ಕಿನ್ನಿಗೋಳಿಯಲ್ಲಿ ಇಂದಿರಾ ಗಾಂಧಿ ಜನ್ಮದಿನಾಚರಣೆ

ಮಹಿಳೆಯರು ಅಬಲೆಯರಲ್ಲ. ಇಂದಿರಾ ಗಾಂಧಿಯವರ ತತ್ವ ಆದರ್ಶಗಳನ್ನು ರೂಡಿಸಿಕೊಂಡು ಮಹಿಳೆಯರನ್ನು ಸಮಾಜದ ಮುಂಚೂಣಿಗೆ ಕರೆ ತರಬೇಕು ಎಂದು ಮುಲ್ಕಿ ಮಹಿಳಾ ಕಾಂಗ್ರೆಸ್ ಸಮಿತಿ ಕಾರ್ಯಕರ್ತೆಯವರಿಗೆ
ಎ.ಐ.ಸಿ.ಸಿ. ಕಾರ್ಯದರ್ಶಿ ವಿನಯಕುಮಾರ್ ಸೊರಕೆ ಹೇಳಿದರು
ಕಾಂಗ್ರೆಸಿನ ಮಾಜಿ ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರ 95ನೇ ಜನ್ಮದಿನಾಚರಣೆ ಅಂಗವಾಗಿ ಸೋಮವಾರ ಕಿನಿಗೋಳಿ ಕಾನ್ಸೆಟ್ಟಾ ಆಸ್ಪತ್ರೆ ಸಭಾಂಗಣದಲ್ಲಿ ಮುಲ್ಕಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿ ಸದಸ್ಯೆಯರು ಕಾರ್ಯಕ್ರಮದಲ್ಲಿ ನಡೆದ ಮಾತನಾಡಿದರು.
ಕಿನ್ನಿಗೋಳಿ ಕಾನ್ಸೆಟ್ಟಾ ಆಸ್ಪತ್ರೆಯ ವೈದ್ಯೆ ಭಗಿನಿ ಡಾ| ಜೀವಿತಾ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಮೆನ್ನಬೆಟ್ಟು ಕಾಂಗ್ರೆಸ್ ಕಮಿಟಿ ಅಧ್ಯಕ್ಷೆ ಶೈಲಾ ಸ್ವಿಕ್ವೇರಾ, ಮುಲ್ಕಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಸರೋಜಿನಿ ಸುವರ್ಣ , ಕಾರ್ಯದರ್ಶಿ ಪೂರ್ಣಿಮ ಮಧುಸೂಧನ್, ಸೇವಾ ದಳದ ಅಧ್ಯಕ್ಷೆ ಸುಜಾತಾ ವಾಸುದೇವ್, ನಂದಾ ಪಾಯಸ್, ಮುಲ್ಕಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಸಂತ ಬೆರ್ನಾಡ್, ಕೆಪಿಸಿಸಿ ಸದಸ್ಯ ಗುರುರಾಜ್, ಮಧುಸೂಧನ್, ಜೊಸ್ಸಿ ಪಿಂಟೋ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಶಾಲೆಟ್ ಪಿಂಟೋ ಮತ್ತಿತರರು ಉಪಸ್ಥಿತರಿದ್ದರು.

Comments

comments

Leave a Reply

Read previous post:
ಮೇರಿ ವೆಲ್ ಆಂಗ್ಲ ಮಾಧ್ಯಮ ಫ್ರೌಢ ಶಾಲೆ ಕ್ರೀಡೋತ್ಸವ

Jerry Kinnigoli

Close