ವೊವಿಯೊ-ವರ್ಸ ಕಾರ್ಯಗಾರ

ಗೋವಾದಿಂದ ಕೊಚ್ಚಿಯವರೆಗಿನ ತೀರ ಪ್ರದೇಶದ ಬಹುಸಂಖ್ಯಾತರ ಮಾತೃಭಾಷೆಯಾದ ಕೊಂಕಣಿ ಭಾಷೆಯು ರಾಷ್ಟೀಯ ಭಾವೈಕ್ಯತೆಯ ಪ್ರತೀಕ, ಕೊಂಕಣಿ ಮಾತೃ ಭಾಷೆ ಹೊಂದಿರುವ 42ಸಮುದಾಯಗಳಿದ್ದು ಅವರ ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಕರ್ನಾಟಕ ರಾಜ್ಯ ಸರಕಾರ ಕೊಂಕಣಿ ಅಕಾಡಮಿಯ ಮೂಲಕ ಇಂತಹ ಕಾರ್ಯಗಾರಗಳನ್ನು ನಡೆಸಲು ಪೋತ್ಸಾಹಿಸುತ್ತಿದೆ. ಎಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಸದಸ್ಯ ರಾಜಾರಾಮ್ ನಾಯಕ್‌ರವರು ಮೂಡಬಿದ್ರೆ ಕೊರ‍್ಪೊಸ್ ಕ್ರಿಸ್ತಿ ಇಗರ್ಜಿಯ ಸಭಾಂಗಣದಲ್ಲಿ ಭಾನುವಾರ ಜರಗಿದ ಕೊಂಕಣಿ ಜಾನಪದ ವೊವಿಯೊ-ವೇರ‍್ಸ್ ಕಾರ್ಯಗಾರದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಗಾರ ಉದ್ಘಾಟಿಸಿ ಮಾತನಾಡಿದ ಇಗರ್ಜಿಯ ಧರ್ಮ ಗುರು ವೆ.ರೆ. ಆಸ್ಟಿನ್ ಪೆರೀಸ್ ರವರು ಸಮಾಜದಲ್ಲಿ ಸಂಪ್ರದಾಯ ಬದ್ದವಾಗಿ ಬೆಳೆದು ಬಂದ ಅನುಷ್ಠಾನಗಳು ಇಂದು ನಶಿಸುತ್ತಿವೆ. ಅದಕ್ಕೆ ಇಂತಹ ಕಾರ್ಯಗಾರಗಳನ್ನು ನಡೆಸಿ ಪೋತ್ಸಾಹಿಸುವುದು ಅಗತ್ಯವಿದೆ ಎಂದರು. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿ ಮತ್ತು ಮಾಟೊವ್ ಮಂಗ್ಳುರ್ ಇವರ ಸಹಯೋಗದಲ್ಲಿ ಕೊಂಕಣಿ ಸಂಸ್ಕೃತಿಯ ಜಾನಪದ ಹಾಡುಗಳಾದ ವೊವಿಯೊ-ವೇರ‍್ಸ್ ಕಾರ್ಯಗಾರವನ್ನು ಮೂಡಬಿದ್ರೆ ಇಗರ್ಜಿಯ ಕಥೊಲಿಕ್ ಸಭಾ ಮತ್ತು ಸ್ತ್ರೀ ಸಂಘಟನೆಗಳು ಆಯೋಜಿಸಿದ್ದವು.
ಸಂಪನ್ಮೂಲ ವ್ಯಕ್ತಿಗಳಾದ ಮಟೊವ್ ಮಂಗ್ಳುರ್ ಇದರ ಅಧ್ಯಕ್ಷ್ಷ ಶ್ರೀ. ಶ್ರೀ ಜೇಮ್ಸ್ ಡಿಸೋಜ, ಶ್ರೀಮತಿ ರೀನಾ ಡಿಸೋಜ ಮತ್ತು ಶ್ರೀಮತಿ ಸೆರ್ವಿನ್ ಲೋಬೋ ಕಾರ್ಯಗಾರವನ್ನು ನಡೆಸಿದರು. ಕಾರ್ಯಕ್ರಮ ಸರ್ವರ ಮನ ಗೆಲ್ಲುವಂತಿತ್ತು. ಮೂಡಬಿದ್ರೆ ವಾರಾಡೊ ಹಂತದಲ್ಲಿ ನಡೆದ ಈ ಶಿಬಿರದಲ್ಲಿ ಮೂಡಬಿದ್ರೆ ಹಾಗೂ ಪರಿಸರದ ಇಗರ್ಜಿಗಳಿಂದ ಬಂದ ಶಿಬಿರಾರ್ಥಿಗಳು ಇದರ ಪ್ರಯೋಜನವನ್ನು ಪಡೆದರು.
ಚರ್ಚ್ ಉಪಾಧ್ಯಕ್ಷರಾದ ಶ್ರೀ ಜೊಸ್ಸಿ ಮೆನೆಜಸ್, ಸ್ತ್ರೀ ಸಂಘಟನೆಯ ಘಟಕ ಅಧ್ಯಕ್ಷೆ ಶ್ರೀಮತಿ ಜೂಡಿತ್ ಫೆರ್ನಾಂಡಿಸ್ ವೇದಿಕೆಯಲ್ಲಿದ್ದರು. ಕಥೊಲಿಕ್ ಸಭಾ ವಾರಾಡೊ ಅಧ್ಯಕ್ಷೆ ಶ್ರೀಮತಿ ರೀನಾ ಪಿಂಟೊ ಸ್ವಾಗತಿಸಿದರು. ಸ್ತ್ರೀ ಸಂಘಟನೆ ವಾರಾಡೊ ಅಧ್ಯಕ್ಷೆ ಶ್ರೀಮತಿ ಡೊರಿನ್ ಸಿಕ್ವೇರಾ ವಂದಿಸಿದರು. ಶ್ರೀ ಜೊಸೆಫ್ ಮೊಂತೆರೊ ಕಾರ್ಯ ನಿರ್ವಹಿಸಿದರು.

 

Comments

comments

Leave a Reply

Read previous post:
ಶಾಂತಿ ಪಲ್ಕೆ ದೈವಸ್ಥಾನಕ್ಕೆ ಆರಾಧನಾ ಯೋಜನೆಯ ಕೊಡುಗೆ

ಕಿನ್ನಿಗೋಳಿ: ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಟ್ಟ ಶಾಂತಿ ಪಲ್ಕೆ ಶ್ರೀ ಬ್ರಹ್ಮ ಮುಗೇರ ಮಹಾಕಾಳಿ ದೈವಸ್ಥಾನಕ್ಕೆ ಕರ್ನಾಟಕ ಸರಕಾರ ಆರಾಧನಾ ಯೋಜನೆಯಡಿಯಲ್ಲಿ ಮಂಜೂರಾದ 50 ಸಾವಿರ ರೂ. ಚೆಕ್‌ನ್ನು...

Close