ಮೂಲ್ಕಿ : ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ

Bhagyavan Sanil

ಮೂಲ್ಕಿ: ಮೂಲ್ಕಿ ನಗರ ಪಂಚಾಯತ್ ವ್ಯಾಪ್ತಿಯ ರಸ್ತೆ ಹಾಗೂ ಮೂಲಭೂತ ವ್ಯವಸ್ಥೆಗಳ ಸಮಗ್ರ ಅಭಿವೃದ್ಧಿಗಾಗಿ ರೂ 5ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ ಅಭಯಚಂದ್ರ ಜೈನ್ ಹೇಳಿದರು.
ಶನಿವಾರ ಮೂಲ್ಕಿ ಕಾರ್ನಾಡು ಶ್ರೀ ನಾರಾಯಣ ಗುರು ಆಸ್ಪತ್ರೆ ರಸ್ತೆಯಲ್ಲಿ ರೂ 8ಲಕ್ಷ ವೆಚ್ಚದಲ್ಲಿ 145ಮೀ ಕಾಂಕ್ರಿಟೀಕರಣ ಹಾಗೂ ಮೂಲ್ಕಿ ಪರಿಸರದ ಎಂಟು ಕಡೆಗಳ ಒಳ ರಸ್ತೆಗಳಿಗೆ ಸುಮಾರು 29ಲಕ್ಷ ವೆಚ್ಚದಲ್ಲಿ ಇಂಟರ್‌ಲಾಕ್ ಕಾಮಗಾರಿ ಗುದ್ದಲಿಪೂಜೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಈ ಸಂದರ್ಭ ಮೂಲ್ಕಿ ನಗರ ಪಂಚಾಯತ್ ಅಧ್ಯಕ್ಷ ಶಶಿಕಾಂತ ಶೆಟ್ಟಿ, ಮುಖ್ಯಾಧಿಕಾರಿ ಹರಿಶ್ಚಂದ್ರ ಪಿ.ಸಾಲ್ಯಾನ್,ಗುತ್ತಿಗೆದಾರರಾದ ಅಬ್ಬಾಸ್ ಆಲಿ,ರಾಘು ಸುವರ್ಣ,ಮಾಜಿ ಅಧ್ಯಕ್ಷ ಬಿ.ಎಂ.ಆಶೀಪ್,ಇಂಜಿನಿಯರ್ ದಿನೇಶ್, ನಗರ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.

Comments

comments

Leave a Reply

Read previous post:
ಯುವವಾಹಿನಿ ಮೂಲ್ಕಿ ಘಟಕ : ತುಳುವೆರೆ ತುಡರ ಪರ್ಬ2012

Bhagyavan Sanil ಮೂಲ್ಕಿ:ನಾಡಿನ ಸಂಸ್ಕೃತಿ ಸಂಸ್ಕಾರದ ಜೊತೆಗೆ ಕೃಷಿ ಪದ್ದತಿಯ ತಿಳುವಳಿಕೆಯ ಜ್ಞಾನವನ್ನು ತಿಳಿಸಿ ಬೆಳೆಸುವುದು ದೀಪಾವಳಿಯ ಮಹತ್ವ ವಾಗಿದೆ ಎಂದು ಜಾನಪದ ಸಂಶೋಧಕ ಡಾ.ಗಣೇಶ್ ಅಮೀನ್...

Close