ಸಾಮಾನ್ಯ ಕಾರ್ಯಕರ್ತರೇ ಸಮಸ್ತದ ಆಸ್ತಿ

Bhagyavan Sanil
ಮೂಲ್ಕಿ: ದಕ್ಷಿಣ ಭಾರತದ ಬಲಿಷ್ಠ ಇಸ್ಲಾಮಿಕ್ ಧಾರ್ಮಿಕ ಸಂಸ್ಥೆ ಸಮಸ್ತದ ಒಳಿತಿಗಾಗಿ ಶ್ರಮವಹಿಸಿ ದುಡಿಯುತ್ತಿರುವ ಸಾಮಾನ್ಯ ಕಾರ್ಯಕರ್ತರೇ ಅದರ ಮುಖ್ಯ ಆಸ್ತಿಯಾಗಿದ್ದು ಸಮಸ್ತದ ಮೂಲಕ ನಾಯಕರಾದವರು ಸಾಮಾನ್ಯ ಕಾರ್ಯಕರ್ತರ ಹಾಗೂ ಸಮಾಜದ ಶ್ರೇಯೋಭಿವೃದ್ದಿಗಾಗಿ ಧ್ವನಿ ಎತ್ತುವುದಲ್ಲದೆ ಸೂಕ್ತ ಮಾರ್ಗದರ್ಶನವನ್ನೂ ನೀಡಬೇಕು ಎಂದು ಮೂಲ್ಕಿ ಕೇಂದ್ರೀಯ ಜುಮ್ಮಾ ಮಸೀದಿ ಇಮಾಂ ಹಾಜಿ ಎಸ್.ಬಿ.ದಾರಿಮಿ ಹೇಳಿದರು. ಅವರು ಸುರತ್ಕಲ್ ರೇಂಜ್ ವಲಯ ಮುಅಲ್ಲಿಂ ಒಕ್ಕೂಟದ ಆಶ್ರಯದಲ್ಲಿ ಮೂಲ್ಕಿ ಕೇಂದ್ರ ಮಸೀದಿ ಸಭಾಂಗಣದಲ್ಲಿ ಜರಗಿದ ಪೂರ್ವಿಕ ಉಲಮಾಗಳ ಸಂಸ್ಮರಣಾ ಕಾರ್ಯಕ್ರಮವನ್ನು ಉದ್ಟಾಟಿಸಿ ಮಾತನಾಡಿದರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಖಾಝಿ ಅಬೂಬಕ್ಕರ್ ಹಾಜಿ ಅತ್ರಾಡಿ ಉಲಮಾಗಳ ಕಾರ್ಯ ಚಟುವಟಿಕೆಗಳು ಸಮಾಜದಲ್ಲಿ ನೈತಿಕತೆಯನ್ನು ಸ್ಥಾಪಿಸುವಲ್ಲಿ ಮುಖ್ಯಪಾತ್ರ ವಹಿಸುತ್ತಿದ್ದು ಧಾರ್ಮಿಕ ಕಾರ್ಯಕರ್ತರಿಗೆ ಕೇರಳದಂತೆ ಇಲ್ಲಿಯೂ ಸರ್ಕಾರದ ವತಿಯಿಂದ ಸೌಲಭ್ಯಗಳು ಲಭಿಸುವಂತಾಗಲು ಹೋರಾಟ ರೂಪಿಸಬೇಕಿದೆ ಎಂದು ಮುಖ್ಯ ಭಾಷಣ ಮಾಡಿದ ಅಲ್‌ಅಹ್ಸನ್ ಪತ್ರಿಕೆ ಸಂಪಾದಕ ಯು.ಕೆ.ಅಝೀಝ್ ದಾರಿಮಿ ಇಂದಿನ ತಂತ್ರಜ್ಞಾನದ ಕೊಡುಗೆಗಳನ್ನು ದುರುಪಯೋಗ ಪಡಿಸುತ್ತಿರುವುದು ಹೆಚ್ಚುತ್ತಿದ್ದು ಊಹಾಪೋಹಗಳನ್ನು ಸತ್ಯವೆಂದು ನಂಬಿಸುವ ಕಾಲದಲ್ಲಿ ಜನ ಜಾಗೃತೆ ವಹಿಸಬೇಕೆಂದರು. ಕೆ.ಆರ್. ಹುಸೈನ್ ದಾರಿಮಿ ರೆಂಜಲಾಡಿ, ಮೂಲ್ಕಿ ಕೇಂದ್ರ ಜಮಾಅತ್ ಅಧ್ಯಕ್ಷ ಇಕ್ಬಾಲ್ ಅಹ್ಮದ್, ಮುಲ್ಕಿ ರೇಂಜ್ ಅಧ್ಯಕ್ಷ ಝೈನುದ್ದೀನ್ ಮುಸ್ಲಿಯಾರ್, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಅಧ್ಯಕ್ಷ ಎಂ.ಪಿ.ಮೊದಿನಬ್ಬ, ಮುಫತ್ತಿಶ್ ಉಮರ್ ದಾರಿಮಿ, ಸಿದ್ದೀಕ್ ರಹ್ಮಾನಿ ಮೊದಲಾದವರು ಭಾಷಣ ಮಾಡಿದರು ಜಮಾಅತ್ ಕಾರ್ಯದರ್ಶಿ ಹಾಜಿ ಇಬ್ರಾಹಿಂ ಬಾಬ, ಮದೀನಾ ಖಾದರ್, ಅಮಾನುಲ್ಲಾ ಮೂಲ್ಕಿ, ಹಸನ್ ಬಾವ ಹಾಜಿ ಕೊಲ್ನಾಡು, ಹಮೀದ್ ಹಾಜಿ ಚೊಕ್ಕಬೆಟ್ಟು, ಅಹ್ಮದ್ ಬಾವ ಹಾಜಿ ಇಡ್ಯಾ ಮೊದಲಾದವರು ಉಪಸ್ಥಿತರಿದ್ದರು ಕಾರ್ನಾಡು ಖತೀಬ್ ಮೌಲಾನಾ ಜಾಫರ್ ಫೈಝಿ ಸ್ವಾಗತಿಸಿದರು ಅಬ್ದುಲ್ಲಾ ದಾರಿಮಿ ಕಿರಾಹತ್ ಪಠಿಸಿದರು. ಬಾಸಿತ್ ಮದನಿ ವಂದಿಸಿದರು.

Comments

comments

Leave a Reply

Read previous post:
ಕೆಮ್ರಾಲ್ ಶಾಲೆಯ ವಿದ್ಯಾರ್ಥಿಗಳಿಂದ ವಸ್ತು ಪ್ರದರ್ಶನ

ಕಿನ್ನಿಗೋಳಿ : ಕೆಮ್ರಾಲ್ ಸರಕಾರಿ ಫ್ರೌಢಶಾಲೆಯ ವಿದ್ಯಾರ್ಥಿಗಳು ಮಕ್ಕಳ ದಿನಾಚರಣೆಯನ್ನು ವಸ್ತು ಪ್ರದರ್ಶನ ಆಯೋಜಿಸುವ ಮೂಲಕ ವಿಶಿಷ್ಠ ರೀತಿಯಲ್ಲಿ ಆಚರಿಸಿದರು. ಪಠ್ಯ ವಿಷಯಕ್ಕೆ ಸಂಬಂಧಿಸಿದ ವಿಜ್ಞಾನದ ಪ್ರಯೋಗಗಳು, ಕರಕುಶಲ...

Close