ಪಾ.ಸಂಜೀವ ಬೋಳಾರ್‌ಗೆ ವಿಶುಕುಮಾರ್ ಪ್ರಶಸ್ತಿ ಪ್ರದಾನ

Narendra Kerekad
ಕಿನ್ನಿಗೋಳಿ: ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ಅಧ್ಯಕ್ಷ ಕೊರಗಪ್ಪ ಸಭಾಂಗಣದಲ್ಲಿ ನಡೆದ ಯುವವಾಹಿನಿ ಕೇಂದ್ರ ಸಮಿತಿಯ ರಜತ ಮಹೋತ್ಸವದಲ್ಲಿ ಹಿರಿಯ ಸಾಹಿತಿ, ಪತ್ರಕರ್ತ ಪಾ.ಸಂಜೀವ ಬೋಳಾರ್‌ರವರಿಗೆ “ವಿಶುಕುಮಾರ್” ಪ್ರಶಸ್ತಿ ಪ್ರದಾನ ಮಾಡಿ “ಕರಾವಳಿಯ ಭಾರ್ಗವ ಶಿವರಾಮ ಕಾರಂತರ ಸಮಾನಾಂತರ ವ್ಯಕ್ತಿತ್ವದ ವಿಶುಕುಮಾರ್‌ರವರು ಸಹ ಸಾಹಿತ್ಯ, ಕಲೆ, ಸಂಘಟನೆ, ಸಿನಿಮಾ, ರಾಜಕೀಯ ಹೀಗೆ ಎಲ್ಲಾ ಸ್ತರಗಳಲ್ಲಿ ತಮ್ಮ ಪಡಿಯಚ್ಚನ್ನು ಮೂಡಿಸಿದವರು”, ಅವರ ಸಂಸ್ಮರಣೆ ಮಾಡಿಕೊಂಡು ಅವರ ಹೆಸರಿನಲ್ಲಿ ಪ್ರತೀವರ್ಷ ಪ್ರಶಸ್ತಿಯನ್ನು ಯುವವಾಹಿನಿ ಸಂಸ್ಥೆ ನೀಡುತ್ತಿರುವುದು ಶ್ಲಾಘನೀಯ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಪುಂಡಲೀಕ ಹಾಲಂಬಿ ಹೇಳಿದರು.
ಸಾಹಿತ್ಯ ಕ್ಷೇತ್ರದಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಿದವರಿಗೆ ಅರ್ಜಿ ಆಹ್ವಾನಿಸದೇ ಹುಡುಕಿಕೊಂಡು ಪ್ರಶಸ್ತಿ ನೀಡುವುದರಿಂದ ಪ್ರಶಸ್ತಿಯ ಮೌಲ್ಯ ಹೆಚ್ಚುತ್ತದೆ, ಸಾಹಿತ್ಯ ಕೃತಿಗಳನ್ನು, ಯುವ ಸಾಹಿತಿಗಳನ್ನು ಪ್ರೋತ್ಸಾಹಿಸುವ ಕೆಲಸ ನಿರಂತರವಾಗಿ ನಡೆಯುತ್ತಿರಬೇಕು, ಯುವವಾಹಿನಿಯಂತಹ ಸಂಸ್ಥೆಗಳು ಇನ್ನಷ್ಟು ಸಾಹಿತ್ಯಕ್ಕೆ ಕೊಡುಗೆ ನೀಡಲಿ, ಕರಾವಳಿಯ ಮಣ್ಣಿನ ಗುಣವನ್ನು ಹೊಂದಿರುವ ಅನೇಕ ಸಾಹಿತಿಗಳು ಇಂದಿಗೂ ಅಮರರಾಗಿದ್ದಾರೆ ಎಂದರೆ ಅವರ ಹೆಸರಿನಲ್ಲಿ ನಡೆಯುತ್ತಿರುವ ಸಾಹಿತ್ಯ ಚಟುವಟಕೆಗಳಿಂದ ಎಂದರು.
ಉದಯೋನ್ಮುಖ ಬರಹಗಾರ್ತಿ, ಶಿಕ್ಷಕಿ ಚಂದ್ರಿಕಾ ಅವರಿಗೆ ಪ್ರಭಾಕರ ನೀರುಮಾರ್ಗ ಯುವವಾಹಿನಿ ಯುವ ಸಾಹಿತ್ಯ ಪ್ರಶಸ್ತಿಯನ್ನು ಮುಂಬಯಿಯ “ಅಕ್ಷಯ”ಪತ್ರಿಕೆಯ ಸಂಪಾದಕ ಡಾ.ಈಶ್ವರ ಅಲೆವೂರು ಪ್ರದಾನ ಮಾಡಿದರು.
ಕಸಾಪದ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರುರವರು ಮುದ್ದು ಮೂಡುಬೆಳ್ಳೆ ರಚಿಸಿದ “ನಾರಾಯಣ ಗುರು ಚರಿತ್ರೆ” ಎನ್ನುವ ಕೃತಿ, ಕುಡ್ಲ ತುಳುಕೂಟದ ಅಧ್ಯಕ್ಷ ಬಿ.ದಾಮೋದರ ನಿಸರ್ಗರವರು ನಿವೃತ್ತ ಕಂದಾಯ ಅಧಿಕಾರಿ ಬಿ.ತಮ್ಮಯ್ಯರವರ “ಕಾಡಿನ ಹಕ್ಕಿ ಹಾಡಿದಾಗ” ಎನ್ನುವ ಕವನ ಸಂಕಲವನ್ನು ಬಿಡುಗಡೆಗೊಳಿಸಿದರು.
ಕರ್ನಾಟಕ ತುಳು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆಯನ್ನು ವಹಿಸಿದ್ದರು.
ಮಂಗಳೂರು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಕಿಶೋರ್ ಕೆ.ಬಿಜೈ, ವಿಶುಕುಮಾರ್, ದತ್ತಿ ನಿಧಿಯ ಸಂಚಾಲಕ ಸಾಧು ಪೂಜಾರಿ ಉಪಸ್ಥಿತರಿದ್ದರು.
ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಶಂಕರ ಸುವರ್ಣ ವಿಶುಕುಮಾರ್ ಪ್ರಶಸ್ತಿಯ ಬಗ್ಗೆ ಪ್ರಸ್ತಾವನೆಗೈದರು, ತುಕರಾಂ ಎನ್, ಯುವವಾಹಿನಿ ಸಂಸ್ಥೆಯ ಸಾಹಿತ್ಯ ಚಟುವಟಿಕೆಯನ್ನು ವಿವರಿಸಿದರು. ರಾಜೀವ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಡಾ|| ಎನ್. ಉಡುಪರಿಗೆ “ಪ್ರೊಫೆಸರ್ ಸಿ. ಜೆ. ಶಿಶೂ” ಪ್ರಶಸ್ತಿ

Yugapurusha Kinnigoli ಕಿನ್ನಿಗೋಳಿ: ಮಣಿಪಾಲದ ಫಾರ್ಮಾಸ್ಯುಟಿಕಲ್ ಕಾಲೇಜಿನ ಪ್ರಾಚಾರ್ಯರೂ, ಕಿನ್ನಿಗೋಳಿ ಯುಗಪುರುಷದ ನಿರಂತರದ ಗೌರವ ಸಲಹೆಗಾರರೂ, ಮಣಿಪಾಲ ವಿಶ್ವವಿದ್ಯಾಲಯದ ಆರೋಗ್ಯ ವಿಜ್ಞಾನ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ|| ನಯನಾಭಿರಾಮ...

Close