ನೂತನ ಪದಾಧಿಕಾರಿಗಳ ಆಯ್ಕೆ2012-13

ಕಿನ್ನಿಗೋಳಿ: ಪೊಂಪೈ ಪ.ಪೂರ್ವ ಕಾಲೇಜು ತಾಳಿಪಾಡಿ ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕ ಮಹಾಸಭೆಯು ವೈ.ಯೋಗಿಶ್ ರಾವ್ ರವರ ಅಧ್ಯಕ್ಷತೆಯಲ್ಲಿ ಕಾಲೇಜಿನ ನೂತನ ಸಭಾ ಭವನದಲ್ಲಿ ನಡೆಯಿತು.
ಉಳಿದ ಪದಾಧಿಕಾರಿಗಳು:
ಅಧ್ಯಕ್ಷರಾಗಿ ವೈ. ಯೋಗಿಶ್ ರಾವ್ ಪುನರಾಯ್ಕೆಗೊಂಡರು, ಉಪಾಧ್ಯಕ್ಷರಾಗಿ ಮಂಜುನಾಥ ಮಲ್ಯ, ಕಾರ್ಯದರ್ಶಿಯಾಗಿ ಪಾವ್ಲ್ ಮಿರಾಂದ, ಜೊತೆ ಕಾರ್ಯದರ್ಶಿಯಾಗಿ ಲಾರೆನ್ಸ್ ಫೆರ್ನಾಂಡಿಸ್, ಕೋಶಾಧಿಕಾರಿಯಾಗಿ ಡಯಾನಾ ಮಿರಾಂದ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಬರ್ಟನ್ ಸಿಕ್ವೇರ, ಆಯ್ಕೆಯಾದರು. ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ರೆ|ಫಾ| ಜೆರೋಮ್ ಡಿ’ಸೋಜ ನೂತನ ಮತ್ತು ನಿಕಟಪೂರ್ವ ಪದಾಧಿಕಾರಿಗಳಿಗೆ ಅಭಿನಂದನೆ, ಶುಭವಿದಾಯ ಕೋರಿದರು. ೨೦೧೧-೧೨ರ ಸಾಲಿನ ಪಿ.ಯು.ವಿಭಾಗದಲ್ಲಿ ಕಲಾ, ವಾಣಿಜ್ಯ, ವಿಜ್ಞಾನದಲ್ಲಿ ಅತ್ಯಧಿಕ ಅಂಕಗಳಿಸಿದ ರಮ್ಯತಾ, ಸುಕನ್ಯಾ, ಸುಪ್ರೀತಾ ಇವರಿಗೆ ಪುರಸ್ಕಾರ ಮಾಡಲಾಯಿತು. ವಾರ್ಷಿಕ ವರದಿಯನ್ನು ಜೆ.ಬಿ.ಮಿರಾಂದ ವಾಚಿಸಿದರು, ಅಯವ್ಯಯವನ್ನು ಡಯಾನಾ ಮಿರಾಂದ ಮಂಡಿಸಿದರು, ಜೆ.ಬಿ.ಮಿರಾಂದ ಧನ್ಯವಾದವಿತ್ತರು.

Comments

comments

Leave a Reply

Read previous post:
ಪಾ.ಸಂಜೀವ ಬೋಳಾರ್‌ಗೆ ವಿಶುಕುಮಾರ್ ಪ್ರಶಸ್ತಿ ಪ್ರದಾನ

Narendra Kerekad ಕಿನ್ನಿಗೋಳಿ: ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ಅಧ್ಯಕ್ಷ ಕೊರಗಪ್ಪ ಸಭಾಂಗಣದಲ್ಲಿ ನಡೆದ ಯುವವಾಹಿನಿ ಕೇಂದ್ರ ಸಮಿತಿಯ ರಜತ ಮಹೋತ್ಸವದಲ್ಲಿ ಹಿರಿಯ ಸಾಹಿತಿ, ಪತ್ರಕರ್ತ ಪಾ.ಸಂಜೀವ ಬೋಳಾರ್‌ರವರಿಗೆ "ವಿಶುಕುಮಾರ್"...

Close