ಯುವವಾಹಿನಿ ಮೂಲ್ಕಿ ಘಟಕ : ತುಳುವೆರೆ ತುಡರ ಪರ್ಬ2012

Bhagyavan Sanil

ಮೂಲ್ಕಿ:ನಾಡಿನ ಸಂಸ್ಕೃತಿ ಸಂಸ್ಕಾರದ ಜೊತೆಗೆ ಕೃಷಿ ಪದ್ದತಿಯ ತಿಳುವಳಿಕೆಯ ಜ್ಞಾನವನ್ನು ತಿಳಿಸಿ ಬೆಳೆಸುವುದು ದೀಪಾವಳಿಯ ಮಹತ್ವ ವಾಗಿದೆ ಎಂದು ಜಾನಪದ ಸಂಶೋಧಕ ಡಾ.ಗಣೇಶ್ ಅಮೀನ್ ಸಂಕಮಾರ್ ಹೇಳಿದರು.
ಶನಿವಾರ ಯುವವಾಹಿನಿ ಮೂಲ್ಕಿ ಘಟಕದ ದಶಮಾನೋತ್ಸವ ಪ್ರಯುಕ್ತ ನಡೆದ ತುಳುವೆರೆ ತುಡರ ಪರ್ಬ2012 ಇದರ ದಿಕ್ಸೂಚಿ ಭಾಷಣಕಾರರಾಗಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯುವ ಪೀಳೀಗೆ ಆಧುನಿಕತೆಯತ್ತ ಒಲವು ತೋರಿಸಿದರೆ ಕೆಲವು ಸ್ಥಾಪಿತ ಹಿತಾಸಕ್ತಿಗಳು ಅದು ನಮ್ಮದು ಎಂಬ ತಾರತಮ್ಯವನ್ನು ಹುಟ್ಟುಹಾಕುವ ಮೂಲಕ ಜನಪದ ನಿಲುವುಗಳಿಗೆ ಕೊಡಲಿಏಟು ಹಾಕಲು ಯತ್ನಿಸುತ್ತಿರುವ ಈ ದಿನಗಳಲ್ಲಿ ಯುವ ವಾಹಿನಿ ಸಂಸ್ಥೆ ಎಲ್ಲಾ ಧರ್ಮದವರನ್ನು ಸೇರಿಸಿ ಸಂಸ್ಕೃತಿಯ ಬಗ್ಗೆ ತಿಳುವಳಿಕೆ ಮೂಡಿಸುತ್ತಿರುವುದು ಶ್ಲಾಘನೀಯ ಎಂದರು.
ಅತಿಥಿಯಾಗಿದ್ದ ಕಾರ್ನಾಡು ನೂರ್ ಮಸೀದಿಯ ಖತೀಭರಾದ ಮೌಲಾನಾ ಜಾಫರ್ ಸಾದಿಕ್ ಫೈಜಿ ಯವರು ಮಾತನಾಡಿ, ನಮ್ಮ ಧರ್ಮದ ಬಗ್ಗೆ ನಂಬಿಕೆ ಹಾಗೂ ಇತರ ಧರ್ಮದ ಬಗ್ಗೆ ಗೌರವಿರಿಸಿ ಅನ್ಯಧರ್ಮದ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ರಾಷ್ಟ್ರೀಯತೆ ಮತ್ತು ಧಾರ್ಮಿಕ ಭಾವನೆಗಳನ್ನು ಬಲಪಡಿಸುವ ಕಾರ್ಯಕ್ರಮವು ಹೆಚ್ಚಾಗಬೇಕು ಎಂದರು.
ಉದ್ಯಮಿ ರೋಲ್ಫಿ ಡಿಕೋಸ್ತಾ ಮಾತನಾಡಿ ಹಣವಂತರಿಗೆ ಮಣೆಹಾಕುವ ಈ ದಿನಗಳಲ್ಲಿ ಯಾವುದೇ ಸಹಕಾರ ಬಯಸದೆ ಎಲ್ಲಾ ಧರ್ಮದವರನ್ನು ಒಂದೆಡೆ ಸೇರಿಸಿ ನಡೆಸುವ ಕಾರ್ಯಕ್ರಮ ಸ್ತುತ್ಯರ್ಹ ಎಂದರು.
ಯುವ ವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ವಿಜಯ ಕುಮಾರ್ ಕುಬೆವೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಮೂಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ಯದೀಶ್ ಕೊಕ್ಕರಕಲ್ ಅತಿಥಿಯಾಗಿದ್ದರು.ಕಾರ್ಯಕ್ರಮ ನಿರ್ದೇಶಕರಾದ ವಿಜೇತ್ ಸುವರ್ಣ,ಭಾರತಿ ಭಾಸ್ಕರ ಕೋಟ್ಯಾನ್ ವೇದಿಕೆಯಲ್ಲಿದ್ದರು. ಹಿರಿಯ ರಂಗ ಕರ್ಮಿ ಚಲನ ಚಿತ್ರ ನಟ ಜನಾರ್ಧನ ಬಿ.ಕಿರೋಡಿಯನ್ ರವರನ್ನು ತುಡರ ಪರ್ಬದ ಪ್ರಯುಕ್ತ ಸನ್ಮಾನಿಸಲಾಯಿತು.
ಈ ಸಂದರ್ಭ ಗೋಪೂಜೆ, ಬಲೀಂದ್ರ ಪೂಜೆ,ದೀಪಾರಾಧನೆ,ತುಳಸಿ ಪೂಜೆಯ ಪ್ರತ್ಯಕ್ಷಿತೆಗಳು ಯುವವಾಹಿನಿ ಸದಸ್ಯರಿಂದ ನಡೆದವು ಬೆಲ್ಲದ ಗಟ್ಟಿ ಮತ್ತು ಅವಲಕ್ಕಿ ಬಂದವರಿಗೆಲ್ಲಾ ನೀಡಲಾಯಿತು.
ಘಟಕದ ಅಧ್ಯಕ್ಷ ರಾಮಚಂದ್ರ.ಟಿ.ಕೋಟ್ಯಾನ್ ಸ್ವಾಗತಿಸಿದರು, ರಂಗಕರ್ಮಿ ನರೇಂದ್ರ ಕೆರೆಕಾಡು ನಿರೂಪಿಸಿದರು.ಕಾರ್ಯದರ್ಶಿ ಕುಶಲಾ ಎಸ್.ಕೋಟ್ಯಾನ್ ವಂದಿಸಿದರು. ಬಳಿಕ ತುಳುನಾಡ್ದ ಬೊಲ್ಲೆಂದ್ರೆ ತುಳು ಯಕ್ಷಗಾನ ನಡೆಯಿತು.

Comments

comments

Leave a Reply

Read previous post:
ಕಿನ್ನಿಗೋಳಿಯಲ್ಲಿ ಪ್ಲಾಸ್ಟಿಕ್ ಜನಜಾಗೃತಿ ಜಾಥಾ

ಕಿನ್ನಿಗೋಳಿ ಮತ್ತು ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಘನ ಮತ್ತು ದ್ರವ ತ್ರ್ಯಾಜ್ಯ ವಿಲೇವಾರಿ ಜಂಟೀ ಸಮಿತಿಯ ಆಶ್ರಯದಲ್ಲಿ ಹಾಗೂ ತೋಕೂರು ಮುಲ್ಕಿ ರಾಮಕೃಷ್ಣ ಪೂಂಜಾ ಕೈಗಾರಿಕಾ ತರಬೇತಿ...

Close