ಪಿ. ನವೀನ್ ಕಾರಂತರಿಗೆ ಡಾಕ್ಟರೇಟ್ ಪದವಿ

ಸುರತ್ಕಲ್ : ರಾಷ್ಟ್ರೀಯ ತಾಂತ್ರಿಕ ಮಹಾವಿದ್ಯಾಲಯ ಕರ್ನಾಟಕ, ಸುರತ್ಕಲ್‌ನ ಪಿ. ನವೀನ್ ಕಾರಂತರು ಮಂಡಿಸಿದ “ಮೊಡೆಲಿಂಗ್ ಆಂಡ್ ಎಕ್ಸ್‌ಪೆರಿಮೆಂಟಲ್ ಆನ್ ಫೋಲಿವಿನಿಡಿನ್ ಫ್ಲೋರೈಡ್ (ಪಿವಿಡಿಫ್) ಫಿಲ್ಮ್ ಫಾರ್ ಆಕ್ಟಿವೇಷನ್ ಆಂಡ್ ಸೆನ್ಸರಿ ಅಪ್ಲಿಕೇಷನ್ಸ್” ಎಂಬ ಸಂಶೋಧನಾ ಪ್ರಬಂಧಕ್ಕೆ ಎನ್.ಐ.ಟಿ.ಕೆ ಡಾಕ್ಟರೇಟ್ ಪದವಿ (ಪಿ.ಎಚ್.ಡಿ) ನೀಡಿದೆ.
ಎನ್.ಐ.ಟಿ.ಕೆ ಯಾಂತ್ರಿಕ ವಿಭಾಗದ ಪ್ರಾಧ್ಯಾಪಕ ಡಾ|| ಎಸ್.ಎಮ್. ಕುಲಕರ್ಣಿ ಮತ್ತು ಡಾ|| ವಿಜಯ ದೇಸಾಯಿ ಮಾರ್ಗದರ್ಶನದಲ್ಲಿ ಪ್ರಬಂಧ ಸಿದ್ಧಪಡಿಸಿದ್ದರು. ೨೦೧೦ರಲ್ಲಿ ಸಂಶೋಧನಾ ವಿಷಯದಲ್ಲಿ ಜಪಾನಿನ ಕೊಮೊಟೊದಲ್ಲಿ ನಡೆದ ಅಂತರಾಷ್ಟ್ರೀಯ ತಾಂತ್ರಿಕ ಸಮಾವೇಶಕ್ಕೆ ತೆರಳಿ ಲೇಖನ ಮಂಡಿಸಿದ್ದರು. ಸದ್ಯಕ್ಕೆ ಡಾ|| ನವೀನ್ ಎನ್.ಐ.ಟಿ.ಕೆಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಮಂಗಳೂರಿನವರಾದ ದಿ| ಡಾ|| ಪಿ.ಕೆ.ಕಾರಂತ ಮತ್ತು ಲೀಲಾ ಕಾರಂತ ಅವರ ಪುತ್ರ.

 

Comments

comments

Leave a Reply

Read previous post:
ಕಿನ್ನಿಗೋಳಿಯಲ್ಲಿ ಗೂಡುದೀಪ ಸ್ಪರ್ಧೆ

ಕಿನ್ನಿಗೋಳಿ:  ಕಿನ್ನಿಗೋಳಿ ರೋಟರಿ ಕ್ಲಬ್, ರೋಟರ‍್ಯಾಕ್ಟ್ ಕ್ಲಬ್, ಇನ್ನರ್ ವೀಲ್ ಕ್ಲಬ್, ಯುಗಪುರುಷ, ಕಿನ್ನಿಗೋಳಿ ಸಾರ್ವಜನಿಕ ಗಣೇಶೋತ್ಸವ ಸಮಿತಿ, ಸೌತ್ ಕೆನರಾ ಫೋಟೊ ಗ್ರಾಫರ‍್ಸ್ ಅಸೋಸಿಯೇಶನ್ ಮುಲ್ಕಿ...

Close