ಭಿನ್ನಸಾಮರ್ಥ್ಯ ಮಕ್ಕಳಿಗೆ ಹಣ್ಣುಹಂಪಲು ವಿತರಣೆ

ಕಿನ್ನಿಗೋಳಿ : ಕಾಂಗ್ರೆಸಿನ ಮಾಜಿ ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರ ೯೫ನೇ ಜನ್ಮದಿನಾಚರಣೆ ಅಂಗವಾಗಿ ಸೋಮವಾರ ಮುಲ್ಕಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿ ಸದಸ್ಯೆಯರು, ಎ.ಐ.ಸಿ.ಸಿ. ಕಾರ್ಯದರ್ಶಿ ವಿನಯಕುಮಾರ್ ಸೊರಕೆ ನೇತೃತ್ವದಲ್ಲಿ ಕಿನ್ನಿಗೋಳಿ ಸೈಂಟ್ ಮೇರಿಸ್ ಸ್ಪೆಶಲ್ ಸ್ಕೂಲ್ ಮಕ್ಕಳಿಗೆ ಹಣ್ಣು ಹಂಪಲು ವಿತರಿಸಿದರು.
ಮೆನ್ನಬೆಟ್ಟು ಕಾಂಗ್ರೆಸ್ ಕಮಿಟಿ ಅಧ್ಯಕ್ಷೆ ಶೈಲಾ ಸಿಕ್ವೇರಾ, ಮುಲ್ಕಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಸರೋಜಿನಿ ಸುವರ್ಣ , ಕಾರ್ಯದರ್ಶಿ ಪೂರ್ಣಿಮ ಮಧುಸೂಧನ್, ಸೇವಾದಳದ ಆಧ್ಯಕ್ಷೆ ಸುಜಾತಾ ವಾಸುದೇವ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಶಾಲೆಟ್ ಪಿಂಟೋ, ನಂದಾ ಪಾಯಸ್, ಮುಲ್ಕಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಸಂತ ಬೆರ್ನಾಡ್, ಕೆಪಿಸಿಸಿ ಸದಸ್ಯ ಗುರುರಾಜ್, ಮಧುಸೂಧನ್ ಜೊಸ್ಸಿ ಪಿಂಟೋ, ಶಾಲಾ ಮುಖ್ಯೋಪದ್ಯಾಯಿನಿ ಭಗಿನಿ ಪ್ರೆಸಿಲ್ಲಾ ಮತ್ತಿತರರು ಉಪಸ್ಥಿತರಿದ್ದರು.

 

Comments

comments

Leave a Reply

Read previous post:
ಸಾಮಾನ್ಯ ಕಾರ್ಯಕರ್ತರೇ ಸಮಸ್ತದ ಆಸ್ತಿ

Bhagyavan Sanil ಮೂಲ್ಕಿ: ದಕ್ಷಿಣ ಭಾರತದ ಬಲಿಷ್ಠ ಇಸ್ಲಾಮಿಕ್ ಧಾರ್ಮಿಕ ಸಂಸ್ಥೆ ಸಮಸ್ತದ ಒಳಿತಿಗಾಗಿ ಶ್ರಮವಹಿಸಿ ದುಡಿಯುತ್ತಿರುವ ಸಾಮಾನ್ಯ ಕಾರ್ಯಕರ್ತರೇ ಅದರ ಮುಖ್ಯ ಆಸ್ತಿಯಾಗಿದ್ದು ಸಮಸ್ತದ ಮೂಲಕ...

Close