ನಿಡ್ಡೋಡಿ: ಆರೋಗ್ಯ ತಪಾಸಣಾ ಮತ್ತು ನೇತ್ರ ಚಿಕಿತ್ಸಾ ಶಿಬಿರ

ಸ್ವಚ್ಚ ಮಾಲಿನ್ಯ ರಹಿತ ಪರಿಸರ, ನಿಯಮಿತ ಆರೋಗ್ಯ ತಪಾಸಣೆ ಹಾಗೂ ವ್ಯಾಯಮ ಉತ್ತಮ ಬದುಕಿಗೆ ಮುನ್ನುಡಿ ಎಂದು ಲಯನ್ಸ್ ಪ್ರಾಂತೀಯ ಅಧ್ಯಕ್ಷ ರವಿಶಂಕರ್ ರೈ ಹೇಳಿದರು.
ಮುಚ್ಚೂರು ನೀರುಡೆ ಲಯನ್ಸ್ ಕ್ಲಬ್, ಕಲ್ಲಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಮತ್ತು ಹಾಲು ಉತ್ಪಾದಕರ ಸೇವಾ ಸಹಕಾರ ಸಂಘ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಮಿಲಾಗ್ರಿಸ್ ಕಾಲೇಜು ಮಂಗಳೂರು ಹಾಗೂ ಕಂಕನಾಡಿ ಫಾದರ್ ಮುಲ್ಲರ‍್ಸ್ ಆಸ್ಪತ್ರೆಯ ಸಹಭಾಗಿತ್ವದಲ್ಲಿ ಶ್ರೀ ಸತ್ಯನಾರಾಯಣ ಹಿರಿಯ ಪ್ರಾಥಮಿಕ ಶಾಲೆ ನಿಡ್ಡೋಡಿಯಲ್ಲಿ ಇತ್ತಿಚೆಗೆ ನಡೆದ ಉಚಿತ ಆರೋಗ್ಯ ತಪಾಸಣಾ ಮತ್ತು ನೇತ್ರ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ| ಡೇವಿಡ್ ಸಿಕ್ವೇರಾ ಶಿಬಿರದ ಬಗ್ಗೆ ಪೂರಕ ಮಾಹಿತಿ ನೀಡಿದರು.
ಡಾ| ಗಣನಾಥ ಎಕ್ಕಾರು, ಡಾ| ಜೆಸಿಂತಾ ಮಾರ್ಟಿಸ್, ದಿನಕರ ಶೆಟ್ಟಿ, ಗೀತಾ ಎಚ್. ಅಮೀನ್. ಅಶ್ವಿನಿ, ಮತ್ತಿತರರು ಉಪಸ್ಥಿತರಿದ್ದರು.
ಲಾಜರಸ್ ಡಿಕೋಸ್ತಾ ಸ್ವಾಗತಿಸಿ ಮಮತಾ ಧನ್ಯವಾದವಿತ್ತರು. ಡಾ| ರೋಶನ್ ಪಿಂಟೋ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಗೋಳಿಜೋರ ಗೂಡುದೀಪ ಸ್ಪರ್ಧೆ

ಕಿನ್ನಿಗೋಳಿಯ ಗೋಳಿಜೋರ ಶ್ರೀ ರಾಮ ಯುವಕ ವೃಂದದ ಆಶ್ರಯದಲ್ಲಿ ದೀಪಾವಳಿ ಆಚರಣೆ ಹಾಗೂ ಗೂಡುದೀಪ ಸ್ಪರ್ಧೆ ಬುಧವಾರ ಯುವಕ ಸಂಘದ ವಠಾರದಲ್ಲಿ ನಡೆಯಿತು. ಆಧುನಿಕ ಶೈಲಿ ಸ್ಪರ್ಧೆಯಲ್ಲಿ...

Close