ಇಂದಿರಾ ಗಾಂಧಿಯವರ ಆದರ್ಶ ಅನುಕರಣೀಯ : ಕೆ. ಅಭಯಚಂದ್ರ

20 ಅಂಶಗಳ ಕಾರ್ಯಕ್ರಮಗಳ ಅನುಷ್ಠಾನದೊಂದಿಗೆ ಮಹಿಳೆಯರ ಸಬಲೀಕರಣ ಮತ್ತು ದೀನದಲಿತರ ಅಭಿವೃದ್ಧಿಯನ್ನು ಮಾಡಿದ ದಿವಂಗತ ಇಂದಿರಾ ಗಾಂಧಿಯವರ ಆದರ್ಶ ಅನುಕರಣೀಯ ಎಂದು ಕರ್ನಾಟಕ ಸರಕಾರದ ವಿಪಕ್ಷ ಮುಖ್ಯ ಸಚೇತಕರಾದ ಕೆ. ಅಭಯಚಂದ್ರ ನುಡಿದರು. ಅವರು ಮುಲ್ಕಿ ಬ್ಲಾಕ್ ಕಾಂಗ್ರೇಸ್‌ನ ಮಹಿಳಾ ವಿಭಾಗದ ನೇತತ್ವದಲ್ಲಿ ನಡೆದ ದಿವಗಂತ ಇಂದಿರಾ ಗಾಂಧಿಯವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಸರೋಜಿನಿ ಸುವರ್ಣ ವಹಿಸಿದ್ದರು. ಕಾರ್ಯಕ್ರಮದಲ್ಲಿ ನಿಕಟಪೂರ್ವ ಅಧ್ಯಕ್ಷೆ ಮನೋರಮ ಹೆನ್ರಿ, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಎಚ್. ವಸಂತ್ ಬೆರ್ನಾರ್ಡ್, ಮಾಜಿ ನಗರ ಪಂಚಾಯತ್ ಅಧ್ಯಕ್ಷೆ ಸೆಲಿನ್ ಮೊಂತೆರೋ, ಪಂಚಾಯತ್ ಸದಸ್ಯರಾದ ಹರಿಣಿ ಸುಂದರ್, ಸುಮತಿ, ಸುಜಾತ ವಾಸುದೇವ್, ಪದ್ಮಾವತಿ ಶೆಟ್ಟಿ, ಮಾಜಿ ಸದಸ್ಯರಾದ ಇಂದಿರಾ ದೇಜಪ್ಪ, ಇಂದಿರಾ ಸಿ. ಅಮೀನ್, ವತ್ಸಲಾ ಬಂಗೇರ, ಪ್ರೇಮ ಕರ್ಕಡ, ನಂದಾ ಪಾಯಿಸ್, ಶೈನಾಜ್ ಶರೀಫ್, ಶಶಿಕಲಾ ಯದೀಶ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಪೂರ್ಣಿಮಾ ಮಧುಸೂಧನ್ ವಂದಿಸಿದ್ದರು.

Comments

comments

Leave a Reply

Read previous post:
ವೊವಿಯೊ-ವರ್ಸ ಕಾರ್ಯಗಾರ

ಗೋವಾದಿಂದ ಕೊಚ್ಚಿಯವರೆಗಿನ ತೀರ ಪ್ರದೇಶದ ಬಹುಸಂಖ್ಯಾತರ ಮಾತೃಭಾಷೆಯಾದ ಕೊಂಕಣಿ ಭಾಷೆಯು ರಾಷ್ಟೀಯ ಭಾವೈಕ್ಯತೆಯ ಪ್ರತೀಕ, ಕೊಂಕಣಿ ಮಾತೃ ಭಾಷೆ ಹೊಂದಿರುವ 42ಸಮುದಾಯಗಳಿದ್ದು ಅವರ ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಕರ್ನಾಟಕ...

Close