿನೆನಪಿಗಾಗಿ ಗೋಡೆ ಗಡಿಯಾರವನ್ನು ಮಹಿಳಾ ಮಂಡಲದ ಗೌರವಾಧ್ಯಕ್ಷೆ ವೇದಾವತಿ ಶೆಟ್ಟಿಗೆ ಹಸ್ತಾಂತರಿಸಲಾಯಿತು. ಪಂಜ ಪ್ರಾಥಮಿಕ ಶಾಲೆಯ ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ಪದ್ಮನಾಭ ಪೂಜಾರಿ, ಯುವವಾಹಿನಿ ಮೂಲ್ಕಿ ಘಟಕದ ಪ್ರಧಾನ ಕಾರ್ಯದರ್ಶಿ ಕುಶಲಾ ಎಸ್. ಕುಕ್ಯಾನ್ ಉಪಸ್ಥಿತರಿದ್ದರು.
ಕುಶಲಾ ಎಸ್. ಕುಕ್ಯಾನ್ ಸ್ವಾಗತಿಸಿದರು. ಪತ್ರಕರ್ತ ನರೇಂದ್ರ ಕೆರೆಕಾಡು ಕಾರ್ಯಕ್ರಮ ನಿರೂಪಿಸಿ, ತಾರಾ ಶೆಟ್ಟಿ ವಂದಿಸಿದರು.

Comments

comments

Leave a Reply

Read previous post:
ಕೆರೆಕಾಡು ಪೈಪ್‌ಲೈನ್‌ಗೆ ಗುದ್ದಲಿ ಪೂಜೆ

Bhagyawan Sanil ಕಿನ್ನಿಗೋಳಿ: ಪಡುಪಣಂಬೂರು ಗ್ರಾಪಂ.ವ್ಯಾಪ್ತಿಯ ಕೆರೆಕಾಡು ಪೈಪ್‌ಲೈನ್ ವಿಸ್ತರಣೆ ಕಾಮಗಾರಿಯ ಗುದ್ದಲಿ ಪೂಜೆ ನೆರೆವೇರಿತು. ದ.ಕ. ಜಿಲ್ಲಾ ಪಂಚಾಯತ್ ಸದಸ್ಯರ ಅನುದಾನ ನಿಧಿಯಿಂದ ನಡೆಸಲಾಗುವ ಕಾಮಗಾರಿಯನ್ನು...

Close