ಶ್ರೀ ದುರ್ಗಾ ಮಕ್ಕಳ ಮೇಳ ವಾರ್ಷಿಕೋತ್ಸವ ಉದ್ಘಾಟನೆ

ಕಟೀಲು : ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳ ನಾಲ್ಕು ವರ್ಷಗಳನ್ನು ಪೂರೈಸಿದ ಹಿನ್ನಲೆಯಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಮಕ್ಕಳ ತೆಂಕುತಿಟ್ಟು ಯಕ್ಷಗಾನ ಬಯಲಾಟ ಪ್ರದರ್ಶನ ಶನಿವಾರ ಮಕ್ಕಳ ಮೇಳದ ಅಧ್ಯಕ್ಷ ಶ್ರೀಹರಿನಾರಾಯಣದಾಸ ಆಸ್ರಣ್ಣ ಉದ್ಘಾಟಿಸಿದರು.
ಗಿರೀಶ್ ಎಂ.ಶೆಟ್ಟಿ, ರಾಘವೇಂದ್ರ ಆಚಾರ್ಯ ಬಜಪೆ, ಕಟೀಲು ಕಾಲೇಜು ಪ್ರಾಚಾರ್ಯ ಬಾಲಕೃಷ್ಣ ಎಂ.ಶೆಟ್ಟಿ, ದಯಾನಂದ ಮಾಡ ಉಪಸ್ಥಿತರಿದ್ದರು. ವಾಸುದೇವ ಶೆಣೈ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಕದ್ರಿ ಬಾಲ ಯಕ್ಷ ಕೂಟದವರು ವಿದ್ಯುನ್ಮತಿ ಕಲ್ಯಾಣವನ್ನು, ಕುಕ್ಕಾಜೆ ಪ್ರಗತಿ ಪ್ರೌಢಶಾಲೆಯ ಮಕ್ಕಳು ಗರುಡ ಗರ್ವಭಂಗವನ್ನು ಪ್ರದರ್ಶಿಸಿದರು.

ಭಾನುವಾರ ದಿನವಿಡೀ ಮಕ್ಕಳ ಯಕ್ಷಗಾನ ಬಯಲಾಟ ನಡೆಯಲಿದ್ದು, ಬೆಳಿಗ್ಗೆ ಸಜಿಪ ಮುನ್ನೂರು ಚಿಣ್ಣರಲೋಕ ಸೇವಾ ಟ್ರಸ್ಟ್‌ನ ಕಲಾವಿದರು ಶಶಿಪ್ರಭಾ ಪರಿಣಯ, ಮಂಜನಾಡಿ ದುರ್ಗಾಪರಮೇಶ್ವರೀ ಕೃಪಾಶ್ರಿತ ಯಕ್ಷಕಲಾ ಕೇಂದ್ರದವರು ಅಂಧಕಾಸುರ ಮೋಕ್ಷ, ಕಳಸ ಹಳ್ಳುವಳ್ಳಿಯ ಶ್ರೀ ಕುಮಾರ ಸಾಂಸ್ಕೃತಿಕ ಪ್ರತಿಷ್ಟಾನದವರು ಸುದರ್ಶನ ವಿಜಯವನ್ನು, ಕುರ್ನಾಡು ದತ್ತಾತ್ರೇಯ ಯಕ್ಷಗಾನ ಮಂಡಳಿಯ ಮಕ್ಕಳು ಸುಧನ್ವಾರ್ಜುನ ಯಕ್ಷಗಾನವನ್ನು ಪ್ರದರ್ಶಿಸಲಿದ್ದಾರೆ.
ಕಟೀಲು ರಥಬೀದಿಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಟಿ.ಶ್ಯಾಮ್ ಭಟ್, ಅಂಬಲಪಾಡಿಯ ನಿ.ಬೀ.ವಿಜಯ ಬಲ್ಲಾಳ, ಸಾಂಸದ ನಳಿನ್ ಕುಮಾರ್, ಶಾಸಕ ಅಭಯಚಂದ್ರ ಜೈನ್, ಮಾಲಾಡಿ ಅಜಿತ್ ಕುಮಾರ್ ರೈ ಮಾಲಾಡಿ, ಜಗದೀಪ್ ಸುವರ್ಣ, ಮುಂಬೈ ಚಂದ್ರಶೇಖರ ಬೆಳ್ಚಡ, ಕಟೀಲಿನ ಆಸ್ರಣ್ಣ ಬಂಧುಗಳ ಉಪಸ್ಥಿತಿಯಲ್ಲಿ ಯಕ್ಷಗಾನ ಕಲಾವಿದ ದಾಸನಡ್ಕ ರಾಮ ಕುಲಾಲ್, ಯುವ ಛಾಂದಸ ಗಣೇಶ ಕೊಲೆಕಾಡಿ ಹಾಗೂ ಯಕ್ಷಗಾನ ತರಗತಿಯ ಗುರುಗಳನ್ನು ಸಂಮಾನಿಸಲಾಗುವುದು. ಇದೇ ಸಂದರ್ಭ ಯಕ್ಷಗಾನ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಗುವುದು. ಬಳಿಕ ದುರ್ಗಾ ಮಕ್ಕಳ ಮೇಳದ ಕಲಾವಿದರಿಂದ ಶ್ರೀ ಕೃಷ್ಣ ಲೀಲೆ ನಡೆಯಲಿದೆ.

Comments

comments

Leave a Reply

Read previous post:
ಉದಯ ಕುಮಾರ ಹಬ್ಬುಕೃತಿ ಬಿಡುಗಡೆ

Yugapurusha Kinnigoli ಕಿನ್ನಿಗೋಳಿ : ಸರಕಾರ ಹಾಗೂ ಪರಿಷತ್ತಿನ ಸಹಕಾರವಿಲ್ಲದೆ ಅಥವಾ ಹಣಕ್ಕಾಗಿ ಕಾಯದೆ ಪುಸ್ತಕ ಪ್ರಕಟಿಸುತ್ತಿರುವ ಪ್ರಕಾಶಕರು ಸ್ತುತ್ಯಾರ್ಹರೆಂದು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಪುಂಡಲೀಕ...

Close