ಶಾಂತಿ ಪಲ್ಕೆ ದೈವಸ್ಥಾನಕ್ಕೆ ಆರಾಧನಾ ಯೋಜನೆಯ ಕೊಡುಗೆ

ಕಿನ್ನಿಗೋಳಿ: ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಟ್ಟ ಶಾಂತಿ ಪಲ್ಕೆ ಶ್ರೀ ಬ್ರಹ್ಮ ಮುಗೇರ ಮಹಾಕಾಳಿ ದೈವಸ್ಥಾನಕ್ಕೆ ಕರ್ನಾಟಕ ಸರಕಾರ ಆರಾಧನಾ ಯೋಜನೆಯಡಿಯಲ್ಲಿ ಮಂಜೂರಾದ 50 ಸಾವಿರ ರೂ. ಚೆಕ್‌ನ್ನು ಮುಲ್ಕಿ-ಮೂಡಬಿದರೆ ಶಾಸಕ ಅಭಯಚಂದ್ರ ಜೈನ್ ದೈವಸ್ಥಾನಕ್ಕೆ ಹಸ್ತಾಂತರಿಸಿದರು.
ಮುಂದಿನ ಸರಕಾರದ ಅನುದಾನದಲ್ಲಿ ದೈವಸ್ಥಾನದ ಪ್ರಾಂಗಣಕ್ಕೆ ಸುಮಾರು ಒಂದು ಲಕ್ಷ ವೆಚ್ಚದಲ್ಲಿ ಇಂಟರ್ ಲಾಕ್ ಹಾಗೂ ಶಾಂತಿ ಪಲ್ಕೆ ರಸ್ತೆಗೆ 15 ಲಕ್ಷ ರೂ. ವೆಚ್ಚದಲ್ಲಿ ಡಾಮಾರೀಕರಣ ಹಾಗೂ ಶಾಂತಿಪಲ್ಕೆ – ಗೋಳಿಜೋರಾ ರಸ್ತೆಯ ತೇರಗುರಿ ಎಂಬಲ್ಲಿ ಹೊಳೆಗೆ ಸೇತುವೆ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.

ಶಾಂತಿ ಪಲ್ಕೆ ಶ್ರೀ ಬ್ರಹ್ಮ ಮುಗೇರ ಮಹಾಕಾಳಿ ದೈವಸ್ಥಾನದ ಗೌರವಾಧ್ಯಕ್ಷ ಶೇಷರಾಮ ಶೆಟ್ಟಿ, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವಪ್ರಸಾದ್ ಪುನರೂರು, ಜಿ.ಪಂ. ಸದಸ್ಯೆ ಆಶಾ ಆರ್. ಸುವರ್ಣ, ಸಂತಾನ್ ಡಿಸೋಜ, ಹರೀಶ್ ಅಂಚನ್ ಬರ್ಕೆ, ಫಿಲೋಮಿನಾ, ಸುಜಾತಾ, ಉಮೇಶ್ ಕೋಟ್ಯಾನ್, ಜೊಸ್ಸಿಪಿಂಟೊ, ತುಕ್ರ ಗುರಿಕಾರ, ಒಮು ಗುರಿಕಾರ, ಲೋಕೇಶ್, ಪ್ರಕಾಶ್ ಆಚಾರ್, ಸಂತೋಷ್ ಮತ್ತಿತರರ ಉಪಸ್ಥಿತರಿದ್ದರು.

 

Comments

comments

Leave a Reply

Read previous post:
ಪಕ್ಷಿಕೆರೆ ಸಂತ ಜೂದರ ಚರ್ಚ್ ವಾರ್ಷಿಕ ಮಹೋತ್ಸವ

ಕಿನ್ನಿಗೋಳಿ: ಪಕ್ಷಿಕೆರೆ ಸಂತ ಜೂದರ ಚರ್ಚ್ ಮತ್ತು ಯಾತ್ರಿಕ ಕೇಂದ್ರದ ವಾರ್ಷಿಕ ಮಹೋತ್ಸವ ಭಾನುವಾರ ನಡೆಯಿತು. ಮಂಗಳೂರು ಧರ್ಮ ಪ್ರಾಂತ್ಯ ಬಿಷಪ್ ಡಾ| ಎಲೋಶಿಯಸ್ ಪಾವ್ಲ್ ಡಿ’ಸೋಜ, ಬಿಷಪ್...

Close