ರೋಟರಿ ವಲಯ 3ರ ಸಾಂಸ್ಕೃತಿಕ ಪ್ರತಿಭಾ ಸ್ಪರ್ಧೆ

ಕಿನ್ನಿಗೋಳಿ: ಸೇವಾ ಸಂಸ್ಥೆಗಳು ಸಮಾಜಮುಖಿ ಕೆಲಸಗಳನ್ನು ಮಾಡುವುದರೊಂದಿಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ರಂಗಕ್ಕೆ ಕೂಡಾ ಪ್ರೋತ್ಸಾಹ ನೀಡಬೇಕು ಎಂದು ರೋಟರಿ ಜಿಲ್ಲೆ 3180, ವಲಯ 3ರ ರ ಸಹಾಯಕ ಗವರ್ನರ್ ಮನೋಹರ್ ರಾವ್ ಹೇಳಿದರು.
ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ನಡೆದ ರೋಟರಿ ವಲಯ 3ರ ಸಾಂಸ್ಕೃತಿಕ ಪ್ರತಿಭಾ ಸ್ಪರ್ಧೆಯ ಸಂದರ್ಭ ಅವರು ಮಾತನಾಡಿದರು.
ಕಾರ್ಕಳ ರೋಟರಿ ಕ್ಲಬ್ ಪ್ರಥಮ ಹಾಗೂ ಕಾಪು ರೋಟರಿ ಕ್ಲಬ್ ದ್ವಿತೀಯ ಪ್ರಶಸ್ತಿಗಳನ್ನು ಪಡೆದುಕೊಂಡಿತು.
ಕಿನ್ನಿಗೋಳಿ ರೋಟರಿ ಅಧ್ಯಕ್ಷ ಕಳ್ಳಿಗೆ ಬಾಲಕೃಷ್ಣ ಶೆಟ್ಟಿ, ವಲಯ ೩ ರ ಸಾಂಸ್ಕೃತಿಕ ಸಭಾಪತಿ ಸತೀಶ್ಚಂದ್ರ ಹೆಗ್ಡೆ, ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ, ಕಾರ್ಯದರ್ಶಿ ಯಶವಂತ ಐಕಳ, ಜೋಸ್ಸಿ ಪಿಂಟೋ, ಹೆರಿಕ್ ಪಾಯಸ್, ಶರತ್ ಶೆಟ್ಟಿ ಮತ್ತಿತರರಿದ್ದರು.

Comments

comments

Leave a Reply

Read previous post:
ಪಿ. ನವೀನ್ ಕಾರಂತರಿಗೆ ಡಾಕ್ಟರೇಟ್ ಪದವಿ

ಸುರತ್ಕಲ್ : ರಾಷ್ಟ್ರೀಯ ತಾಂತ್ರಿಕ ಮಹಾವಿದ್ಯಾಲಯ ಕರ್ನಾಟಕ, ಸುರತ್ಕಲ್‌ನ ಪಿ. ನವೀನ್ ಕಾರಂತರು ಮಂಡಿಸಿದ "ಮೊಡೆಲಿಂಗ್ ಆಂಡ್ ಎಕ್ಸ್‌ಪೆರಿಮೆಂಟಲ್ ಆನ್ ಫೋಲಿವಿನಿಡಿನ್ ಫ್ಲೋರೈಡ್ (ಪಿವಿಡಿಫ್) ಫಿಲ್ಮ್ ಫಾರ್ ಆಕ್ಟಿವೇಷನ್...

Close