ಗೋಳಿಜೋರ ಗೂಡುದೀಪ ಸ್ಪರ್ಧೆ

ಕಿನ್ನಿಗೋಳಿಯ ಗೋಳಿಜೋರ ಶ್ರೀ ರಾಮ ಯುವಕ ವೃಂದದ ಆಶ್ರಯದಲ್ಲಿ ದೀಪಾವಳಿ ಆಚರಣೆ ಹಾಗೂ ಗೂಡುದೀಪ ಸ್ಪರ್ಧೆ ಬುಧವಾರ ಯುವಕ ಸಂಘದ ವಠಾರದಲ್ಲಿ ನಡೆಯಿತು. ಆಧುನಿಕ ಶೈಲಿ ಸ್ಪರ್ಧೆಯಲ್ಲಿ ಸೂರಜ್ ಸೂಟರ್ ಪೇಟೆ ಪ್ರಥಮ, ನಿಕ್ಷಿತ್ ಗೋಳಿಜೋರಾ ದ್ವಿತೀಯ ಹಾಗೂ ಸಂಪ್ರದಾಯ ಶೈಲಿಯಲ್ಲಿ ಮಂಜುನಾಥ ಗೋಳಿಜೋರಾ ಪ್ರಥಮ, ನವೀಶ್ ಗೋಳಿಜೋರಾ ದ್ವಿತೀಯ ಪ್ರಶಸ್ತಿ ಗಳಿಸಿದರು. ಉದ್ಯಮಿ ಸುಧಾಕರ ಶೆಟ್ಟಿ ವಿಜೇತರಿಗೆ ಬಹುಮಾನ ವಿತರಿಸಿದರು. ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಚಂದ್ರಶೇಖರ್, ಶ್ರೀ ರಾಮ ಯುವಕ ಸಂಘ ಅಧ್ಯಕ್ಷ ಚೇತನ್ ಕುಮಾರ್, ಕಾರ್ಯದರ್ಶಿ ರಾಜೀವಿ, ಶಂಕರ ಮಾಸ್ಟರ್, ಪ್ರಕಾಶ್ ಆಚಾರ್, ಅಬ್ದುಲ್ ರಹಿಮಾನ್, ಮನೋಜ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

 

Comments

comments

Leave a Reply

Read previous post:
ಸಂತ ಜೋಸೆಫ್ ಶಾಲೆಯಲ್ಲಿ “ದೀಪಾವಳಿ ಸಂಭ್ರಮ”

Pundalika Marathe ಬೆಳ್ಮಣ್: ತಂದೆತಾಯಿ ಗುರುಹಿರಿಯರನ್ನು ಗೌರವಿಸುವುದು, ಧರ್ಮವನ್ನು ಪರಿಪಾಲಿಸಿ ಸಮಾಜಕ್ಕೆ ಒಳಿತನ್ನು ನೀಡಿದಾಗ ಮನಸ್ಸು ಉಲ್ಲಾಸಿತಗೊಳ್ಳುತ್ತದೆ. ಎಲ್ಲಾ ಮತಧರ್ಮದವರಿಗೂ ಬೆಳಕು ಒಂದೇ. ದೇವರು ಒಬ್ಬನೇ. ಮನಸ್ಸಿನ...

Close