ಪ್ರಾಚೀನ ಕಲೆಗಳು ನಶಿಸಿ ಹೊಗದಿರಲಿ : ಸಂಧ್ಯಾ ಎನ್. ಹೆಗ್ಡೆ

Vasanth Bernhardt 

ಹಳೆಯಂಗಡಿ: ಭಾರತದಲ್ಲಿರುವ ಪ್ರಾಚೀನ ಕಲೆಗಳು ನಶಿಸಿ ಹೊಗುತ್ತಿರುವ ಇಂದಿನ ಕಾಲಗಟ್ಟದಲ್ಲಿ ಲಯನ್ಸ್ ಸಂಸ್ಥೆ ಮತ್ತು ಸ್ವೀಕ್ ಮೆಕೆ ಸಂಸ್ಥೆಗಳು ಇಂತಹ ಪ್ರಾಚೀನ ಕಲೆಗಳನ್ನು ಕಾಪಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ, ಎಂದು ಕೆಮ್ರಾಲ್ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಸಂಧ್ಯಾ ಎನ್. ಹೆಗ್ಡೆ ನುಡಿದರು.

ಅವರು ಲಯನ್ಸ್ ಕ್ಲಬ್ ಹಳೆಯಂಗಡಿ ಇದರ ವತಿಯಿಂದ ಸ್ವೀಕ್ ಮೆಕೆ ಸಂಸ್ಥೆಯವರ ಸಹಾಯೋಗದಲ್ಲಿ ಬಳ್ಳಾರಿಯ ಶ್ರೀ ರಾಮಾಂಜನೇಯ ತೊಗಲು ಗೊಂಬೆ ಮೇಳ ಇವರು ಕೆಮ್ರಾಲ್ ಪ್ರೌಢ ಶಾಲೆಯಲ್ಲಿ ನಡೆಸಿದ ರಾಷ್ಟ್ರ ನಾಯಕರ ದೇಶ ಪ್ರೇಮವನ್ನು ಬಿಂಬಿಸುವ ಗೊಂಬೆಯಾಟದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ಸ್ ಅಧ್ಯಕ್ಷ ವಸಂತ್ ಬೆರ್ನಾರ್ಡ್ ವಹಿಸಿದರು. ಮುಖ್ಯಸ್ಥರಾದ ಬೇಳಗೆಲು ವೀರಣ್ಣ, ಲಯನ್ಸ್ ಉಪಾಧ್ಯಕ್ಷ ಜಯಾನಂದ್ ಸುವರ್ಣ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿಕ್ಷಕಿ ಶ್ರೀಮತಿ ಶರ್ಲಿ ಸುಮಾಲಿನಿ ನಿರ್ವಹಿಸಿದರು.

Comments

comments

Leave a Reply

Read previous post:
ಸಚ್ಚಿದಾನಂದ ಶೆಟ್ಟಿ ಸನ್ಮಾನ

Mithun Kodethoor ಕಿನ್ನಿಗೋಳಿ: ವಿಜಯಾ ಬ್ಯಾಂಕ್‌ನಲ್ಲಿ ಕಳೆದ ೩೬ವರ್ಷಗಳಿಂದ ಕರ್ತವ್ಯ ನಿರ್ವಹಿಸಿ, ಪಕ್ಷಿಕೆರೆ ಶಾಖೆಯಲ್ಲಿ ನಿವೃತ್ತರಾದ ಸಚ್ಚಿದಾನಂದ ಶೆಟ್ಟಿ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಪಕ್ಷಿಕೆರೆ ಚರ್ಚ್‌ನ ಧರ್ಮಗುರು ಆಂಡ್ರ್ಯೂ...

Close