ಗುತ್ತಕಾಡುವಿನಲ್ಲಿ ರಕ್ತದಾನ ಶಿಬಿರ

ಕಿನ್ನಿಗೋಳಿ: ಗ್ರಾಮೀಣ ಪ್ರದೇಶದ ಯುವ ಜನರು ರಕ್ತದಾನ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು. ಸಮಾಜದ ಏಳಿಗೆಗಾಗಿ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಕ.ಸಾ.ಪ. ಮಾಜಿ ರಾಜಾಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು.
ಗುತ್ತಕಾಡು ಯಂಗ್ ಫ್ರೆಂಡ್ಸ್ ಸ್ಪೋಟ್ಸ್ ಕ್ಲಬ್ ಶಾಂತಿ ನಗರ, ಎಳತ್ತೂರು ಫ್ರೆಂಡ್ಸ್ ಕ್ಲಬ್ ಮತ್ತು ಮಹಿಳಾ ಘಟಕ, ಬ್ರಹ್ಮ ಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಸಮಿತಿ ತಾಳಿಪಾಡಿ, ಶ್ರೀ ಮೂಕಾಂಬಿಕ ದೇವಸ್ಥಾನ .ಸೇವಾ ಸಮಿತಿ, ಯುವ ಬಳಗ ಶಾಂತಿನಗರ, ಶ್ರೀ ರಾಮ ಯುವಕ ವೃಂದ ಗೋಳಿಜೋರ ತಾಳಿಪಾಡಿ ಫ್ರೆಂಡ್ಸ್ ಹಾಗೂ ಕೆ.ಎಂ.ಸಿ. ಆಸ್ಪತ್ರೆ ಮಂಗಳೂರು ಇವರ ಜಂಟೀ ಆಶ್ರಯದಲ್ಲಿ ಭಾನುವಾರ ಗುತ್ತಕಾಡು ದ.ಕ. ಜಿ. ಪ. ಹಿ. ಪ್ರಾ. ಶಾಲೆಯಲ್ಲಿ ನಡೆದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ ಕಾರ್ಯಕ್ರಮ ಉದ್ಘಾಟಿಸಿದರು. ಶ್ರೀ ಮೂಕಾಂಬಿಕ ಸೇವಾಸಮಿತಿ ಅಧ್ಯಕ್ಷ ಚಂದ್ರಶೇಖರ್, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮೋಕ್ತೇಸರ ಸಂತೋಷ್ ಕುಮಾರ್ ಹೆಗ್ಡೆ, ಎ.ಪಿ.ಎಂ.ಸಿ ಸದಸ್ಯ ಪ್ರಮೋದ್ ಕುಮಾರ್, ಮಂಗಳೂರು ಉದ್ಯಮಿ ಅಖ್ತರ್ ಬಾ, ರಾಮಯುವಕ ವೃಂದ ಗೋಳಿಜೋರ ಗೌರವಾಧ್ಯಕ್ಷ ಪ್ರಕಾಶ್ ಹೆಗ್ಡೆ, ತಾಳಿಪಾಡಿ ಫ್ರೆಂಡ್ಸ್ ಗೌರವಾಧ್ಯಕ್ಷ ಆಲ್ವಿನ್ ಸಲ್ಡಾನ್ಹ, ನಕಾಶ್, ಬಾಲಕೃಷ್ಣ, ಚೇತನ್ ಕುಮಾರ್ , ಹರ್ಷಿತ್, ಆಸ್ಕರ್ ಉಪಸ್ಥಿತರಿದ್ದರು. ಶಶಿಕಾಂತ್ ಸ್ವಾಗತಿಸಿ ಶ್ಯಾಮಸುಂದರ್ ಶೆಟ್ಟಿ ವಂದಿಸಿದರು, ದಿವಾಕರ್ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಪಕ್ಷಿಕೆರೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಪ್ರಾರಂಭ

ಪಕ್ಷಿಕೆರೆ: ರೈತ ಬಾಂಧವರು ಮತ್ತು ಬ್ಯಾಂಕ್ ಗ್ರಾಹಕರು ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳಬೇಕು ಹೀಗಾದರೆ ನಮ್ಮ ದೇಶ ಎಲ್ಲ ರೀತಿಯಲ್ಲಿ ಪ್ರಗತಿ ಹೊಂದಲಿದೆ ಎಂದು ದ. ಕ. ಜಿಲ್ಲಾ ಕೇಂದ್ರ...

Close