ವೃಷಾಂಕ್ ಖಾಡಿಲ್ಕರ್‌ಗೆ ಕೆ.ಜೆ. ಶೆಟ್ಟಿ ಕಡಂದಲೆ ಪ್ರಶಸ್ತಿ

ಯುಗಪುರುಷ ಮತ್ತು ವಿಜಯಾಕಲಾವಿದರು ನೀಡುವ ಎರಡನೆಯ ವರ್ಷದ ಕೆ. ಜೆ. ಶೆಟ್ಟಿ ಕಡಂದಲೆ ಪ್ರಶಸ್ತಿಗೆ ಪತ್ರಕರ್ತ ವೃಷಾಂಕ್ ಖಾಡಿಲ್ಕರ್ ಆಯ್ಕೆಯಾಗಿದ್ದಾರೆ. ಹಿರಿಯ ಪರಿಸರವಾದಿ, ನಿವೃತ್ತ ಶಿಕ್ಷಕ, ಪತ್ರಕರ್ತ, ಅಂಕಣಕಾರ ಕೆ.ಜೆ.ಶೆಟ್ಟಿಯವರ ನೆನಪಿನಲ್ಲಿ ನೀಡಲಾಗುವ ಪ್ರಶಸ್ತಿ ಇದಾಗಿದ್ದು ಖಾಡಿಲ್ಕರ್‌ರ ಕೊಕ್ಕಡದ ಎಂಡೋ ಸಂತೃಸ್ತರ ಕುರಿತು ರಾಜ್ಯದ ಓದುಗರ ಹಾಗೂ ಸರಕಾರದ ಗಮನ ಸೆಳೆದ ವರದಿಗೆ ಈ ಪ್ರಶಸ್ತಿ ದೊರಕಿದೆಯೆಂದು ಪ್ರಶಸ್ತಿಯ ಸಂಚಾಲಕ ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ ತಿಳಿಸಿದ್ದಾರೆ.
ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನವೆಂಬರ್ 18ರ ಸಂಜೆ 6ಕ್ಕೆ ಯುಗಪುರುಷ ಸಭಾಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಅಧ್ಯಕ್ಷತೆಯಲ್ಲಿ ಕಟೀಲಿನ ದೇವಳ ಅರ್ಚಕ ವೇದಮೂರ್ತಿ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣರ ಆಶೀರ್ವಚನದೊಂದಿಗೆ ರೂ. 15,000ನಗದು, ಪ್ರಶಸ್ತಿ ಪತ್ರ, ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಮುಲ್ಕಿ-ಮೂಡಬಿದ್ರೆ ಶಾಸಕ ಕೆ. ಅಭಯಚಂದ್ರ ಜೈನ್, ಹಿರಿಯ ಸಾಹಿತಿ ಬೋಳ ಚಿತ್ತರಂಜನ್ ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕಿರಣ್ ಮಂಜನಬೈಲು, ಮುಂಬೈನ ಡಿ.ಕೆ. ಕುಂದರ್, ತೀರ್ಪುಗಾರಲ್ಲೊಬ್ಬರಾದ ಸಾಹಿತಿ ಶಿಕ್ಷಕ ಸುಮುಖಾನಂದ ಜಲವಳ್ಳಿ, ಮೂಡಬಿದ್ರೆಯ ನಮ್ಮ ಬೆದ್ರ ಪತ್ರಿಕೆಯ ಸಂಪಾದಕ ಆಶ್ರಫ್ ವಾಲ್ಪಾಡಿ ಮತ್ತಿತರರು ಪಾಲ್ಗೊಳ್ಳಲಿದ್ದಾರೆಂದು ಪ್ರಶಸ್ತಿ ಸಮಿತಿಯ ಸಂಚಾಲಕ ಕೆ.ಜೆ. ಶೆಟ್ಟರ ಪುತ್ರ ಕಡಂದಲೆ ತಾರಾನಾಥ ಶೆಟ್ಟಿ ತಿಳಿಸಿದ್ದಾರೆ.
ಬಳಿಕ ವಿಜಯಾ ಕಲಾವಿದರಿಂದ ಹರೀಶ್ ಪಡುಬಿದ್ರಿಯವರ ರಾಜೇಶ್ ಕೆಂಚನಕೆರೆ ನಿರ್ದೇಶನದ ನಂಬುವರಾ? ಬುಡ್ಪರಾ? ತುಳು ನಾಟಕದ ಪ್ರಥಮ ಪ್ರದರ್ಶನ ಜರಗಲಿದೆಯೆಂದು ಶರತ್ ಶೆಟ್ಟಿ ತಿಳಿಸಿದ್ದಾರೆ.

 

Comments

comments

Leave a Reply

Read previous post:
ಗುತ್ತಕಾಡುವಿನಲ್ಲಿ ಬೃಹತ್ ರಕ್ತದಾನ ಶಿಬಿರ

ಗುತ್ತಕಾಡು ಯಂಗ್ ಫ್ರೆಂಡ್ಸ್ ಸ್ಪೋಟ್ಸ್ ಕ್ಲಬ್ (ರಿ) ಶಾಂತಿ ನಗರ, ಎಳತ್ತೂರು ಫ್ರೆಂಡ್ಸ್ ಕ್ಲಬ್ ಮತ್ತು ಮಹಿಳಾ ಘಟಕ, ಬ್ರಹ್ಮ ಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ...

Close