ಸಚ್ಚೇರಿ ಪೇಟೆ ಗೂಡು ದೀಪ ಸ್ಪರ್ಧೆ

Prasanna Shetty ಸಚ್ಚೇರಿಪೇಟೆ: ಸಚ್ಚೇರಿ ಫ್ರೆಂಡ್ಸ್ ಇದರ ಆಶ್ರಯದಲ್ಲಿ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗಾಗಿ ದೀಪಾವಳಿ ಪ್ರಯುಕ್ತ ಗೂಡುದೀಪ ಸ್ಪರ್ಧೆಯನ್ನು ಇತ್ತೀಚಿಗೆ ಸಚ್ಚೇರಿಪೇಟೆಯಲ್ಲಿ ನಡೆಸಲಾಯಿತು. “ಹಿಂದಿನ ನಮ್ಮ ಹಬ್ಬದ ಸಂಸ್ಕೃತಿಯನ್ನು ಬಿಂಬಿಸುವ ಗೂಡುದೀಪಗಳು ಇತ್ತೀಚಿಗೆ ನಶಿಸಿ ಹೋಗುತ್ತಿದ್ದು ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ಹಿಂದಿನ ಸಂಸ್ಕೃತಿಯ ಪರಂಪರೆಯನ್ನು ನೆನಪಿಸುವಂತಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮಂಗಳೂರಿನ ಮಾಜಿ ಅಧ್ಯಕ್ಷರಾದ ಕೆ.ಪಿ.ಸುಚರಿತ ಶೆಟ್ಟಿ ಸಮಾರಂಭದ ಅಧ್ಯಕ್ಷತೆಯಲ್ಲಿ ಹೇಳಿದರು. ಗೂಡುದೀಪದ ಸ್ಪರ್ಧೆಯನ್ನು ಮುಂಡ್ಕೂರು-ಕಡಂದಲೆ ಲಯನ್ಸ್ ಕ್ಲಬ್‌ನ ಅಧ್ಯಕ್ಷರಾದ ವಿಜಯನಾಥ ಶೆಟ್ಟಿ ಉದ್ಘಾಟಿಸಿದರು, ಎ.ಪಿ.ಎಮ್.ಸಿ ಕಾರ್ಕಳ ಸುಬೋದ್ ಶೆಟ್ಟಿ, ಮುಂಡ್ಕೂರು ಪಂಚಾಯಿತಿ ಸದಸ್ಯ ಸತ್ಯಶಂಕರ್ ಶೆಟ್ಟಿ, ಶ್ರಿಧರ್ ಸನಿಲ್, ಭಾರ್ಗವ ಜೇಸಿಸ್ ಕ್ಲಬ್‌ನ ಅಧ್ಯಕ್ಷ ಸುರೇಂದ್ರ ಭಟ್, ರಮೇಶ್ ಶೆಟ್ಟಿ, ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ನಾಗೇಶ್, ಸಂದೀಪ್ ಶೆಟ್ಟಿ ಉಪಸ್ಥಿತರಿದ್ದರು. ಸ್ಪರ್ಧಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಬಲಿಂದ್ರನ ಪೊಲಿ ಕರೆಯುವ ಮೂಲಕ ಪ್ರಾರಂಭಗೊಂಡ ಕಾರ್ಯಕ್ರಮವನ್ನು ಉಮೇಶ್ ಆಚಾರಿ ನಿರ್ವಹಿಸಿದರು, ಪತ್ರಕರ್ತ ಪ್ರಸನ್ನ ಸಚ್ಚೇರಿ ಪೇಟೆ ಸ್ವಾಗತಿಸಿ ವಂದಿಸಿದರು.

Comments

comments

Leave a Reply

Read previous post:
ರೋಟರಿ ಶಾಲೆ : ಮಕ್ಕಳ ದಿನಾಚರಣೆ, ದೀಪಾವಳಿ ಆಚರಣೆ

ಕಿನ್ನಿಗೋಳಿ ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಮತ್ತು ದೀಪಾವಳಿ ಹಬ್ಬ ಆಚರಿಸಲಾಯಿತು. ಶಾಲಾ ಮಕ್ಕಳು ಜವಾಹಾರ್ ಲಾಲ್ ನೆಹರು ಅವರ ಚಿತ್ರಪಟಕ್ಕೆ ಪುಷ್ಪಾರ್ಚನೆ ಮಾಡುವ...

Close