ನಾರಾಯಣಗುರುಗಳ ಮಂದಿರ ದೇವಾಲಯ-ಸಚಿವ ಕೋಟ

Narendra Kerekadu
ಕಿನ್ನಿಗೋಳಿ: ಹಿಂದುಳಿದ ವರ್ಗದವರ ಶಕ್ತಿಯಾಗಿ ಬೆಳಗಿದ ಬ್ರಹ್ಮಶ್ರೀ ನಾರಾಯಣ ಗುರುಗಳ ಎಲ್ಲಾ ಮಂದಿರಗಳನ್ನು ಇಂದು ಮುಜರಾಯಿ ಇಲಾಖೆಗೆ ಸುಪರ್ದಿಗೆ ತಂದು ಸರ್ಕಾರಿ ಅನುದಾನ ಪಡೆಯುವಂತಹ ದೇವಾಲಯವಾಗಿ ಅರ್ಹತೆಯನ್ನು ಗಳಿಸಿದೆ, ಕರಾವಳಿಯಲ್ಲಿರುವ ಎಲ್ಲಾ ಗರಡಿಗಳಿಗೂ ಸರ್ಕಾರದಿಂದ ತಸ್ತೀಕು ಶುಲ್ಕವನ್ನು ನೀಡುವ ಯೋಜನೆಯನ್ನು ಜಾರಿಗೆ ಮಾಡಲಾಗಿದೆ ಎಂದು ಮುಜುರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ಅಧ್ಯಕ್ಷ ಕೊರಗಪ್ಪ ಸಭಾಂಗಣದಲ್ಲಿ ನಡೆದ ಮಂಗಳೂರು ಯುವವಾಹಿನಿ ಕೇಂದ್ರ ಸಮಿತಿಯ ರಜತ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಶ್ರೀಮಂತಿಕೆ ಮುಖ್ಯವಲ್ಲ ಶಿಕ್ಷಣ ಪ್ರಾಮುಖ್ಯ ಎಂದು ಬಡವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ದತ್ತು ಸ್ವೀಕರಿಸಿ ಅವರ ಉನ್ನತ ಶೈಕ್ಷಣಿಕ ಜೀವನಕ್ಕೆ ಯುವವಾಹಿನಿ ಆಸರೆ ಆಗುತ್ತಿರುವುದು ಶ್ಲಾಘನೀಯ. ಅಧಿಕಾರ ಶಾಶ್ವತವಲ್ಲ ದೂರಗಾಮಿ ಯೋಜನೆಗಳಿಂದಲೇ ಸಂಸ್ಥೆಯನ್ನು ಕಟ್ಟಬಹುದು ಎನ್ನುವುದಕ್ಕೆ ಯುವವಾಹಿನಿಯ ರಜತ ಸಂಭ್ರಮವೇ ಪ್ರತ್ಯಕ್ಷ ಸಾಕ್ಷಿ ಎಂದು ಹೇಳಿದರು.
ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಕಿಶೋರ್ ಕೆ.ಬಿಜೈ ಅಧ್ಯಕ್ಷತೆಯನ್ನು ವಹಿಸಿದ್ದರು.
ಕನ್ಯಾಡಿ ಶ್ರೀರಾಮ ಕ್ಷೇತ್ರದ ಬ್ರಹ್ಮನಾಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿ ಲೌಖಿಕವಾಗಿ ಪಾಲನೆ ಮಾಡುವ ಧರ್ಮವೇ ಶ್ರೇಷ್ಠ, ಸಾಧನೆಗಳನ್ನು ಗುರುತಿಸಲು ಪ್ರಯತ್ನಿಸಿರಿ, ಯುವಜನತೆಯನ್ನು ಸಧೃಢವಾಗಿ ಕಟ್ಟಲು ಶ್ರಮಿಸಬೇಕು, ಜಾತಿವಾತ್ಸಲ್ಯ ದುರ್ಬಳಕೆ ಆಗಬಾರದು ಸಂವಿಧಾನದ ಸಮಾನತೆಯ ಪಾಲನೆ ಆಗಬೇಕು ಎಂದರು.
ಮುಂಬೈನ ಭಾರತ್ ಕೋ ಆಪರೇಟಿವ್ ಬ್ಯಾಂಕ್‌ನ ಉಪಾಧ್ಯಕ್ಷೆ ರೋಹಿಣಿ ಜೆ.ಸಾಲ್ಯಾನ್‌ರವರು ಶುಭಾಶಂಸನೆಗೈದರು.
ಕಳೆದ ೨೫ ವರ್ಷದಿಂದ ಯುವವಾಹಿನಿಯನ್ನು ಮುನ್ನಡೆಸಿದ ಮಾಜಿ ಅಧ್ಯಕ್ಷರುಗಳನ್ನು ಶಾಸಕ ವಸಂತ ಬಂಗೇರ ವಿಶೇಷವಾಗಿ ಗೌರವಿಸಿದರು.
ಯುವವಾಹಿನಿಯ ಸಲಹೆಗಾರರಾದ ಬಿ.ತಮ್ಮಯ್ಯ, ಪ್ರೋ.ಮೋಹನ್ ಕೋಟ್ಯಾನ್, ಕಾರ್ನಾಡು ಲೊಕಯ್ಯ ಪೂಜಾರಿ, ಚಂದ್ರಶೇಖರ ಸುವರ್ಣ, ಡಾ.ಎನ್.ಟಿ.ಅಂಚನ್, ಡಿ.ಡಿ.ಕಟ್ಟೆಮಾರ್‌ರವರನ್ನು ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ಜಯ ಸುವರ್ಣ ಸನ್ಮಾನಿಸಿದರು.
ಅತ್ಯುತ್ತಮ ಘಟಕದ ಆಯ್ಕೆಯಲ್ಲಿ ಮಂಗಳೂರಿನ ಯುವವಾಹಿನಿ ಘಟಕದ ಅಧ್ಯಕ್ಷ ಯಶವಂತ ಪೂಜಾರಿಯವರಿಗೆ ಉದ್ಯಮಿ ಸಂತೋಷ್ ಕೋಟ್ಯಾನ್ ಉಗ್ಗೆಲ್‌ಬೆಟ್ಟು ಪ್ರಶಸ್ತಿಯನ್ನು ವಿತರಿಸಿದರು.
ನೂತನ ಅಧ್ಯಕ್ಷರಾದ ವಿಜಯಕುಮಾರ್ ಕುಬೆವೂರು ಮತ್ತು ಕಾರ್ಯದರ್ಶಿ ಉದಯ ಅಮಿನ್ ಮಟ್ಟುರವರ ತಂಡಕ್ಕೆ ನಿರ್ಗಮನ ಅಧ್ಯಕ್ಷ ಕಿಶೋರ್ ಬಿಜೈಯವರು ಅಧಿಕಾರ ಹಸ್ತಾಂತರಿಸಿದರು.
ಪ್ರಧಾನ ಕಾರ್ಯದರ್ಶಿ ಸಂಜೀವ ಸುವರ್ಣ ವರದಿ ವಾಚಿಸಿದರು, ರಜತ ಮಹೋತ್ಸವ ಸಮಿತಿಯ ಸಂಚಾಲಕ ಕೆ.ವಿಶ್ವನಾಥ್ ವಂದಿಸಿದರು, ರಾಜೀವ ಪೂಜಾರಿ, ನರೇಶ್‌ಕುಮಾರ್ ಸಸಿಹಿತ್ಲು ಕಾರ್ಯಕ್ರಮ ನಿರೂಪಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾಜಿ ಕೇಂದ್ರ ಸಮಿತಿಯ ಅಧ್ಯಕ್ಷ ಸದಾನಂದ ಕುಂದರ್‌ರವರ ಜಾದೂ ಪ್ರದರ್ಶನ ನಡೆಯಿತು.

Comments

comments

Leave a Reply

Read previous post:
ನೂತನ ಪದಾಧಿಕಾರಿಗಳ ಆಯ್ಕೆ2012-13

ಕಿನ್ನಿಗೋಳಿ: ಪೊಂಪೈ ಪ.ಪೂರ್ವ ಕಾಲೇಜು ತಾಳಿಪಾಡಿ ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕ ಮಹಾಸಭೆಯು ವೈ.ಯೋಗಿಶ್ ರಾವ್ ರವರ ಅಧ್ಯಕ್ಷತೆಯಲ್ಲಿ ಕಾಲೇಜಿನ ನೂತನ ಸಭಾ ಭವನದಲ್ಲಿ ನಡೆಯಿತು. ಉಳಿದ ಪದಾಧಿಕಾರಿಗಳು:...

Close