ಕಿನ್ನಿಗೋಳಿ ಇನ್ನರ್ ವೀಲ್ ಜಿಲ್ಲಾ ಚೆಯರ್ ಮನ್ ಭೇಟಿ

ಕಿನ್ನಿಗೋಳಿ: ಸಮಾಜಮುಖಿ ಕೆಲಸಗಳನ್ನು ಸೇವಾ ಸಂಸ್ಥೆಗಳು ಮಾಡಬೇಕು ಅಲ್ಲದೆ ಸಮಾಜದೊಂದಿಗೆ ಸ್ನೇಹ ಶೀಲರಾಗಿರಬೇಕು ಎಂದು ಇನ್ನರ್ ವೀಲ್ ಜಿಲ್ಲೆ 318 ರ ಜಿಲ್ಲಾ  ಚೆಯರ್ ಮನ್ ಸುಮಾ ಕೃಷ್ಣ ಎಂದು ಹೇಳಿದರು.
ಕಿನ್ನಿಗೋಳಿ ಇನ್ನರ್ ವೀಲ್ ಕ್ಲಬ್‌ಗೆ ಜಿಲ್ಲಾ  ಚೆಯರ್ ಮನ್ ಅಧಿಕೃತ ಭೇಟಿ ನೀಡಿದ ಸಂದರ್ಭ ಅವರು ಮಾತನಾಡಿದರು.
ಕಿನ್ನಿಗೋಳಿ ಇನ್ನರ್ ವೀಲ್ ಕ್ಲಬ್ ವತಿಯಿಂದ ವಿವಿಧ ಯೋಜನೆಗಳನ್ನು ನಡೆಸಲಾಯಿತು. ಎಸ್.ಕೋಡಿಯಲ್ಲಿ ದಾರಿ ಸೂಚಕ ನಾಮಫಲಕ, ಗುತ್ತಕಾಡು ಜಿಲ್ಲಾ ಪಂಚಾಯಿತಿ ಶಾಲೆಯ ಶೌಚಾಲಯಕ್ಕೆ ಟೈಲ್ಸ್ ಅಳವಡಿಕೆ ಹಾಗೂ ಸೈಂಟ್ ಮೇರಿಸ್ ವಿಶೇಷ ಸಾರ್ಮಥ್ಯ ವಿದ್ಯಾರ್ಥಿಗಳಿಗೆ ನೃತ್ಯ ಪರಿಕರಗಳನ್ನು ನೀಡಲಾಯಿತು. ಕಿನ್ನಿಗೋಳಿ ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿ ಗುಲಾಬಿ ಅವರನ್ನು ಕ್ಲಬ್ ವತಿಯಿಂದ ಸನ್ಮಾನಿಸಿದರು.
ಕಿನ್ನಿಗೋಳಿ ರೋಟರಿ ಅಧ್ಯಕ್ಷ ಕಳ್ಳಿಗೆ ಬಾಲಕೃಷ್ಣ ಶೆಟ್ಟಿ ಇನ್ನರ್ ವೀಲ್ ಮುಖವಾಣಿ “ಕಾರಂಜಿ” ಬಿಡುಗಡೆಗೊಳಿಸಿದರು. ಇನ್ನರ್ ವೀಲ್  ಜಿಲ್ಲಾ ಸಮಿತಿಯ ಜಯಶ್ರೀ, ಕಿನ್ನಿಗೋಳಿ ಇನ್ನರ್ ವೀಲ್ ಕ್ಲಬ್ ನಿಕಟಪೂರ್ವ ಅಧ್ಯಕ್ಷೆ ಜಾನೆಟ್ ರೊಸಾರಿಯೊ ವೇದಿಕೆಯಲ್ಲಿ ಉಪಸ್ಥಿತರಿದ್ದರು,
ಕಿನ್ನಿಗೋಳಿ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಮಮತಾ ಶರತ್ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಸಿಂತಿಯಾ ಕುಟಿನ್ಹೊ ವರದಿ ನೀಡಿದರು. ವೀಣಾ ಬಾಲಕೃಷ್ಣ ಶೆಟ್ಟಿ ವಂದಿಸಿ, ಸುಧಾರಾಣಿ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಕಟೀಲಿನಲ್ಲಿ ಮುಗೇರ ಕ್ರೀಡೋತ್ಸವ 2012

ಕಿನ್ನಿಗೋಳಿ: ಶ್ರೀ ಬಹ್ಮ ಮುಗೇರ ಮಹಾಕಾಳಿ ದೈವಸ್ಥಾನ ಗಿಡಿಗೆರೆ ಹಾಗೂ ಶ್ರೀ ದುರ್ಗಾಂಬಿಕಾ ಯುವಕ-ಯುವತಿ ಮಂಡಲ ಗಿಡಿಗೆರೆ ಕಟೀಲು ಇವರ ಜಂಟೀ ಸಹಯೋಗದಲ್ಲಿ, ಯುವಕ ಮಂಡಲದ35ನೇ ವರ್ಷಾಚರಣೆ ಪ್ರಯುಕ್ತ...

Close