ಬೆಳ್ಮಣ್ಣು ಕಾಲೇಜಿನ ವಾರ್ಷಿಕ ಕ್ರೀಡಾಕೂಟ

B. Janardana Bhat
ಬೆಳ್ಮಣ್ಣು : ಸರಕಾರಿ ಪದವಿಪೂರ್ವ ಕಾಲೇಜಿನ ವಾರ್ಷಿಕ ಕ್ರೀಡಾಕೂಟದ ಉದ್ಘಾಟನಾ ಸಮಾರಂಭವು ಬೆಳ್ಮಣ್ಣು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಲ್ಲಿಕಾ ರಾವ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. “ವಿದ್ಯಾರ್ಥಿಗಳು ಸೋಲನ್ನು ಗೆಲುವಾಗಿ ಪರಿವರ್ತಿಸುತ್ತಾ ಬದುಕಲು ಕಲಿಯಬೇಕು” ಎಂದು ಕರೆನೀಡಿದರು. ನಂದಳಿಕೆ ಚಾವಡಿ ಅರಮನೆಯ ಎನ್. ಸುಹಾಸ್ ಹೆಗ್ಗಡೆಯವರು ಕ್ರೀಡಾಕೂಟವನ್ನು ಉದ್ಘಾಟಿಸಿ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ಕೊಟ್ಟಿರುವ ಈ ಸಂಸ್ಥೆಯು ಇನ್ನಷ್ಟು ಕ್ರೀಡಾಪಟುಗಳನ್ನು ಮತ್ತು ಸ್ವಂತ ಚಿಂತನೆಯ ವ್ಯಕ್ತಿಗಳನ್ನು ದೇಶಕ್ಕೆ ನೀಡಲಿ ಎಂದು ಹಾರೈಸಿದರು.
ಬೆಳ್ಮಣ್ಣು ಲಯನ್ಸ್ ಅಧ್ಯಕ್ಷ ಬಿ. ಸೀತಾರಾಮ ಭಟ್ ಸಂಸ್ಥೆಯಲ್ಲಿ ನಡೆಯುತ್ತಿದ್ದ ಮಾದರಿ ಶೈಕ್ಷಣಿಕ, ಮತ್ತು ಸಾಮಾಜಿಕ ಚಟುವಟಿಕೆಗಳನ್ನು ನೆನಪಿಸಿಕೊಂಡು ಅದೇ ಪರಂಪರೆ ಮುಂದುವರಿಯುತ್ತಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದರು. ನಿವೃತ್ತ ಪ್ರಾಂಶುಪಾಲ ಪಿ. ಜಯಂತ ರಾವ್ ಮತ್ತು ಎಸ್. ಡಿ.ಎಂ.ಸಿ. ಸದಸ್ಯ ರಘುರಾಮ ನಾಯಕ್, ಗಣ್ಯರಾದ ಪ್ರಭಾಕರ ಶೆಟ್ಟಿಯವರು ಉಪಸ್ಥಿತರಿದ್ದರು.
ಸಂಸ್ಥೆಯ ಪ್ರಾಂಶುಪಾಲ ಡಾ. ಬಿ. ಜನಾರ್ದನ ಭಟ್ ಸ್ವಾಗತಿಸಿದರು. ಹಿರಿಯ ಸಹಶಿಕ್ಷಕಿ ಶಾಂತಿ ಭಟ್ ವಂದಿಸಿದರು. ಉಪನ್ಯಾಸಕ ರಣಜಿತ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ರಾಜ್ಯಮಟ್ಟದ ಕ್ರೀಡಾಪಟು ದುರ್ಗೇಶ್ ಕ್ರೀಡಾಳುಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಆಲ್ವಿನ್ ಅಂದ್ರಾದೆಯವರ ನಿರ್ದೇಶನದಲ್ಲಿ ಕ್ರೀಡಾಕೂಟ ನೆರವೇರಿತು.

Comments

comments

Leave a Reply

Read previous post:
ಬೆಳ್ಮಣ್- ಶಿಕ್ಷಕರ ಮಾಸಿಕ ಸಮಾಲೋಚನೆ-ಪ್ರತಿಭಾ ಪುರಸ್ಕಾರ

Pundalika  Marathe ಬೆಳ್ಮಣ್:-ಸಾರ್ವಜನಿಕ ಶಿಕ್ಷಣ ಇಲಾಖೆ ಬೆಳ್ಮಣ್ ವೃತ್ತದ ನಂದಳಿಕೆ ಮತ್ತು ಮುಂಡ್ಕೂರು ಕ್ಲಸ್ಟರ್ ವ್ಯಾಪ್ತಿಯ ಶಿಕ್ಷಕರ ಸಮಾಲೋಚನಾ ಸಭೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಬೆಳ್ಮಣ್...

Close