ಗಿಡಿಗೆರೆ : ಕಾಲನಿ ಉದ್ಘಾಟನೆ ಮತ್ತು ತುಳಸಿ ಕಟ್ಟೆ ವಿತರಣೆ

ತಂದೆ ತಾಯಂದಿರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ, ಶಿಸ್ತು, ಸಂಸ್ಕಾರ ಕಲಿಸಬೇಕು. ಸಮಾಜದಲ್ಲಿ ಮುಂದುವರಿಯಲು ಪ್ರೇರಣೆ ನೀಡಬೇಕು ಎಂದು ಕರ್ನಾಟಕ ಸರಕಾರದ ಮುಖ್ಯ ಸಚೇತಕ ಕೆ ಆಭಯಚಂದ್ರ ಜೈನ್‌ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಮೆನ್ನಬೆಟ್ಟು ಕಾರ್ಯಕ್ಷೇತ್ರ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಜಂಟೀ ಸಹಭಾಗಿತ್ವದಲ್ಲಿ ಬುಧವಾರ ಗಿಡಿಗೆರೆ ಬ್ರಹ್ಮ ಮುಗೇರ ಮಹಾಕಾಳಿ ದೈವಸ್ಥಾನದ ಸಭಾಂಗಣದಲ್ಲಿ ನಡೆದ ಕಾಲನಿ ಉದ್ಘಾಟನೆ ಹಾಗೂ ತುಳಸಿ ಕಟ್ಟೆ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಜನಾರ್ಧನ ಕಿಲೆಂಜೂರು ವಹಿಸಿದ್ದರು, ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ರಾಘವ, ಮೇಲ್ವಿಚಾರಕಿ ಲತಾ ಅಮೀನ್, ಹೈನುಗಾರಿಕಾ ಮೇಲ್ವಿಚಾರಕ ಗಣೇಶ್, ಗಿಡಿಗೆರೆ ಬ್ರಹ್ಮ ಮುಗೇರ ಮಹಾಕಾಳಿ ದೈವಸ್ಥಾನ ಗುರಿಕಾರ ರಾಜು ಮೇಸ್ತ್ರಿ, ಕಾಲನಿ ಸಮಿತಿ ಅಧ್ಯಕ್ಷೆ ಗೀತಾ ಉಪಸ್ಥಿತರಿದ್ದರು.
ಶ್ಯಾಮ ಡಿ.ಕೆ. ಸ್ವಾಗತಿಸಿ ವಂದಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೇವಾ ನಿರತ ದೇವೇಂದ್ರ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಡಿ. 2 ಅಂಗರಗುಡ್ಡೆ ಶ್ರೀ ರಾಮ ಭಜನಾ ಮಂದಿರ ಲೋಕಾರ್ಪಣ

ಸುಮಾರು 27 ವರ್ಷಗಳ ಹಿಂದೆ ಶಿಮಂತೂರು ಗ್ರಾಮದ ಅಂಗರ ಗುಡ್ಡೆ ಪರಿಸರದ ಯುವಕರು ಸೇರಿ ಶ್ರೀರಾಮ ಭಜನಾ ಮಂಡಳಿ ಸ್ಥಾಪಿಸಿ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮ ನಡೆಸಿಕೋಡು...

Close