’ನಿಯಮಿತ ರಕ್ತದಾನ ಸ್ಥಿರ ಆರೋಗ್ಯಕ್ಕೆ ಪೂರಕ’ : ಡಾ| ಶರತ್

Pundalika Marathe

ಬೆಳ್ಮಣ್:- ಸ್ವಯಂ ಪ್ರೇರಿತ ರಕ್ತದಾನವು ಆರೋಗ್ಯಕ್ಕೆ ಪೂರಕವಾಗಿಯೂ, ಪರರಿಗೆ ಜೀವದಾನಿಯಾಗಿಯೂ ಆಗಿದ್ದು, ಸೇವಾ ಸಂಸ್ಥೆಗಳ ಸದಸ್ಯರು ಮಾಡಬಹುದಾದ ಶ್ರೇಷ್ಠದಾನವಾಗಿದೆ. ನಮಗೆ ಅವಶ್ಯವಿರುವುದಕ್ಕಿಂತಲೂ 2-3 ಲೀಟರ್ ಹೆಚ್ಚು ರಕ್ತವು ನಮ್ಮ ದೇಹದಲ್ಲಿರುತ್ತದೆ. ದಾನ ಮಾಡಿದಷ್ಟು ರಕ್ತವು ಬೇಗನೆ ಮರುಪೂರಣಗೊಳ್ಳುವುದರಿಂದ ನಾವು ನಿಯಮಿತವಾಗಿ ರಕ್ತದಾನ ಮಾಡಿ ಜೀವವುಳಿಸುವ ಕಾರ್ಯಕ್ಕೆ ಮನ ಮಾಡಬೇಕು” ಎಂದು ಉಡುಪಿಯ ಸರಕಾರಿ ಆಸ್ಪತ್ರೆಯ ರಕ್ತಸಂಗ್ರಹಣಾ ವಿಭಾಗದ ವೈದ್ಯಾಧಿಕಾರಿ ಡಾ| ಶರತ್ ಮನವಿ ಮಾಡಿದರು.
ಅವರು ಬೆಳ್ಮಣ್ಣು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಯನ್ಸ್ ಲಯನೆಸ್, ಲಿಯೊ ಕ್ಲಬ್, ರಿಕ್ಷಾ ಚಾಲಕ- ಮಾಲಕರ ಸಂಘ, ನಂದಳಿಕೆಯ ಗುರುದುರ್ಗಾ ಮಿತ್ರಮಂಡಳಿ, ಅಬ್ಬನಡ್ಕದ ಶ್ರೀದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ಮತ್ತು ಬೆಳ್ಮಣ್ಣು ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಕಾರದೊಂದಿಗೆ ಆಯೋಜಿಸಿದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಲಯನ್ಸ್ ಮೆಡಿಕಲ್ ಕ್ಯಾಂಪ್ ನಿರ್ದೇಶಕರ ಲ| ಎನ್. ಟಿ. ಅಂಚನ್, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಸತೀಶ್, ಲಯನ್ ಪದಾಧಿಕಾರಿಗಳಾದ ಬಿ. ಸೀತಾರಾಮ ಭಟ್, ಉದಯಕುಮಾರ್ ಶೆಟ್ಟಿ, ಸುಹಾಸ್ ಹೆಗ್ಡೆ, ಎನ್. ಎಂ ಹೆಗಡೆ, ಮುಕುಂದ ಕಾಮತ್, ರಮಾನಾಥ ಶೆಣೈ, ಗ್ರೆಗರಿ ಮಿನೇಜಸ್, ಲಿಯೊಕ್ಲಬ್ ಅಧ್ಯಕ್ಷ ಕೆವಿನ್ ಮೊರಿಸನ್ ಡಿ’ಮೆಲ್ಲೊ, ತಾ. ಪಂ. ಸದಸ್ಯ ಕ್ಷೇವಿಯರ್ ಡಿ’ಮೆಲ್ಲೊ, ರಿಕ್ಷಾ ಚಾಲಕ-ಮಾಲಕ ಸಂಘದ ಅಧ್ಯಕ್ಷ ಶಿವಪ್ರಸಾದ್ ಮುಂತಾದವರು ಉಪಸ್ಥಿತರಿದ್ದರು. ಸಾಕಷ್ಟು ಸಂಖ್ಯೆಯಲ್ಲಿ ದಾನಿಗಳು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು.

 

Comments

comments

Leave a Reply

Read previous post:
ಕಿನ್ನಿಗೋಳಿಯಲ್ಲಿ ಇಂದಿರಾ ಗಾಂಧಿ ಜನ್ಮದಿನಾಚರಣೆ

ಮಹಿಳೆಯರು ಅಬಲೆಯರಲ್ಲ. ಇಂದಿರಾ ಗಾಂಧಿಯವರ ತತ್ವ ಆದರ್ಶಗಳನ್ನು ರೂಡಿಸಿಕೊಂಡು ಮಹಿಳೆಯರನ್ನು ಸಮಾಜದ ಮುಂಚೂಣಿಗೆ ಕರೆ ತರಬೇಕು ಎಂದು ಮುಲ್ಕಿ ಮಹಿಳಾ ಕಾಂಗ್ರೆಸ್ ಸಮಿತಿ ಕಾರ್ಯಕರ್ತೆಯವರಿಗೆ ಎ.ಐ.ಸಿ.ಸಿ. ಕಾರ್ಯದರ್ಶಿ...

Close