“ಮಕ್ಕಳ ಮೇಳ-ಯಕ್ಷಗಾನ ಅಳಿವಿನ ಆತಂಕ ದೂರ”

Mithuna Kodethoor

ಯಕ್ಷಗಾನ ಪರಂಪರೆ ಕಳೆದುಕೊಳ್ಳುತ್ತಿದೆ ಎಂಬ ಆತಂಕವನ್ನು ಮಕ್ಕಳ ಯಕ್ಷಗಾನ ಮೇಳಗಳು ದೂರಮಾಡುತ್ತಿವೆ. ಶಾಲೆಶಾಲೆಗಳಲ್ಲಿ ಯಕ್ಷಗಾನ ಶಿಕ್ಷಣದ ಮೂಲಕ ಮಕ್ಕಳಲ್ಲಿ ಸಂಸ್ಕೃತಿಯ, ಪುರಾಣದ ಅರಿವು ಮೂಡಿಸುವ ಕೆಲಸ ಅಗತ್ಯವಿದೆ ಎಂದು ಸಂಸದ ನಳಿನ್ ಕುಮಾರ್ ಹೇಳಿದರು.
ಅವರು ಭಾನುವಾರ ಕಟೀಲಿನ ರಥಬೀದಿಯಲ್ಲಿ ಶ್ರೀ ದುರ್ಗಾ ಮಕ್ಕಳ ಮೇಳದ ನಾಲ್ಕನೆಯ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.
ಹಿರಿಯ ಯಕ್ಷಗಾನ ಕಲಾವಿದ ದಾಸನಡ್ಕ ರಾಮಕುಲಾಲ್ ಹಾಗೂ ಯುವ ಛಾಂದಸ ಗಣೇಶ ಕೊಲೆಕಾಡಿಯವರನ್ನು ಸನ್ಮಾನಿಸಲಾಯಿತು. ಯಕ್ಷಗಾನ ಗುರುಗಳಾದ ಬಲಿಪ ಶಿವಶಂಕರ ಭಟ್, ರಾಜೇಶ ಐ, ಹರಿನಾರಾಯಣ ಬೈಪಡಿತ್ತಾಯರನ್ನು ಗೌರವಿಸಲಾಯಿತು. ಯಕ್ಷಗಾನ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಿದರು.
ಅಂಬಲಪಾಡಿಯ ನಿ.ಬೀ.ವಿಜಯ ಬಲ್ಲಾಳ, ಕಟೀಲು ಅರ್ಚಕರಾದ ವಾಸುದೇವ ಆಸ್ರಣ್ಣ, ಲಕ್ಷ್ಮೀನಾರಾಯಣ ಆಸ್ರಣ್ಣ, ವಿಮಾನ ನಿಲ್ದಾಣದ ನಿವೃತ್ತ ನಿರ್ದೇಶಕ ಎಂ.ಆರ್.ವಾಸುದೇವ, ವಿದ್ವಾನ್ ಪಂಜ ಭಾಸ್ಕರ ಭಟ್, ಕಟೀಲು ಮೇಳಗಳ ಸಂಚಾಲಕ ದೇವಿಪ್ರಸಾದ ಶೆಟ್ಟಿ, ಜಗದೀಪ್ ಸುವರ್ಣ, ಚಂದ್ರಶೇಖರ ಬೆಳ್ಚಡ, ಬಜಪೆ ರಾಘವೇಂದ್ರ ಆಚಾರ‍್ಯ, ಮಾಲತಿ ವೈ, ಸುರೇಶ್ ಭಟ್ ಮತ್ತಿತರರಿದ್ದರು
ಮಕ್ಕಳ ಮೇಳದ ಅಧ್ಯಕ್ಷ ಶ್ರೀಹರಿನಾರಾಯಣದಾಸ ಆಸ್ರಣ್ಣ ಸ್ವಾಗತಿಸಿದರು. ವಾಸುದೇವ ಶೆಣೈ ಕಾರ್ಯಕ್ರಮ ನಿರೂಪಿಸಿದರು. ಯಕ್ಷಗಾನ ಭಾಗವತಿಕೆ ಶೈಲಿಯಲ್ಲಿ ದೇವೀಪ್ರಕಾಶ್ ಸನ್ಮಾನ ಪತ್ರ ವಾಚಿಸಿದರು. ಶ್ರೀಕರ ಆಸ್ರಣ್ಣ ಪ್ರಾರ್ಥಿಸಿದರು. ಪಶುಪತಿ ಶಾಸ್ತ್ರಿ ವಂದಿಸಿದರು.

Comments

comments

Leave a Reply

Read previous post:
St.Peter’s Church

Simon Lasrado The long awaited St.Peter's Church at Rustham Bagh Layout was blessed and inaugurated on 26th October 2012."This is...

Close