ಕಿನ್ನಿಗೋಳಿ : ವೃತ್ತಿಪರ ಮಾಸಚರಣೆ

ಕಿನ್ನಿಗೋಳಿ: ವೃತ್ತ್ತಿಯ ಬಗ್ಗೆ ಕೀಳರಿಮೆ ಸಲ್ಲದು, ವೃತ್ತಿಯನ್ನು ನಿಷ್ಠೆ ಪ್ರಾಮಾಣಿಕತೆಯಿಂದ ಪರಿಗಣಿಸಿದರೆ ಮಾತ್ರ ಬದುಕು ಸಾರ್ಥಕ ಎಂದು ರೋಟರಿ ಜಿಲ್ಲೆ ೩೧೮೦ ರ ವೃತ್ತಿ ಸೇವೆ ಉಪ-ಸಭಾಪತಿ ವಿದ್ಯಾಧರ ಪುರಾಣಿಕ್ ಹೇಳಿದರು. ಕಿನ್ನಿಗೋಳಿ ರೋಟರಿ ಕ್ಲಬ್ ಮಂಗಳವಾರ ಸಹಕಾರ ಸೌಧದಲ್ಲಿ ಆಯೋಜಿಸಿದ ವೃತ್ತಿಪರ ಮಾಸಚರಣೆ ಹಾಗೂ ವೃತ್ತಿಪರ ಸನ್ಮಾನ ಮಾರಂಭದಲ್ಲಿ ಅವರು ಮಾತನಾಡಿದರು. ದೇವಸ್ಥಾನ ಹಾಗೂ ದೈವಸ್ಥಾನಗಳ ಕಾಷ್ಠ ಶಿಲ್ಪಿ ಎಕ್ಕಾರು ಅಚ್ಯುತ ಆಚಾರ್ಯ, ರಿಕ್ಷಾ ವೃತ್ತಿಯ ಜೇಮ್ಸ್ ಮಾರ್ಟಿಸ್ ಮೂರುಕಾವೇರಿ, ಪ್ರಗತಿ ಪರ ಕೃಷಿಕ ಮೂಡು ದೇವಸ್ಯ ಜಗನ್ನಾಥ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಕಿನ್ನಿಗೋಳಿ ರೋಟರಿ ಅಧ್ಯಕ್ಷ ಕಳ್ಳಿಗೆ ಬಾಲಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಲಯ ಸೇನಾನಿ ರತ್ನಾಕರ ಶೆಟ್ಟಿ ರೋಟರಿ ಮುಖವಾಣಿ “ಸಿಂಚನ” ಬಿಡುಗಡೆಗೊಳಿಸಿದರು, ಜಯರಾಮ ಪೂಂಜಾ ಸ್ವಾಗತಿಸಿ ಪ್ರಸ್ತಾವನೆಗೈದರು. ಜೆರೋಮ್ ಮೋರಾಸ್ ವಂದಿಸಿದರು. ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಇಂದಿರಾ ಗಾಂಧಿಯವರ ಆದರ್ಶ ಅನುಕರಣೀಯ : ಕೆ. ಅಭಯಚಂದ್ರ

20 ಅಂಶಗಳ ಕಾರ್ಯಕ್ರಮಗಳ ಅನುಷ್ಠಾನದೊಂದಿಗೆ ಮಹಿಳೆಯರ ಸಬಲೀಕರಣ ಮತ್ತು ದೀನದಲಿತರ ಅಭಿವೃದ್ಧಿಯನ್ನು ಮಾಡಿದ ದಿವಂಗತ ಇಂದಿರಾ ಗಾಂಧಿಯವರ ಆದರ್ಶ ಅನುಕರಣೀಯ ಎಂದು ಕರ್ನಾಟಕ ಸರಕಾರದ ವಿಪಕ್ಷ ಮುಖ್ಯ...

Close