ಕೆಮ್ರಾಲ್ ಶಾಲೆಯ ವಿದ್ಯಾರ್ಥಿಗಳಿಂದ ವಸ್ತು ಪ್ರದರ್ಶನ

ಕಿನ್ನಿಗೋಳಿ : ಕೆಮ್ರಾಲ್ ಸರಕಾರಿ ಫ್ರೌಢಶಾಲೆಯ ವಿದ್ಯಾರ್ಥಿಗಳು ಮಕ್ಕಳ ದಿನಾಚರಣೆಯನ್ನು ವಸ್ತು ಪ್ರದರ್ಶನ ಆಯೋಜಿಸುವ ಮೂಲಕ ವಿಶಿಷ್ಠ ರೀತಿಯಲ್ಲಿ ಆಚರಿಸಿದರು. ಪಠ್ಯ ವಿಷಯಕ್ಕೆ ಸಂಬಂಧಿಸಿದ ವಿಜ್ಞಾನದ ಪ್ರಯೋಗಗಳು, ಕರಕುಶಲ ವಸ್ತುಗಳು, ಪೇಪರ್ ಕ್ರಾಪ್ಟ್, ಮಣ್ಣಿನ ಮಾದರಿಗಳು, ನಾಣ್ಯ ಸಂಗ್ರಹ, ಔಷಧಯುಕ್ತ ಸಸ್ಯಗಳು, ಇತಿಹಾಸ ಅಧ್ಯಯನದ ಸಂಗ್ರಹ, ಹಳೇಕಾಲದ ವಸ್ತುಗಳ ಸಂಗ್ರಹ ಪ್ರದರ್ಶನಕ್ಕೆ ಇಡಲಾಗಿತ್ತು. ಮಕ್ಕಳು ಬಹಳ ಆಸಕ್ತಿಯಿಂದ ಮಾದರಿಗಳ ಬಗ್ಗೆ ಹೆಮ್ಮೆಯಿಂದ ವಿವರಿಸಿ ಆನಂದಪಟ್ಟರು.
ಸುಶಾಂತ್- ರಾಕೆಟ್ ಉಡಾವಣಾ ಪ್ರಾತ್ಯಕ್ಷಿಕೆ, ಪ್ರದೀಪ್- ಕೇಬಲ್ ಕಾರು, ಲಿಪ್ಟ್, ಡೈನಮೊ, ಅಜರುದ್ದಿನ್- ಬಟಾಟೆಯಿಂದ ವಿದ್ಯುತ್, ಪ್ರಜ್ವಲ್- ಸೆಗಣಿಯಿಂದ ವಿದ್ಯುತ್, ಅಬೂಬಕ್ಕರ್ ಸಿದ್ದೀಕ್- ನೀರಿನ ಟ್ಯಾಂಕ್ ಭರ್ತಿಯಾಗುವಾಗ ಬಝರ್ ಮಾಡುವ ಮಾದರಿ, ನವೀನ್- ಗಾಳಿಚಕ್ರ ಅಲ್ಲದೆ ಇನ್ನಿತರ ಮಾದರಿಗಳು ಗ್ರಾಮೀಣ ವಿದ್ಯಾರ್ಥಿಗಳ ಇಚ್ಚಾ ಶಕ್ತಿ ನಗರದವರನ್ನು ಮೀರಿಸುವಂತಿತ್ತ್ತು.
ಮಕ್ಕಳ ವಸ್ತು ಪ್ರದರ್ಶನವನ್ನು ಕಿನ್ನಿಗೋಳಿ ರೋಟರಿ ಕ್ಲಬ್ ಕಾರ್ಯದರ್ಶಿ ಯಶವಂತ ಐಕಳ ಉದ್ಘಾಟಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಸಂಧ್ಯಾ ಎನ್. ಹೆಗ್ಡೆ, ಶಿಕ್ಷಕರಾದ ರಾಮಚಂದ್ರ ಪೆರ್ಮುತ್ತಾಯ,. ಮಥುರಾ, ಬಿ. ರಾಘವೇಂದ್ರ ರಾವ್, ಶಾಲಾಭಿವೃದ್ಧಿ ಸಮಿತಿ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

Comments

comments

Leave a Reply

Read previous post:
ಕೆ.ಜೆ. ಶೆಟ್ಟಿ ಕಡಂದಲೆ ಪ್ರಶಸ್ತಿ

ಕಿನ್ನಿಗೋಳಿ : ಸಮಾಜದ ಅವ್ಯವಸ್ಥೆಗಳನ್ನು ಸರಿಪಡಿಸಲು ಏಕಪಕ್ಷೀಯವಾಗಿರದೆ ಮಾಧ್ಯಮದ ಮೂಲಕ ಸುಸ್ಥಿತಿಗೆ ತರಲು ಪತ್ರಕರ್ತರು ಸದಾ ಶ್ರಮಿಸಬೇಕು. ಪರಿಸರವಾದಿ, ಪತ್ರಕರ್ತ, ಅಂಕಣಕಾರ ಕೆ.ಜೆ.ಶೆಟ್ಟಿ ಅವರು ಯುವ ಪತ್ರಕರ್ತರಿಗೆ ಮಾರ್ಗದರ್ಶಕರು...

Close