ಕಟೀಲಿನಲ್ಲಿ ಮುಗೇರ ಕ್ರೀಡೋತ್ಸವ 2012

ಕಿನ್ನಿಗೋಳಿ: ಶ್ರೀ ಬಹ್ಮ ಮುಗೇರ ಮಹಾಕಾಳಿ ದೈವಸ್ಥಾನ ಗಿಡಿಗೆರೆ ಹಾಗೂ ಶ್ರೀ ದುರ್ಗಾಂಬಿಕಾ ಯುವಕ-ಯುವತಿ ಮಂಡಲ ಗಿಡಿಗೆರೆ ಕಟೀಲು ಇವರ ಜಂಟೀ ಸಹಯೋಗದಲ್ಲಿ, ಯುವಕ ಮಂಡಲದ35ನೇ ವರ್ಷಾಚರಣೆ ಪ್ರಯುಕ್ತ ಭಾನುವಾರ ಕಟೀಲು ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಅವಿಭಜಿತ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲಾ ಮಟ್ಟದ ವಾಲಿಬಾಲ್ ತ್ರೋಬಾಲ್ ಮತ್ತು ಹಗ್ಗಜಗ್ಗಾಟ ಸ್ಪರ್ಧೆಗಳ ಮುಗೇರ ಕ್ರೀಡೋತ್ಸವ 2012 ನಡೆಯಿತು.
ಕಟೀಲು ದೇವಳ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ ಕ್ರೀಡೋತ್ಸವ ಉದ್ಘಾಟಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಮೊಗೇರ ಸಂಘದ ಅಧ್ಯಕ್ಷ ಕೃಷ್ಣಪ್ಪ ದೇರೆಬೈಲ್ ಅಧ್ಯಕ್ಷತೆ ವಹಿಸಿದ್ದರು. ಮುಲ್ಕಿ ಮೂಡಬಿದ್ರೆ ಶಾಸಕ ಅಭಯಚಂದ್ರಜೈನ್, ಕೆ.ಪಿ ಜಗದೀಶ್ ಅಧಿಕಾರಿ, ಮಂಗಳೂರು ತಾಲೂಕು ಮೊಗೇರ ಸಂಘದ ಅಧ್ಯಕ್ಷ ಸೀತಾರಾಮ್ ಕೆ. ಉಡುಪಿ ಜಿಲ್ಲಾ ಮೊಗೇರ ಸಂಘದ ಅಧ್ಯಕ್ಷ ಉದಯಕುಮಾರ್ ಕರ್ನಾಟಕ ಸರಕಾರ ಜನಪದ ಜಾತ್ರ ಸಮಿತಿಯ ಸದಸ್ಯ ಎಸ್. ಬಾಸ್ಕರ ದಾಸ ಎಕ್ಕಾರು, ಕಟೀಲು ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಜಯರಾಮ ಪೂಂಜಾ, ಮಂಗಳೂರು ತಾಲೂಕು ಮೊಗೇರ ಯುವ ವೇದಿಕೆ ಅಧ್ಯಕ್ಷ ಜಗದೀಶ್ ಮೂಡುಶೆಡ್ಡೆ, ದ. ಸಂ.ಸ ದ.ಕ. ಜಿಲ್ಲಾ ಸಂಚಾಲಕ ಕೃಷ್ಣಾನಂದ ಡಿ ಪೆರ್ಮುದೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪಾ, ಬೆಳ್ತಂಗಡಿ ತಾಲೂಕು ಪಂಚಾಯಿತಿ ಅಧ್ಯಕ್ಷ ಕೇಶವ ಮುಗೇರ, ಶೀನ ಗುರಿಕಾರ ,ಕಿಟ್ಟ ಮುಗೇರ, ರಾಜು ಮೇಸ್ತ್ರಿ, ಕಟೀಲು ಸ್ಪೋಟ್ಸ್ ಗೇಮ್ಸ್ ಕ್ಲಬ್ ನ ಅಧ್ಯಕ್ಷ ಕೇಶವ, ಕಟೀಲು ದೇವಳ ಫ್ರೌಢಶಾಲೆ ಉಪ ಪ್ರಾಚಾರ್ಯ ಸುರೇಶ್ ಭಟ್, ಎಕ್ಕಾರು ಗ್ರಾಮ ಪಂಚಾಯಿತಿ ಅಧ್ಯಕ್ಷ ರಘು ಎಕ್ಕಾರು, ನಾರಾಯಣ ಮುಗೇರ ಗಿಡಿಗೆರೆ, ಹರೀಶ್ ವಿ, ಸುಕುಮಾರ್, ಶ್ಯಾಮ ಡಿ.ಕೆ., ರುಕ್ಮಯ, ಲೀಲಾ, ಮೋಹಿನಿ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭ ಗಿಡಿಗೆರೆ ಶ್ರೀ ಬ್ರಹ್ಮ ಮುಗೇರ ಮಹಾಕಾಳಿ ದೈವಸ್ಥಾನದ ಜೀರ್ಣೋದ್ಧಾರಕ್ಕೆ ಆರಾಧನಾ ಯೋಜನೆಯಡಿ ರೂ.50,000ಚೆಕ್ಕನ್ನು ಶಾಸಕ ಕೆ. ಅಭಯಚಂದ್ರ ಜೈನ್ ದೈವಸ್ಥಾನದ ಗುರಿಕಾರ ತಿಮ್ಮಪ್ಪ ಮೇಸ್ತ್ರಿ ಅವರಿಗೆ ಹಸ್ತಾಂತರಿಸಿದರು.
ಜಿಲ್ಲಾಮಟ್ಟದ ಕಬಡ್ಡಿ ಆಟಗಾರ ಸಂತೋಷ್ ಗಿಡಿಗೆರೆ, ತಾಲೂಕು ಮಟ್ಟದ ಆಟಗಾರ ಗಣೇಶ್ ಗಿಡಿಗೆರೆ, ರಾಷ್ಡ್ರ ಮಟ್ಟದ ಹೈಜಂಪ್ ದ್ವಿತೀಯ ಸ್ಥಾನ ವಿಜೇತೆ ಮಮತಾ ಪುತ್ತೂರು ಹಾಗೂ ರಾಜ್ಯ ಮಟ್ಟದ ಕ್ಕೊಕ್ಕೊ ಆಟಗಾರ ನಾಗೇಶ್ ಪುತ್ತೂರು ಅವರನ್ನು ಸಂಘಟಕರು ಸನ್ಮಾನಿಸಿದರು.
ವಾಲಿಬಾಲ್ ಪುರುಷರ 26 ತಂಡ, ತ್ರೋಬಾಲ್ ಮಹಿಳೆಯರ 7 ತಂಡ, ಮಹಿಳೆಯರ ಹಗ್ಗಜಗ್ಗಾಟ 6 ತಂಡ ಹಾಗೂ ಪುರುಷರ ಹಗ್ಗಜಗ್ಗಾಟ 12 ತಂಡಗಳು ಬಾಗವಹಿಸಿದ್ದವು.

ಫಲಿತಾಂಶ

ವಾಲಿಬಾಲ್ ಪುರುಷರ ವಿಭಾಗ
ಪ್ರಥಮ : ಶ್ರೀ ಗುರುಬ್ರಹ್ಮ ಶಿರ್ವ
ದ್ವಿತೀಯ : ಆದರ್ಶ ಕಾರ್ಕಳ

ತ್ರೋಬಾಲ್ ಮಹಿಳೆಯರ ವಿಭಾಗ
ಪ್ರಥಮ : ಆದರ್ಶ ಕಾರ್ಕಳ
ದ್ವಿತೀಯ : ಶ್ರೀ ಗುರುಬ್ರಹ್ಮ ಶಿರ್ವ

ಹಗ್ಗಜಗ್ಗಾಟ ಪುರುಷರ ವಿಭಾಗ
ಪ್ರಥಮ : ಪ್ರಶಾಂತ್ ಪ್ರೆಂಡ್ಸ್ ಪುನರೂರು
ದ್ವಿತೀಯ : ಮಹಾಕಾಳಿ ಶೆಟ್ಟಿಗುಡ್ಡೆ

ಹಗ್ಗಜಗ್ಗಾಟ ಮಹಿಳೆಯರ ವಿಭಾಗ
ಪ್ರಥಮ : ಕೊಳಕೆ ಇರ್ವತ್ತೂರು ಕಾರ್ಕಳ
ದ್ವಿತೀಯ : ಶ್ರೀ ದುರ್ಗಾಂಬಿಕಾ ಯುವತಿ ಮಂಡಲ ಗಿಡಿಗೆರೆ ಕಟೀಲು

 

Comments

comments

Leave a Reply

Read previous post:
ಸತ್ಯನಾರಾಯಣ ಪೂಜಾಸಮಿತಿ ಪದಾಧಿಕಾರಿಗಳು

Mithun Kodethoor ಸತ್ಯನಾರಾಯಣ ಪೂಜಾಸಮಿತಿ ಕಟೀಲು ಇದರ ನೂತನ ಸಮಿತಿಯ ಪದಾಧಿಕಾರಿಗಳ ಆಯ್ಕೆ ಕಟೀಲು ಶಾಲೆಯ ಸರಸ್ವತಿ ಸದನದಲ್ಲಿ ನಡೆಯಿತು. ಗೌರವ ಅಧ್ಯಕ್ಷರು-ಈಶ್ವರ್ ಕಟಿಲು ಅಧ್ಯಕ್ಷರು-ಗಣೇಶ್ ಶೆಟ್ಟಿ...

Close