ಉದಯ ಕುಮಾರ ಹಬ್ಬುಕೃತಿ ಬಿಡುಗಡೆ

Yugapurusha Kinnigoli

ಕಿನ್ನಿಗೋಳಿ : ಸರಕಾರ ಹಾಗೂ ಪರಿಷತ್ತಿನ ಸಹಕಾರವಿಲ್ಲದೆ ಅಥವಾ ಹಣಕ್ಕಾಗಿ ಕಾಯದೆ ಪುಸ್ತಕ ಪ್ರಕಟಿಸುತ್ತಿರುವ ಪ್ರಕಾಶಕರು ಸ್ತುತ್ಯಾರ್ಹರೆಂದು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಪುಂಡಲೀಕ ಹಾಲಂಬಿ ಹೇಳಿದರು.
ಅವರು ಶನಿವಾರ ಯುಗಪುರುಷ ಸಭಾಭವನದಲ್ಲಿ ಯುಗಪುರುಷದ ನೇತೃತ್ವದಲ್ಲಿ ಬೆಂಗಳೂರಿನ ಬಸವನ ಗುಡಿಯ ಕೌಸ್ತುಭ ಪ್ರಕಾಶನ ಮತ್ತು ಯುಗಪುರುಷ ಪ್ರಕಟಣಾಲಯದ ಸಂಯುಕ್ತ ಆಶ್ರಯದಲ್ಲಿ ಕಿನ್ನಿಗೋಳಿಯ ಅಭಿಷೇಕದ ಉದಯ ಕುಮಾರ ಹಬ್ಬುರವರ “ಅಳಿದ ಮೇಲೆ” ಮತ್ತು “ಮೊದಲ ಕಲ್ಲು” ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.
ರಾಜ್ಯದ ಮೂಲೆ ಮೂಲೆಗಳಲ್ಲಿ ಸಾಹಿತ್ಯಿಕವಾಗಿ ಸೇವೆ ಸಲ್ಲಿಸುತ್ತಿರುವ ಅಸಂಖ್ಯಾತ ಸಾಹಿತಿಗಳು ಮತ್ತು ಪ್ರಕಾಶಕರನ್ನು ಸರಕಾರ ಮತ್ತು ಸಾಹಿತ್ಯ ಪರಿಷತ್ ಪ್ರೆತ್ಸಾಹಿಸಬೇಕಾಗಿದೆಯೆಂದ ಅವರು ಏಳು ದಶಕಗಳಿಂದ ಸಾಹಿತ್ಯಿಕ ಸೇವೆ ಸಲ್ಲಿಸುತ್ತಿರುವ ಯುಗಪುರುಷ ಸಂಸ್ಥೆಯನ್ನು ಶ್ಲಾಘಿಸಿದರು. ಉದಯಕುಮಾರ ಹಬ್ಬುರವರಿಂದ ಇನ್ನಷ್ಟು ಮೌಲ್ಯಯುತವಾದ ಕೃತಿಗಳು ಪ್ರಕಟವಾಗಲಿ ಎಂದು ಹಾರೈಸಿದರು.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜಾಧ್ಯಕ್ಷ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದು, ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ, ಸಾಹಿತಿ ಕೆ.ಜಿ. ಮಲ್ಯ, ಬೆಂಗಳೂರಿನ ರಾಜೀವಲೋಚನ, ಅಂಕೋಲದ ನಿವೃತ್ತ ಪ್ರಾಚಾರ‍್ಯ ಮೋಹನ ಹಬ್ಬು, ಮೌಲ್ಯ ಜೀವನ್‌ರಾಮ್, ಉಡುಪಿಯ ಉಪೇಂದ್ರ ಸೋಮಯಾಜಿ ಉಪಸ್ಥಿತರಿದ್ದರು. ಉದಯಕುಮಾರ ಹಬ್ಬು ಸ್ವಾಗತಿಸಿ, ಶರತ್ ಶೆಟ್ಟಿ ವಂದಿಸಿ, ಮಹೇಶ್ ಕಲ್ಲಚ್ಚು ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಹಿರಿಯ ನಾಗರಿಕ ಗುರುತು ಚೀಟಿ ವಿತರಣೆ

ಕಿನ್ನಿಗೋಳಿ: ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಹಿರಿಯ ನಾಗರಿಕರಿಗೆ ಗುರುತಿನ ಚೀಟು ವಿತರಿಸುವ ಕಾರ್ಯಕ್ರಮವು ಹಳೆಯಂಗಡಿ ಲಯನ್ಸ್ ಕ್ಲಬ್ ವತಿಯಿಂದ ನಡೆಯಿತು. ಗುರುತಿನ ಚೀಟಿಯನ್ನು ಬಿಲ್ಲವ ಸಂಘದ ಅಧ್ಯಕ್ಷರಾದ ಗಣೇಶ್...

Close