ಡಿ. 2 ಅಂಗರಗುಡ್ಡೆ ಶ್ರೀ ರಾಮ ಭಜನಾ ಮಂದಿರ ಲೋಕಾರ್ಪಣ

ಸುಮಾರು 27 ವರ್ಷಗಳ ಹಿಂದೆ ಶಿಮಂತೂರು ಗ್ರಾಮದ ಅಂಗರ ಗುಡ್ಡೆ ಪರಿಸರದ ಯುವಕರು ಸೇರಿ ಶ್ರೀರಾಮ ಭಜನಾ ಮಂಡಳಿ ಸ್ಥಾಪಿಸಿ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮ ನಡೆಸಿಕೋಡು ಬರುತ್ತ್ತಿದ್ದರು. ಪ್ರಸ್ತುತ ಹೊಸ ಶ್ರೀರಾಮ ಭಜನಾ ಮಂದಿರವು ಊರ ಮತ್ತು ಮುಂಬೈ ಸಹೃದಯ ದಾನಿಗಳ ನೆರವಿನೊಂದಿಗೆ ಸುಮಾರು ೩೫ಲಕ್ಷರೂ ವೆಚ್ಚದಲ್ಲಿ ಉತ್ತರ ಭಾರತ ವಾಸ್ತು ಶೈಲಿಯಲ್ಲಿ ಮನಸೆಳೆಯುವಂತೆ ನಿರ್ಮಾಣಗೊಂಡಿದೆ ಎಂದು ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಛತ್ರಪತಿ ಶಿವಾಜಿ ಪ್ರಶಸ್ತಿ ಪುರಸ್ಕೃತ ಮುಂಬೈ ಉದ್ಯಮಿ ಜಯ.ಎ.ಶೆಟ್ಟಿ ಹೇಳಿದರು.
ಮಂಗಳವಾರ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಡಿ.1ರಂದು ಸಂಜೆ 4 ಹಂಟೆಗೆ ಶಿಮಂತೂರು ಶ್ರೀ ಆದಿ ಜನಾರ್ದನ ದೇವಸ್ಥಾನ ದಿಂದ ಶ್ರೀ ರಾಮ ದೇವರ ರಜತ ಚಿತ್ರಪಟವನ್ನು ವಿಜೃಂಭಣೆಯಿಂದ ಮಂದಿರಕ್ಕೆ ತರಲಾಗುವುದು. ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಭಾರತೀಯ ಕ್ರಿಕೆಟ್ ತಂಡದ ಆಟಗಾರ ರೋಹಿತ್ ಶರ್ಮಾ ಬರುವ ನಿರೀಕ್ಷೆ ಇದ್ದು. ಪ್ರತಿಷ್ಠಾ ಮಹೋತ್ಸವಕ್ಕೆ ಸಹಸ್ರಾರು ಜನರು ಭಾಗವಹಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಗ್ರಾಮೀಣ ಜನರ ಆರೋಗ್ಯ ಮತ್ತು ಶಿಕ್ಷಣಕ್ಕೆ ಪೂರಕವಾಗಿ ವಿವಿಧ ಯೋಜನೆಗಳನ್ನು ಈ ಮಂದಿರದ ಮುಖೇನ ನಡೆಸಲಾಗುವುದು ಎಂದರು. ಈ ಸಂದರ್ಭ ಅಧ್ಯಕ್ಷ ತಾರಾನಾಥ ದೇವಾಡಿಗ, ಕಾರ್ಯದರ್ಶಿ ಕೃಷ್ಣ ಶೆಟ್ಟಿಗಾರ್,ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ರಾಜೇಶ್ ಕೆಂಚನಕೆರೆ, ಪ್ರಚಾರ ಸಮಿತಿ ಅಧ್ಯಕ್ಷ ಜೀವನ್ ಶೆಟ್ಟಿ, ಸತೀಶ್ ಆಚಾರ್ಯ, ವಿಜಯ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಶ್ರೀ ರಾಮ ಭಜನಾ ಮಂದಿರದ ಲೋಕಾರ್ಪಣ ಕಾರ್ಯಕ್ರಮವು ನ.30ರಿಂದ ಡಿ2 ವರೆಗೆ ನಡೆಯಲಿದೆ. ನ.30ಶುಕ್ರವಾರ ಗಂಟೆ 9ರಿಂದ ದೇವತಾ ಪ್ರಾರ್ಥನೆ, ತೋರಣ ಮುಹೂರ್ತ ಉಗ್ರಾಣ ಮುಹೂರ್ತ, ಗಣಯಾಗ ಮತ್ತು ಶ್ರೀಮದ್ರಾಮಾಯಣ ಪಾರಾಯಣ ಸಾಯಂ. 4.30ರಿಂದ ಸಪ್ತಶುದ್ಧಿ ಪ್ರಾಸಾದ ಶುದ್ಧಿ, ವಾಸ್ತು ಪೂಜೆ, ವಾಸ್ತುಹೋಮ, ರಾಕ್ಷೆಘ್ನ ಹೋಮ, ದಿಕ್ಪಾಲ ಬಲಿ. ತಾ. 1 ಶನಿವಾರ ಗಂಟೆ 8ರಿಂದ ವಿಷ್ಣು ಸಹಸ್ರನಾಮ ಹವನ, ಶ್ರೀರಾಮ ಮಂತ್ರ ಜಪ, ಶ್ರೀ ಹರಿ ವಾಯು ಸ್ತುತಿ ಸಂಜೆ 4.30ರಿಂದ ಶ್ರೀರಾಮ ಭದ್ರಕ ಮಂಡಲ ಪೂಜೆ.
ಅದೇ ದಿನ ಧಾರ್ಮಿಕ ಸಭಾ ಕಾರ್ಯಕ್ರಮ ಅಧ್ಯಕ್ಷತೆ: ಕೆ. ಭುವನಾಭಿರಾಮ ಉಡುಪ ಆಶೀರ್ವಚನ: ವೇ| ಮೂ| ನಾರಾಯಣ ಭಟ್ ಕಿಲ್ಪಾಡಿ ಮುಖ್ಯ ಅತಿಥಿಗಳಾಗಿ: ಪಠೇಲ್ ವಾಸುದೇವ ರಾವ್ ಪುನರೂರು, ಮೀನಾಕ್ಷಿ ದೇವಾಡಿಗ, ಶಶಿಕಾಂತ ಶೆಟ್ಟಿ, ಕಿಶೋರ್ ದೇವಾಡಿಗ, ಜಿ.ಕೆ. ಕೆಂಚನಕೆರೆ, ದೇವಪ್ರಸಾದ್ ಪುನರೂರು, ಶ್ರೀನಾಥ್ ಪಾಲ್ಗೊಳ್ಳಲಿದ್ದಾರೆ. ರಾತ್ರಿ 9ಕ್ಕೆ: ಯುವವಾಹಿನಿ ಮೂಲ್ಕಿ ಇವರಿಂದ ತುಳುನಾಡ ವೈಭವ ಕಾರ್ಯಕ್ರಮ ತಾ. 2 ಆದಿತ್ಯವಾರ ಧಾರ್ಮಿಕ ಸಭಾ ಕಾರ್ಯಕ್ರಮವು ನಳಿನ್‌ಕುಮಾರ್ ಕಟೀಲ್ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಪಿ. ವಾದಿರಾಜ ಉಪಾಧ್ಯಾಯ ಕೊಲಕಾಡಿ, ವಿಶೇಷ ಆಹ್ವಾನಿತರಾಗಿ ಭಾರತೀಯ ಕ್ರಿಕೆಟ್ ತಂಡದ ಆಟಗಾರ ರೋಹಿತ್ ಶರ್ಮ, ಉದ್ಯಮಿ ಐಕಳ ಹರೀಶ್ ಶೆಟ್ಟಿ, ಡಾ. ಪದ್ಮನಾಭ ಶೆಟ್ಟಿ, ಶಾಸಕ ಅಭಯಯಚಂದ್ರ ಜೈನ್, ಹರಿಕೃಷ್ಣ ಪುನರೂರು, ಗುರುರಾಜ್ ಭಟ್ ಜಯ ಎ. ಶೆಟ್ಟಿ, ಎಸ್.ಎಸ್. ಸತೀಶ್ ಭಟ್ ಹಳೆಯಂಗಡಿ, ತಾರನಾಥ ದೇವಾಡಿಗ, ಕೃಷ್ಣ ಶೆಟ್ಟಿಗಾರ್ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ರಾತ್ರಿ 10 ಕ್ಕೆ: ವಿಜಯ ಕಲಾವಿದರು ಇವರಿಂದ ನಂಬುವರ ಬುಡ್ಪರಾ ನಾಟಕ ಜರುಗಲಿದೆ.

Comments

comments

Leave a Reply

Read previous post:
ಹರ್ಷಿತ್ ಅಂಗ್ಲ ಭಾಷಾ ಪ್ರಬಂಧ ಸ್ಪರ್ಧೆ ಪ್ರಥಮ ಸ್ಥಾನ

ಕರ್ನಾಟಕ ಸರಕಾರ ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ನವೆಂಬರ್ 17ರಂದು ಅಡ್ಯಾರ್ ಸಹ್ಯಾದ್ರಿ ಪದವಿಪೂರ್ವ ಕಾಲೇಜು ಮಂಗಳೂರು ಇಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಪದವಿ...

Close