ಕಿನ್ನಿಗೋಳಿಯಲ್ಲಿ ಗೂಡುದೀಪ ಸ್ಪರ್ಧೆ

ಪಠ್ಯೇತರ ಶಿಕ್ಷಣದ ಜೊತೆಗೆ ಕುಶಲ ವಿದ್ಯೆಯನ್ನು ಕರಗತ ಮಾಡಿಕೊಳ್ಳಬೇಕು. ಉತ್ತಮ ಜಾನಪದ ಆಚರಣೆ ಸಂಸ್ಕಾರಗಳನ್ನು ಬದುಕಿನಲ್ಲಿ ಮೈಗೂಡಿಸಬೇಕು ಎಂದು ರೋಟರಿ ವಲಯ ೩ ರ ಸಾಂಸ್ಕೃತಿಕ ಸಭಾಪತಿ ಸತೀಶ್ಚಂದ್ರ ಹೆಗ್ಡೆ ಹೇಳಿದರು.

ಕಿನ್ನಿಗೋಳಿ ರೋಟರಿ ಕ್ಲಬ್, ರೋಟರಾಕ್ಟ್ ಕ್ಲಬ್, ಇನ್ನರ್ ವೀಲ್ ಕ್ಲಬ್, ಯುಗಪುರುಷ, ಕಿನ್ನಿಗೋಳಿ ಸಾರ್ವಜನಿಕ ಗಣೇಶೋತ್ಸವ ಸಮಿತಿ, ಸೌತ್ ಕೆನರಾ ಫೋಟೊ ಗ್ರಾಫರ‍್ಸ್ ಅಸೋಸಿಯೇಶನ್ ಮುಲ್ಕಿ ವಲಯ ಹಾಗೂ ವಿಶ್ವನಾಥ ನವೋದಯ ಸ್ವ-ಸಹಾಯ ಸಂಘ ಎಸ್.ಕೋಡಿ, ಇವರ ಜಂಟಿ ಆಶ್ರಯದಲ್ಲಿ ಮಂಗಳವಾರ ಯುಗಪುರುಷ ಸಭಾಭವನದಲ್ಲಿ ನಡೆದ ಗೂಡುದೀಪ ಸ್ಪರ್ಧೆ ಬಹುಮಾನ ವಿತರಣೆ ಸಮಾರಂಭದಲ್ಲಿ ಮಾತನಾಡಿದರು.
ಜಗದೀಶ್ ಕೆ. ಅಮೀನ್ ಸುಂಕದ ಕಟ್ಟೆ ಪ್ರಥಮ, ಹೇಮಂತ್ ಕೋಡಿಕಲ್ ದ್ವಿತೀಯ ಹಾಗೂ ಹೃಷಿಕೇಶ್ ಪ್ರಭು ಇರುವೈಲು ತೃತೀಯ ಪ್ರಶಸ್ತಿ ಪಡೆದುಕೊಂಡರು.
ಯುಗಪುರುಷದ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ, ಜೆರಾಲ್ಡ್ ಮಿನೇಜಸ್, ಪಿ. ಸತೀಶ್ ರಾವ್, ಎಸ್. ವಿ ಶೆಣೈ, ಕಿನ್ನಿಗೋಳಿ ಇನ್ನರ್ ವೀಲ್ ಅಧ್ಯಕ್ಷೆ ಮಮತಾ ಶರತ್ ಶೆಟ್ಟಿ, ಕಾರ್ಯದರ್ಶಿ ಸಿಂತಿಯಾ ಕುಟಿನ್ಹೊ ಶಾಲೆಟ್ ಪಿಂಟೊ, ರೋಟರಾಕ್ಟ್ ಮಾಜಿ ಜಿಲ್ಲಾ ಪ್ರತಿನಿಧಿ ಸುಮೀತ್ ಕುಮಾರ್, ಪುಷ್ಪರಾಜ್, ಶರತ್ ಶೆಟ್ಟಿ, ಎಸ್.ಕೆ.ಪಿ.ಎ. ಮೂಲ್ಕಿ ವಲಯ ಕಾರ್ಯದರ್ಶಿ ಯಶವಂತ ಐಕಳ ಮತ್ತಿತರರು ಉಪಸ್ಥಿತರಿದ್ದರು.

Comments

comments

Leave a Reply

Read previous post:
ಡಾ ಕೆ ಪಿ ಮಧ್ಯಸ್ತರಿಗೆ ಸನ್ಮಾನ

Prakash M Suvarna ಮುಲ್ಕಿ: ಮುಲ್ಕಿಯಲ್ಲಿ ಕಳೆದ 60 ವರ್ಷಗಳಿ೦ದ ಮುಲ್ಕಿಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಡಾ ಕೆ ಪಿ ಮಧ್ಯಸ್ತರಿಗೆ ಅವರು ವೈದ್ಯಕೀಯ ಕ್ಸೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು...

Close