ಉನ್ನತಿಯ ಬದಲು ವಿನಾಶ- RSS ಹಿರಿಯ ಪ್ರಚಾರಕ ಸೀತಾರಾಮ ಕೆದಿಲಾಯ

Bhagyawan Sanil

ಕಿನ್ನಿಗೋಳಿ: ಭಾರತ ಅನಾದಿಯಿಂದಲೂ ಆದ್ಯಾತ್ಮಿಕ ಮೌಲ್ಯಗಳೊಂದಿಗೆ ವೈಜ್ಞಾನಿಕ ನಿಲುವುಗಳನ್ನು ಸೇರಿಸಿಕೊಂಡು ಬೆಳೆದ ದೇಶವಾಗಿದೆ. ಇಂದು ಕೇವಲ ಧನ ಸಂಪತ್ತಿನ ಮೋಹದಿಂದ ಹೊರ ದೇಶಗಳಿಗೆ ವಲಸೆಹೋಗುತ್ತಿರುವ ನಮ್ಮ ಯುವ ಪೀಳಿಗೆ ಅನಾಗರೀಕರಾಗುತ್ತಿರುವುದು ಆಧುನೀಕತೆಯ ಕೊಡುಗೆಯಾಗಿದೆ ಅನ್ನ ಕೊಡುವ ನೆಲವನ್ನು ಅಭಿವೃದ್ಧಿಯ ಹೆಸರಿನಲ್ಲಿ ನಾಶ ಮಾಡುತ್ತಿರುವ ಪರಿಣಾಮ ಉನ್ನತಿಯ ಬದಲು ವಿನಾಶವನ್ನು ಕಾಣುತ್ತಿದ್ದೇವೆ ಈ ನಿಟ್ಟಿನಲ್ಲಿ ಸಮಗ್ರ ಭಾರತ ಕಾಲ್ನಡಿಗೆಯ ಪರಿಕ್ರಮದ ಮೂಲಕ ಜನರಲ್ಲಿ ಹೊಸ ಚಿಂಥನೆಯನ್ನು ಮೂಡಿಸಲು ಯತ್ನಿಸುತ್ತಿದ್ದೇನೆ ಇದಕ್ಕಾಗಿ ಎಲ್ಲ ಧರ್ಮದ ಮಠ ಮಂದಿರಗಳ ಗುರುಗಳು ಹಾಗೂ ಸ್ವಾಮೀಜಿಗಳನ್ನು ಭೇಟಿಯಾಗಿ ಅವರ ಸಲಹೆ ಪಡೆಯುತ್ತಿದ್ದೇನೆ ಮಾತ್ರವಲ್ಲ ಅವರು ಗ್ರಾಮ ಮಟ್ಟದಲ್ಲಿ ಅಭ್ಯುದಯಕ್ಕಾಗಿ ತೊಡಗಿಸಿಕೊಳ್ಳಲು ಒಪ್ಪಿದ್ದಾರೆ ಎಂದರು. ಸಂಘಟಿತ ಬಲಿಷ್ಠ ಭಾರತ ನಿರ್ಮಾಣಕ್ಕಾಗಿ ಜಾತಿ ಮತ ಧರ್ಮಗಳ ಏಕೀಕರಣ ನಿಲುವಿನೊಂದಿಗೆ ನೆಲ,ಜಲ,ವನ,ಜನ,ಜೀವ ಜಂತುಗಳ ಉನ್ನತಿ ಹಾಗೂ ಸ್ವಾವಲಂಭಿ ಬದುಕಿಗಾಗಿ ಗ್ರಾಮೀಣ ಜನ ಜೀವನದಲ್ಲಿ ಕೃಷಿ ಔನತ್ಯಕ್ಕಾಗಿ ಪ್ರತೀ ಗ್ರಾಮ ಮಟ್ಟದಲ್ಲಿ ಉಪ ಸಮಿತಿಗಳನ್ನು ರಚಿಸುವ ಮೂಲಕ ಸಮಗ್ರ ಭಾರತ ಪರಿಕ್ರಮ ಯಾತ್ರೆ ಹಮ್ಮಿಕೊಂಡಿದ್ದೇನೆ ಎಂದು RSS ಹಿರಿಯ ಪ್ರಚಾರಕರಾದ ಸೀತಾರಾಮ ಕೆದಿಲಾಯ ಹೇಳಿದರು.
ಕಿನ್ನಿಗೋಳಿ ಸಂತ ಜೂದರ ಯಾತ್ರಿಕ ಕೇಂದ್ರದ ಪಕ್ಷಿಕೆರೆ ಸಂತ ಜೂದರ ಪುಣ್ಯ ಕ್ಷೇತ್ರದ ಧರ್ಮಗುರುಗಳಾದ ಫಾ.ಆಂಡ್ರು ಲಿಯೋ ಡಿಸೋಜಾರವರು ಸೀತಾರಾಮ ಕೆದಿಲಾಯರವರನ್ನು ಭೇಟಿಮಾಡಿ ಅವರ ಕಾರ್ಯದ ಬಗ್ಗೆ ಸಮಗ್ರ ಮಾಹಿತಿ ಪಡೆದು ಅವರನ್ನು ಅಭಿನಂಧಿಸಿದರು. ಈ ಸಂದರ್ಭಫಾ.ಆಂಡ್ರು ಲಿಯೋ ಡಿಸೋಜಾರವರನ್ನು ಗೌರವಿಸಲಾಯಿತು. ಮುಂಜಾನೆ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಮಣ್ಯ ದೇವಸ್ಥಾನದ ಬಳಿ ಯಾತ್ರೆಯನ್ನು ಶ್ರೀ ಕ್ಷೇತ್ರ ಬಾಳೆಕುದ್ರು ಇಲ್ಲಿನ ಶ್ರೀ ನರಸಿಂಹಾಶ್ರಮ ಸ್ವಾಮೀಜಿ ಮತ್ತು ಪೂರ್ವೋತ್ತರ ಮೀಮಾಂಸಕ ಬ್ರಹ್ಮಶ್ರೀ ಕೆ.ಎಸ್ ನಿತ್ಯಾನಂದ ರವರ ನೇತ್ರತ್ವದಲ್ಲಿ ಹಳೆಯಂಗಡಿ ನಾಗರೀಕರು ಭಾರತ ಪರಿಕ್ರಮ ಯಾತ್ರೆಯ ಸದಸ್ಯರನ್ನು ಸ್ವಾಗತಿಸಿದರು. ಸಂಜೆ ಗ್ರಾಮ ಭೇಟಿಯಲ್ಲಿ ಬೊಳ್ಳೂರು ಮಸೀದಿಗೆ ಭೇಟಿ ಸ್ಥಳಿಯ ಮನೆಗಳಿಗೆ ಭೇಟಿನೀಡಲಾಯಿತು ಸಂಜೆ ಭಜನೆ ಮತ್ತು ಸತ್ಸಂಗ ಕಾರ್ಯಕ್ರಮಗಳು ನಡೆದವು.

Comments

comments

Leave a Reply

Read previous post:
ಹೋಮಿಯೋಪತಿ ಚಿಕಿತ್ಸೆಯಿಂದ ಶಾಶ್ವತ ಪರಿಹಾರ

Narendra Kerekadu ಕಿನ್ನಿಗೋಳಿ: ಹಳೆಯಂಗಡಿ ಬಳಿಯ ಪಕ್ಷಿಕೆರೆಯ ಪಂಜದ ನವಜ್ಯೋತಿ ಮಹಿಳಾ ಮಂಡಲದ ಸಭಾಂಗಣದಲ್ಲಿ ಹೋಮಿಯೋ ಪದ್ಧತಿಯ ಮಾಹಿತಿ ಶಿಬಿರನಡೆಯಿತು. ಮಂಗಳೂರಿನ ನೆಹರು ಯುವಕಾರ್ಯ ಮತ್ತು ಕ್ರೀಡಾ...

Close