ಪಕ್ಷಿಕೆರೆ ಸಂತ ಜೂದರ ಚರ್ಚ್ ವಾರ್ಷಿಕ ಮಹೋತ್ಸವ

ಕಿನ್ನಿಗೋಳಿ: ಪಕ್ಷಿಕೆರೆ ಸಂತ ಜೂದರ ಚರ್ಚ್ ಮತ್ತು ಯಾತ್ರಿಕ ಕೇಂದ್ರದ ವಾರ್ಷಿಕ ಮಹೋತ್ಸವ ಭಾನುವಾರ ನಡೆಯಿತು.
ಮಂಗಳೂರು ಧರ್ಮ ಪ್ರಾಂತ್ಯ ಬಿಷಪ್ ಡಾ| ಎಲೋಶಿಯಸ್ ಪಾವ್ಲ್ ಡಿ’ಸೋಜ, ಬಿಷಪ್ ಹೌಸ್‌ನ ಪಿ. ಆರ್.ಓ. ಫಾ| ವಿಲಿಯಂ ಮಿನೇಜಸ್, ಕಿನ್ನಿಗೋಳಿ ವಲಯ ಚರ್ಚ್ ಪ್ರಧಾನ ಧರ್ಮಗುರು ಫಾ| ಆಲ್ಫ್ರೆಡ್ ಪಿಂಟೋ, ಎಸ್.ವಿ.ಡಿ. ಸಹಿತ ವಿವಿಧ ಇಗರ್ಜಿಗಳ ಧರ್ಮಗುರುಗಳು ವಾರ್ಷಿಕ ಹಬ್ಬದ ದಿವ್ಯ ಬಲಿ ಪೂಜೆಯಲ್ಲಿ ಭಾಗವಹಿಸಿದ್ದರು.
ಈ ಸಂದರ್ಭ ವಾರ್ಷಿಕ ಹಬ್ಬದ ಮಹಾ ಪೋಷಕರಾದ ದಿ| ಆಲ್ಬರ್ಟ್ ಹಾಗೂ ಸಿಪ್ರಿಯನ್ ಕರ್ನೇಲಿಯೋ ಕಲ್ಯಾಣ್‌ಪುರ ಉಡುಪಿ, ಜೋನ್ ಕರ್ನೇಲಿಯೋ, ಸಿಸಿಲಿಯೋ, ಪ್ಲೊಸ್ಸಿ ಕರ್ನೇಲಿಯೊ ಹಾಗೂ ವಿಶೇಷ ದಾನ ನೀಡಿದ ದಾನಿಗಳನ್ನು ಬಿಷಪ್‌ರು ಗೌರವಿಸಿದರು.
ಪಕ್ಷಿಕೆರೆ ಚರ್ಚ್‌ನಲ್ಲಿ ನೂತನವಾಗಿ ನಿರ್ಮಾಣವಾಗುವ ಸಭಾಭವನಕ್ಕೆ ಶಿಲಾನ್ಯಾಸ, ನೂತನ ಸಂತ ಜೂದರ ಬೆಳ್ಳಿಯ ಪ್ರತಿಮೆ ಅನಾವರಣ ಹಾಗೂ ಚರ್ಚಿನ ಯಾತ್ರಿಕ್ ಸಂಚಿಕೆಯನ್ನು ಬಿಷಪ್ ಬಿಡುಗಡೆಗೊಳಿಸಿದರು.
ಪಕ್ಷಿಕೆರೆ ಚರ್ಚ್ ಧರ್ಮಗುರು ಫಾ| ಆಂಡ್ರು ಲಿಯೋ ಡಿ’ಸೋಜ, ಸಹಾಯಕ ಧರ್ಮಗುರು ಫಾ| ಸುನಿಲ್ ಪ್ರವೀಣ್ ಪಿಂಟೋ, ಚರ್ಚ್ ಉಪಾಧ್ಯಕ್ಷ ಡೋಲ್ಫಿ ಮಿರಾಂದಾ, ಕಾರ್ಯದರ್ಶಿ ಲೂಸಿ ಡಿಸೋಜ ಉಪಸ್ಥಿತರಿದ್ದರು.

Comments

comments

Leave a Reply

Read previous post:
ಬಿಜೆಪಿ ಮಹಿಳಾ ಮೋರ್ಚಾದಿಂದ ಆಶ್ರಮದ ಮಕ್ಕಳಿಗೆ ಅಕ್ಕಿ- ಬೇಳೆಕಾಳು ಕೊಡುಗೆ

ಕಿನ್ನಿಗೋಳಿ: ಸಹೋದರಿ ನಿವೇದಿತಾ ಜಯಂತಿ ಅಂಗವಾಗಿ ಭಾರತೀಯ ಜನತಾ ಪಾರ್ಟಿ ಮಹಿಳಾ ಮೋರ್ಚಾ ಮೂಲ್ಕಿ- ಮೂಡಬಿದ್ರೆ ಮಂಡಲದ ವತಿಯಿಂದ ಭಾನುವಾರ ಕಟೀಲು ಬಲ್ಲಣದ ಪ್ರೀತಿ ಸದನದ ಅನಾಥ ಆಶ್ರಮದ...

Close