ಪಕ್ಷಿಕೆರೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಪ್ರಾರಂಭ

ಪಕ್ಷಿಕೆರೆ: ರೈತ ಬಾಂಧವರು ಮತ್ತು ಬ್ಯಾಂಕ್ ಗ್ರಾಹಕರು ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳಬೇಕು ಹೀಗಾದರೆ ನಮ್ಮ ದೇಶ ಎಲ್ಲ ರೀತಿಯಲ್ಲಿ ಪ್ರಗತಿ ಹೊಂದಲಿದೆ ಎಂದು ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ. ಎನ್. ರಾಜೇಂದ್ರ ಕುಮಾರ್ ಹೇಳಿದರು.
ಕೆಮ್ರಾಲ್ ಗ್ರಾಮ ಪಕ್ಷಿಕೆರೆಯ ಬೋಜ ಅಮೀನ್ ಕಾಂಪ್ಲೆಕ್ಸ್ ನಲ್ಲಿ ಭಾನುವಾರ ಉದ್ಘಾಟನೆಗೊಂಡ ಕಿನ್ನಿಗೋಳಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ನ ನೂತನ ಶಾಖೆಯ ಸಮಾರಂಭದಲ್ಲಿ ದೀಪ ಬೆಳಗಿಸಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಾಖೆಯ ಉದ್ಘಾಟನೆಯನ್ನು ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ನೇರವೇರಿಸಿದರು. ಮೂಲ್ಕಿ-ಮೂಡಬಿದ್ರೆ ಶಾಸಕ ಕೆ. ಅಭಯಚಂದ್ರ ಜೈನ್ ಠೇವಣಿ ಪತ್ರ ಬಿಡುಗಡೆಗೊಳಿಸಿದರು. ಭದ್ರತಾ ಕೊಠಡಿಯನ್ನು ಪಕ್ಷಿಕೆರೆ ಚರ್ಚ್ ಧರ್ಮಗುರು ರೆ| ಫಾ| ಆಂದ್ರೂ ಲಿಯೋ ಡಿ’ಸೋಜ ಉದ್ಘಾಟಿಸಿದರು. ಕಟೀಲು ಎಸ್.ಡಿ.ಪಿ.ಟಿ. ಕಾಲೇಜು ಪ್ರಾಚಾರ್ಯ ಎಂ. ಬಾಲಕೃಷ್ಣ ಶೆಟ್ಟಿ ದಿಕ್ಸೂಚಿ ಭಾಷಣ ನೀಡಿದರು.
ಮಂಗಳೂರು ದ.ಕ. ಜಿಲ್ಲಾ ಸಹಕಾರಿ ಒಕ್ಕೂಟದ ಅಧ್ಯಕ್ಷ ಪಿ.ಬಿ. ದಿವಾಕರ ರೈ, ಸಹಕಾರ ಸಂಘಗಳ ಸಹಾಯಕ ನಿಬಂಧಕ ಬಿ.ಕೆ. ಸಲೀಂ, ತಾಲೂಕು ಪಂಚಾಯಿತಿ ಸದಸ್ಯೆ ಬೇಬಿ ಕೋಟ್ಯಾನ್, ಕೆ.ವಿ. ಎಸ್.ಎಸ್. ಬ್ಯಾಂಕ್ ಉಪಾಧ್ಯಕ್ಷ ಚಾರ್ಲ್ಸ್ ರೋಡ್ರಿಗಸ್ ಬ್ಯಾಂಕಿನ ಆಡಳಿತ ಮಂಡಳಿಯ ನಿರ್ದೇಶಕರಾದ ಮಾರ್ಗರೆಟ್ ವಾಸ್, ಪುರಂದರ ಶೆಟ್ಟಿ, ಪ್ರಭಾಕರ ಶೆಟ್ಟಿ, ಶೇಷರಾಮ ಶೆಟ್ಟಿ, ರಘುರಾಮ ಅಡ್ಯಂತಾಯ, ಕಿರಣ್ ಕುಮಾರ್ ಶೆಟ್ಟಿ, ಶೀನ ಎಂ. ಬ್ಯಾಂಕಿನ ಅಧಿಕಾರಿ ವಿವೇಕಾನಂದ ಉಪಸ್ಥಿತರಿದ್ದರು.
ಕೆ.ವಿ.ಎಸ್.ಎಸ್. ಬ್ಯಾಂಕ್ ಅಧ್ಯಕ್ಷ ಕೆ. ಲವ ಶೆಟ್ಟಿ ಸ್ವಾಗತಿಸಿ ಪ್ರಸ್ತಾವನೆಗೈದರು. ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಶೇಖರ್ ಶೆಟ್ಟಿ ಮಾಡ ವಂದಿಸಿದರು. ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

 

Comments

comments

Leave a Reply

Read previous post:
ಮೂಡಬಿದ್ರೆ ಆಳ್ವಾಸ್ ನುಡಿಸಿರಿ ವೈಭವ

Mithun Kodethoor ಮೂಡಬಿದ್ರೆ ಆಳ್ವಾಸ್ ನುಡಿಸಿರಿ ವೈಭವ Dolu Navilu Kunitha Bharatha Natya Kavisamaya-Jinadatta Desayi Padekallu-Visnu-Bhat

Close