ಕೆ.ಜೆ. ಶೆಟ್ಟಿ ಕಡಂದಲೆ ಪ್ರಶಸ್ತಿ

ಕಿನ್ನಿಗೋಳಿ : ಸಮಾಜದ ಅವ್ಯವಸ್ಥೆಗಳನ್ನು ಸರಿಪಡಿಸಲು ಏಕಪಕ್ಷೀಯವಾಗಿರದೆ ಮಾಧ್ಯಮದ ಮೂಲಕ ಸುಸ್ಥಿತಿಗೆ ತರಲು ಪತ್ರಕರ್ತರು ಸದಾ ಶ್ರಮಿಸಬೇಕು. ಪರಿಸರವಾದಿ, ಪತ್ರಕರ್ತ, ಅಂಕಣಕಾರ ಕೆ.ಜೆ.ಶೆಟ್ಟಿ ಅವರು ಯುವ ಪತ್ರಕರ್ತರಿಗೆ ಮಾರ್ಗದರ್ಶಕರು ಎಂದು ಕ.ಸಾ.ಪ. ಮಾಜಿ ರಾಜಾಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು.

ಅವರು ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಭಾನುವಾರದಂದು ನಡೆದ ಯುಗಪುರುಷ ಮತ್ತು ವಿಜಯಾಕಲಾವಿದರು ನೀಡುವ ಎರಡನೆಯ ವರ್ಷದ ಕೆ. ಜೆ. ಶೆಟ್ಟಿ ಕಡಂದಲೆ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹೊಸದಿಗಂತ ಉಪಸಂಪಾದಕ ವೃಷಾಂಕ್ ಖಾಡಿಲ್ಕರ್ ಅವರನ್ನು ಕಟೀಲಿನ ದೇವಳ ಅರ್ಚಕ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ ಪ್ರಶಸ್ತಿ ನೀಡಿ ಗೌರವಿಸಿದರು.
ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ, ಮುಲ್ಕಿ-ಮೂಡಬಿದ್ರೆ ಶಾಸಕ ಕೆ. ಅಭಯಚಂದ್ರ ಜೈನ್, ಹಿರಿಯ ಸಾಹಿತಿ ಬೋಳ ಚಿತ್ತರಂಜನ್ ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಮುಂಬೈನ ಡಿ.ಕೆ. ಕುಂದರ್, ಸಾಹಿತಿ ಸುಮುಖಾನಂದ ಜಲವಳ್ಳಿ, ಮೂಡಬಿದ್ರೆ ನಮ್ಮ ಬೆದ್ರ ಪತ್ರಿಕೆ ಸಂಪಾದಕ ಆಶ್ರಫ್ ವಾಲ್ಪಾಡಿ, ಪ್ರಶಸ್ತಿ ಸಮಿತಿಯ ಸಂಚಾಲಕ ಕೆ.ಜೆ. ಶೆಟ್ಟರ ಪುತ್ರ ಕಡಂದಲೆ ತಾರಾನಾಥ ಶೆಟ್ಟಿ, ಸಾಯಿನಾಥ ಶೆಟ್ಟಿ, ಸಾಲೆತ್ತೂರು ಜಯರಾಮ ಶೆಟ್ಟಿ ಉಪಸ್ಥಿತರಿದ್ದರು.
ಶರತ್ ಶೆಟ್ಟಿ ಸ್ವಾಗತಿಸಿ, ಲಕ್ಷಣ್ ಬಿ.ಬಿ. ಏಳಿಂಜೆ ವಂದಿಸಿದರು, ನರೇಂದ್ರ ಕೆರೆಕಾಡು ಕಾರ್ಯಕ್ರಮ ನಿರೂಪಿಸಿದರು.

 

 

Comments

comments

Leave a Reply

Read previous post:
ಗುತ್ತಕಾಡುವಿನಲ್ಲಿ ರಕ್ತದಾನ ಶಿಬಿರ

ಕಿನ್ನಿಗೋಳಿ: ಗ್ರಾಮೀಣ ಪ್ರದೇಶದ ಯುವ ಜನರು ರಕ್ತದಾನ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು. ಸಮಾಜದ ಏಳಿಗೆಗಾಗಿ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಕ.ಸಾ.ಪ. ಮಾಜಿ ರಾಜಾಧ್ಯಕ್ಷ ಹರಿಕೃಷ್ಣ ಪುನರೂರು...

Close