ಸಂತ ಜೋಸೆಫ್ ಶಾಲೆಯಲ್ಲಿ “ದೀಪಾವಳಿ ಸಂಭ್ರಮ”

Pundalika Marathe

ಬೆಳ್ಮಣ್: ತಂದೆತಾಯಿ ಗುರುಹಿರಿಯರನ್ನು ಗೌರವಿಸುವುದು, ಧರ್ಮವನ್ನು ಪರಿಪಾಲಿಸಿ ಸಮಾಜಕ್ಕೆ ಒಳಿತನ್ನು ನೀಡಿದಾಗ ಮನಸ್ಸು ಉಲ್ಲಾಸಿತಗೊಳ್ಳುತ್ತದೆ. ಎಲ್ಲಾ ಮತಧರ್ಮದವರಿಗೂ ಬೆಳಕು ಒಂದೇ. ದೇವರು ಒಬ್ಬನೇ. ಮನಸ್ಸಿನ ಕತ್ತಲೆ ದೂರವಾಗಿ ಸಮಾಜಕ್ಕೆ ಬೆಳಕನ್ನು ನೀಡುವುದೇ ದೀಪಾವಳಿಯ ಸಂದೇಶ ಎಂದು ಧರ್ಮದರ್ಶಿ ಹರಿಕೃಷ್ಣ ಪುನರೂರು ನುಡಿದರು.
ಬೆಳ್ಮಣ್ ಸಂತ ಜೋಸೆಫ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ “ದೀಪಾವಳಿ ಸಂಭ್ರಮ” ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳಿಂದ ಸಾಮೂಹಿಕ ಪ್ರಾರ್ಥನೆ, ಭಗವದ್ಗೀತಾ ಪಠಣ, ಸಾಮೂಹಿಕ ದೀಪ ಪ್ರಜ್ವಲನ ಕಾರ್ಯಕ್ರಮ ನೆರವೇರಿತು. ಈ ಸಂದರ್ಭದಲ್ಲಿ ಶಾಲಾ ನಿವೃತ್ತ ಶಿಕ್ಷಕಿ ಸೆವ್ರಿನ್ ಮೆಂಡೋನ್ಸಾರವರಿಗೆ “ದೀಪಾವಳಿ ಗೌರವ” ನೀಡಿ ಸನ್ಮಾನಿಸಲಾಯಿತು.
ರೋಟರಿ ಜಿಲ್ಲಾ ನಿಕಟಪೂರ್ವ ಸಹಾಯಕ ಗವರ್ನರ್ ಕೆ.ಆರ್.ಪಾಟ್ಕರ್, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಗ್ರೆಗೊರಿ ಮಿನೇಜಸ್, ಬೆಳ್ಮಣ್ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಲ್ಲಿಕಾ ರಾವ್, ಗ್ರಾ.ಪಂ.ಸದಸ್ಯೆ ಗೀತಾ ಪ್ರಭು, ಕಾನ್ವೆಂಟ್‌ನ ಮುಖ್ಯಸ್ತೆ ಸಿಸ್ಟರ್ ಉಷಾಸ್ಟೆಲ್ಲಾ, ಆಂಗ್ಲ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕಿ ಜೆನೆಟ್ ಡಿಸೋಜಾ ಭಾಗವಹಿಸಿ ದೀಪಾವಳಿಯ ಶುಭಾಶಯ ಹಾರೈಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕ ರೆ.ಫಾ. ಲಾರೆನ್ಸ್ ಬಿ ಡಿ’ಸೋಜ “ಬೆಳಕು ಅಂದರೆ ದೇವರು. ಅನ್ಯೋನ್ಯತೆ, ಪ್ರೀತಿ ಸೌಹಾರ್ದತೆ, ಸಂಸ್ಕಾರ ಕಲಿಯಲು ಹಬ್ಬಗಳ ಆಚರಣೆ ನಿರಂತರವಾಗಿ ನಡೆಯಬೇಕು” ಎಂದರು.
ಸಮಾರಂಭದಲ್ಲಿ ಶಿಕ್ಷಣ ಸಂಯೋಜಕಿ ಶೈಲಜಾ ಹೆಗ್ಡೆ, ನಂದಳಿಕೆ ಕ್ಲಸ್ಟರ್‌ನ ಪಾಂಡುರಂಗ ಶೆಟ್ಟಿ, ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ,ರಾಜ್ಯಪ್ರಶಸ್ತಿ ವಿಜೇತ ಶಿಕ್ಷಕ ಕೆ.ಲಕ್ಷ್ಮೀಕಾಂತ್ ಭಟ್, ಅನುದಾನಿತ ಶಾಲಾ ಸಂಘದ ತಾಲೂಕು ಅಧ್ಯಕ್ಷ ವಿ.ಕೆ.ರಾವ್ ನಂದಳಿಕೆ, ಸಿಸ್ಟರ್ ಜೆಸಿಂತಾ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ಮೊನಿಕಾ ಸ್ವಾಗತಿಸಿದರು. ಹಿರಿಯ ಶಿಕ್ಷಕ ಬಿ.ಪುಂಡಲೀಕ ಮರಾಠೆ ಕಾರ್ಯಕ್ರಮ ಸಂಯೊಜಿಸಿದ್ದರು. ಶಿಕ್ಷಕ ವಿನ್ಸೆಂಟ್ ಪಿಂಟೊ ಧನ್ಯವಾದವಿತ್ತರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಪಟಾಕಿ ಬಿರುಸುಬಾಣ ಪ್ರದರ್ಶನಗೊಂಡವು.

Comments

comments

Leave a Reply

Read previous post:
ಜೇಸೀಸ್ ಸಂಸ್ಥೆಯ 33ನೇ ವರ್ಷದ ಪದಗ್ರಹಣ

Pundalika Marathe ಬೆಳ್ಮಣ್- ಪಂಚಾಯತ್ ಸಭಾಂಗಣದಲ್ಲಿ ಜರುಗಿದ ಬೆಳ್ಮಣ್ ಜೇಸೀಸ್ ಸಂಸ್ಥೆಯ 33ನೇ ವರ್ಷದ ಪದಗ್ರಹಣ ಸಮಾರಂಭದಲ್ಲಿ ನೂತನ ಅಧ್ಯಕ್ಷರಾಗಿ ಪುನಾರು ರಘುನಾಥ್ ನಾಯಕ್ ಅಧಿಕಾರ ಸ್ವೀಕರಿಸಿದರು....

Close