ಮಾನವೀಯ ಮೌಲ್ಯಗಳು ಎಂದೂ ಬದಲಾವಣೆ ಆಗಲ್ಲ

Pundalika Marathe

ಬೆಳ್ಮಣ್:- ಬದಲಾದ ಸನ್ನಿವೇಶಕ್ಕೆ ತಕ್ಕಂತೆ ಪಠ್ಯವಿಷಯಗಳು, ಆಚಾರ ವಿಚಾರಗಳು ಬದಲಾಗುತ್ತಿರುತ್ತವೆ. ಆದರೆ ಮಾವೀಯ ಮೌಲ್ಯಗಳು ಎಂದೂ ಬದಲಾವಣೆಯಾಗುವುದಿಲ್ಲ ಎಂದು ಕಾರ್ಕಳ ತಾಲೂಕು ಪಂಚಾಯತ್ ಸದಸ್ಯ ಹಾಗೂ ಶಾಲಾ ಹಳೆವಿದ್ಯಾರ್ಥಿ ಸಂಘದ ಸ್ಥಾಪಕ ಅಧ್ಯಕ್ಷ ಕ್ಸೇವಿಯರ್ ಡಿಮೆಲ್ಲೊ ನುಡಿದರು.
ಅವರು ಬೆಳ್ಮಣ್ ಸಂತ ಜೋಸೆಫ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಆಂಗ್ಲ ಮಾಧ್ಯಮ ಹಿ.ಪ್ರಾ.ಶಾಲಾ ಸಂಯುಕ್ತ ಆಶ್ರಯದಲ್ಲಿ ಜರುಗಿದ ” ಪ್ರತಿಭಾ ಪ್ರದರ್ಶನ-ವಾರ್ಷಿಕ ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡುತ್ತಾ, ಜೀವನ ಮೌಲ್ಯಗಳಿಗೆ ಹೆಚ್ಚಿನ ಒತ್ತು ನೀಡುವಂತೆ ಕರೆಯಿತ್ತರು.
ಬೆಂಗಳೂರಿನ ಉದ್ಯಮಿ, ಸ್ಥಳೀಯ ಸಾಮಾಜಿಕ ಕಾರ್ಯಕರ್ತ, ದಾನಿಗಳಾದ ರೋಕಿ ಡಿಸಿಲ್ವ ಶಾಲಾ ಹಳೆ ವಿದ್ಯಾರ್ಥಿ ಸಂಘದ ಮೂಲಕ ನೀಡಿದ ಶಾಲಾ ಕರಾಟೆ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಿ , ರಾಜ್ಯ ಮಟ್ಟಕ್ಕೆ ಆಯ್ಕೆಗೊಂಡ ಕ್ರೀಡಾಪಟುಗಳನ್ನು ಅಭಿನಂದಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕ ರೆ.ಫಾ. ಲಾರೆನ್ಸ್ ಬಿ ಡಿಸೋಜ ವಿದ್ಯಾರ್ಥಿಗಳ ಪ್ರತಿಭಾ ವಿಕಸನಕ್ಕೆ ಇಂತಹ ಕಾರ್ಯಕ್ರಮಗಳು ಅಗತ್ಯವಾಗಿದ್ದು, ಶಿಕ್ಷಕರ ಹಾಗೂ ಪೋಷಕರ ಅನ್ಯೋನ್ಯ ಸಂಬಂಧಗಳು ಸಂಸ್ಥೆಯ ಹಾಗೂ ವಿದ್ಯಾರ್ಥಿಗಳ ಭವಿಷ್ಯಕ್ಕೆ ಪೂರಕವಾಗಿವೆ ಎಂದರು. ರಾಜ್ಯಮಟ್ಟದ ಕ್ರೀಡಾಸ್ಫರ್ಧೆಗೆ ಆಯ್ಕೆಗೊಂಡ ಮಾರುತಿ,ಅಕ್ಷಯ್, ದೈಹಿಕ ಶಿಕ್ಷಣ ಶಿಕ್ಷಕ ಹರ್ಷೇಂದ್ರಕುಮಾರ್ ಜೈನ್, ಗೌರವ ಶಿಕ್ಷಕಿ ಲವಿನಾ ಪಿಂಟೊ, ಸುಚಿತ್ರಾ ಕುಲಾಲ್‌ರವರನ್ನು ಸನ್ಮಾನಿಸಲಾಯಿತು.
ಬೆಳ್ಮಣ್ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಲ್ಲಿಕಾ ರಾವ್, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಗ್ರೆಗೊರಿ ಮಿನೇಜಸ್ ಶುಭಾಶಂಸನೆಗೈದರು. ಗ್ರಾಮ ಪಂಚಾಯತ್ ಸದಸ್ಯೆ ಗೀತಾ ಪ್ರಭು, ಪ್ರಭಾಕರ ಶೆಟ್ಟಿ, ಬೆಳ್ಮಣ್ ಜೇಸಿಸ್ ಅಧ್ಯಕ್ಷ ರಘುನಾಥ್ ನಾಯಕ್, ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಸಂದೀಪ್ ವಿ ಪೂಜಾರಿ, ಸ್ಥಳೀಯ ಕನ್ಯಾಮಠದ ಮುಖ್ಯಸ್ಥೆ ಭಗಿನಿ ಉಷಾ ಸ್ಟೆಲ್ಲಾ ಡಿಸೋಜ, ನಂದಳಿಕೆ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಪಾಂಡುರಂಗ ಶೆಟ್ಟಿ, ಶಾಲಾ ನಾಯಕಿ ರಚಿತಾ ಶೆಟ್ಟಿ ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಭಗಿನಿ ಮೊನಿಕಾ ಹಾಗೂ ಆಂಗ್ಲ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕಿ ಜೆನೆಟ್ ಡಿಸೋಜ ವರದಿ ಓದಿದರು. ಶಿಕ್ಷಕ ವಿನ್ಸೆಂಟ್ ಪಿಂಟೊ, ಬಿ.ಪುಂಡಲೀಕ ಮರಾಠೆ, ಆಂಗ್ಲ ಮಾಧ್ಯಮ ಶಿಕ್ಷಕಿ ಗಾಯತ್ರಿ ಭಟ್ ಸ್ಫರ್ಧಾವಿಜೇತರನ್ನು ಪರಿಚಯಿಸಿದರು. ಶಿಕ್ಷಕಿ ಜುಲಿಯಾನಾ ಮೊರಾಸ್, ಲಿಲ್ಲಿ ಡಿಸೋಜ ಸಹಕರಿಸಿದರು. ಪ್ರಜ್ವಲ್ ಆಚಾರ್ಯ, ರಿತೇಶ್ ಕುಲಾಲ್ ನಿರೂಪಿಸಿದರು. ರೊಲಿಟಾ ಡಿಸೋಜ ಸ್ವಾಗತಿಸಿದರು. ಹೆಡ್ಲಿನ್ ಧನ್ಯವಾದವಿತ್ತರು.

Comments

comments

Leave a Reply

Read previous post:
ವಿದ್ಯಾರ್ಥಿಗಳು ಸಮಾಜದ ಆದರ್ಶಗಳನ್ನು ಎತ್ತಿಹಿಡಿಯಬೇಕು

B. Janardana Bhat ಬೆಳ್ಮಣ್ಣು : ಸರಕಾರಿ ಪದವಿಪೂರ್ವ ಕಾಲೇಜಿನ ವಾರ್ಷಿಕ ಬಹುಮಾನ ವಿತರಣಾ ಸಮಾರಂಭವು ಕಾರ್ಕಳದ ಶಾಸಕ ಎಚ್. ಗೋಪಾಲ ಭಂಡಾರಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಅವರು...

Close