ವಾಲಿಬಾಲ್ ಹಾಗೂ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ

ಕಿನ್ನಿಗೋಳಿ: ಇಂದಿನ ವಿದ್ಯಾರ್ಥಿಗಳಲ್ಲಿ ವಾಲಿಬಾಲ್ ನಂತಹ ಕ್ರೀಡೆಗಳು ಪರಸ್ಪರ ಸಹಕಾರ ಮನೋಭಾವ ಶಾಂತಿ ಸೌಹಾರ್ದತೆ ಸಂಯಮಗಳನ್ನು ಮೈಗೂಡಿಸುವುದಲ್ಲದೆ, ಹಾಗೂ ಕಲಿಯುವಿಕೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ಪಡೆಯುವುದರೊಂದಿಗೆ ದೈಹಿಕ ಮಾನಸಿಕ ಉಲ್ಲಾಸಕ್ಕೆ ಕಾರಣವಾಗಿದೆ ಹಾಗೂ ಕ್ರೀಡೆಯ ಮೂಲಕ ಜೀವನದಲ್ಲಿ ಏಳಿಗೆ ಮತ್ತು ಗೌರವವನ್ನು ಪಡೆಯಬಹುದು ಎಂದು ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವಪ್ರಸಾದ ಪುನರೂರು ಹೇಳಿದರು.

ಮುಲ್ಕಿ ರಾಮಕೃಷ್ಣ ಪೂಂಜಾ ಕೈಗಾರಿಕಾ ತರಬೇತಿ ಕೇಂದ್ರದ ಆಶ್ರಯದಲ್ಲಿ ಸೋಮವಾರ ನಡೆದ ವಾಲಿಬಾಲ್ ಹಾಗೂ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ ಉದ್ಘಾಟಿಸಿ ಮಾತನಾಡಿದರು.
ಸಂಸ್ಥೆಯ ಪ್ರಾಚಾರ್ಯ ವೈ,ಎನ್.ಸಾಲಿಯಾನ್ ಅಧ್ಯಕ್ಷತೆ ವಹಿಸಿದ್ದರು. ರಘುರಾಮ್ ರಾವ್, ದಯಾನಂದ ಲಾಗ್ವಾಣ್‌ಕರ್ ಸಂಜೀವ ದೇವಾಡಿಗ ಉಪಸ್ಥಿತರಿದ್ದರು.
ವಿಶ್ವನಾಥ್ ರಾವ್ ಸ್ವಾಗತಿಸಿ ಗುರುರಾಜ್ ಭಟ್ ಧನ್ಯವಾದವಿತ್ತರು. ಲಕ್ಷ್ಮೀಕಾಂತ ಕಾರ್ಯಕ್ರಮ ನಿರೂಪಿಸಿದರು.

 

Comments

comments

Leave a Reply

Read previous post:
ಕಿನ್ನಿಗೋಳಿ ಇನ್ನರ್ ವೀಲ್ ಜಿಲ್ಲಾ ಚೆಯರ್ ಮನ್ ಭೇಟಿ

ಕಿನ್ನಿಗೋಳಿ: ಸಮಾಜಮುಖಿ ಕೆಲಸಗಳನ್ನು ಸೇವಾ ಸಂಸ್ಥೆಗಳು ಮಾಡಬೇಕು ಅಲ್ಲದೆ ಸಮಾಜದೊಂದಿಗೆ ಸ್ನೇಹ ಶೀಲರಾಗಿರಬೇಕು ಎಂದು ಇನ್ನರ್ ವೀಲ್ ಜಿಲ್ಲೆ 318 ರ ಜಿಲ್ಲಾ  ಚೆಯರ್ ಮನ್ ಸುಮಾ ಕೃಷ್ಣ ಎಂದು ಹೇಳಿದರು....

Close