ಮೂಲ್ಕಿ ದೀಪಾವಳಿ ಸಂಭ್ರಮ

Prakash M Suvarna

ಮಂಗಳೂರಿನ ಶ್ರೀ ಚಂದ್ರಶೇಖರ ಸ್ವಾಮೀಜಿ. ಸಾವಿರಕ್ಕೂ ಹೆಚ್ಚು ಶ್ರಮಿಕ ಜನರ ಹೃದಯದಲ್ಲಿ ಬೆಳಕು ಹಚ್ಚುವ ವಿನೂತನ ಯೋಜನೆಗೆ ಸ್ವಾಮೀಜಿ ಚಾಲನೆ ನೀಡಿದರು. ಜೊತೆಗೆ ಸಿಹಿ ತಿಂಡಿ, ಪಟಾಕಿ ಹಾಗೂ ಹೊಸ ಬಟ್ಟೆಗಳ ಉಡುಗೊರೆಯೊಂದಿಗೆ ಸನ್ಮಾನಿಸುವ ಮೂಲಕ ದೀಪಾವಳಿಯ ಸಂಭ್ರಮಕ್ಕೆ ಮೆರುಗು ನೀಡಿದರು.
ಹೀಗೆ ಸರತಿಯ ಸಾಲಿನಲ್ಲಿ ನಿಂತವರು ಮಂಗಳೂರು ಮೂಲ್ಕಿ ಪರಿಸರದ ಶ್ರಮಜೀವಿಗಳು. ಟೂರಿಸ್ಟ್ ಕಾರು, ಆಟೋ ರಿಕ್ಷಾ ಹಾಗೂ ಟೆಂಪೋ ಚಾಲಕರಾಗಿ ದುಡಿಯುತ್ತಿರುವ ಇವರಿಗೆ ದೀಪಾವಳಿಯ ಸಂಭ್ರಮವನ್ನು ನೀಡಿದ್ದೇ ಮೂಲ್ಕಿಯ ಶ್ರೀ ಚಂದ್ರಶೇಖರಸ್ವಾಮೀಜಿ ಚಾರಿಟೇಬಲ್ ಟ್ರಸ್ಟ್. ಆಧ್ಯಾತ್ಮಿಕ ಗುರುವಾಗಿರುವ ಅಂತಾರಾಷ್ಟ್ರೀಯ ವಾಸ್ತುತಜ್ಞ ಹಾಗೂ ವೈಜ್ಞಾನಿಕ ಜ್ಯೋತಿಷ್ಯದ ಮೂಲಕ ಖ್ಯಾತಿ ಪಡೆದ ಶ್ರೀ ಚಂದ್ರಶೇಖರ ಸ್ವಾಮೀಜಿ ತಮ್ಮ ಕುಟುಂಬ ಸದಸ್ಯರೊಂದಿಗೆ ಶ್ರಮ ಜೀವಿಗಳಿಗೆ ಸಿಹಿತಿಂಡಿ, ಪಟಾಕಿ ಹಾಗೂ ಹೊಸಬಟ್ಟೆಗಳನ್ನು ನೀಡಿದರು. ಜೊತೆಗೆ ರೇಷ್ಮೇ ಶಾಲನ್ನು ಹಾಕಿ ಗೌರವದೊಂದಿಗೆ ಸನ್ಮಾನಿಸಿ ದೀಪಾವಳಿಯ ಸಂಭ್ರಮಕ್ಕೆ ಮೆರುಗು ನೀಡಿದರು.
ಜೊತೆಗೆ ಮೂಲ್ಕಿ ಪರಿಸರದ ಶ್ರಮಜೀವಿಗಳಿಗೆ ಹೊಸ ಯೋಜನೆಯನ್ನು ಚಂದ್ರಶೇಖರ ಸ್ವಾಮೀಜಿ ಪ್ರಕಟಿಸಿದರು. ಊರಿನ ರಾಯಭಾರಿಗಳಂತೆ ಕಾರ್ಯನಿರ್ವಹಿಸುವ ಈ ಪರಿಸರದ ಶ್ರಮಜೀವಿಗಳ ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ನೀಡುವುದು ಮತ್ತು ಯಾವುದೇ ಅಪಘಾತ ಸಂಭವಿಸಿದ್ದಲ್ಲಿ ತಕ್ಷಣ ಒಂದು ಲಕ್ಷ ರೂಪಾಯಿ ವರೆಗಿನ ನಗದು ನೆರವು ನೀಡುವ ನೀಡುವ ಯೋಜನೆಯನ್ನು ಪ್ರಕಟಿಸಿದರು.

 ಇಡೀ ದೇಶದಲ್ಲೇ ಇಂತಹ ಯೋಜನೆಯನ್ನು ಜಾರಿಗೆ ತಂದ ಉದಾಹರಣೆ ಇಲ್ಲ. ಶ್ರಮಜೀವಿಗಳ ಹೃದಯದಲ್ಲಿ ದೀಪವನ್ನು ಬೆಳಗಿಸಿ ಬದುಕಿಗೆ ನೈತಿಕ ಧೈರ್ಯ ತುಂಬುವ ಸ್ವಾಮೀಜಿ ಅವರ ಹೃದಯವೈಶಾಲ್ಯಕ್ಕೆ ಸ್ಥಳೀಯರು ಮಾರು ಹೋದರು. ಸುಮಾರು ಒಂದು ಸಾವಿರಕ್ಕೂ ಹೆಚ್ಚಿನ ಕುಟುಂಬಗಳಲ್ಲಿ ದೀಪಾವಳಿ ಸಂಭ್ರಮಕ್ಕೆ ಸ್ವಾಮೀಜಿ ಕಾರಣರಾದರು. ನಮ್ಮನ್ನು ಇದುವರೆಗೆ ಯಾರೂ ಇಷ್ಟೊಂದು ಪ್ರೀತಿಯಿಂದ ಕರೆದು ಸಂತೋಷ-ಸಂಭ್ರಮ ಹಂಚಿಕೊಂಡವರಿಲ್ಲ ಎಂದು ಶ್ರಮಿಕರು ಹೆಮ್ಮೆಯಿಂದ ಸ್ವಾಮೀಜಿಯನ್ನು ನೆನೆದರು.

ಮೈಸೂರಿನ ರಾಜವಂಶದ ರಾಜಗುರುವೂ ಆಗಿರುವ ಶ್ರೀ ಚಂದ್ರಶೇಖರ ಸ್ವಾಮೀಜಿಯವರು ಆಧ್ಯಾತ್ಮಿಕ, ವಾಸ್ತು ಹಾಗೂ ಜ್ಯೋತಿಷ್ಯದಲ್ಲಿ ಬಹುದೊಡ್ಡ ಹೆಸರು. ಅವರು ಕುಟುಂಬ ಸದಸ್ಯರೊಂದಿಗೆ ಸೇರಿ ತಮ್ಮ ಚಾರಿಟೇಬಲ್ ಟ್ರಸ್ಟ್ ಮೂಲಕ ಇಂತಹ ಜನಪರ ಯೋಜನೆಯನ್ನು ಜಾರಿಗೆ ತಂದಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯ.

Comments

comments

Leave a Reply

Read previous post:
ರೋಟರಿ ವಲಯ 3ರ ಸಾಂಸ್ಕೃತಿಕ ಪ್ರತಿಭಾ ಸ್ಪರ್ಧೆ

ಕಿನ್ನಿಗೋಳಿ: ಸೇವಾ ಸಂಸ್ಥೆಗಳು ಸಮಾಜಮುಖಿ ಕೆಲಸಗಳನ್ನು ಮಾಡುವುದರೊಂದಿಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ರಂಗಕ್ಕೆ ಕೂಡಾ ಪ್ರೋತ್ಸಾಹ ನೀಡಬೇಕು ಎಂದು ರೋಟರಿ ಜಿಲ್ಲೆ 3180, ವಲಯ 3ರ ರ ಸಹಾಯಕ...

Close