ಬೆಳ್ಮಣ್- ಶಿಕ್ಷಕರ ಮಾಸಿಕ ಸಮಾಲೋಚನೆ-ಪ್ರತಿಭಾ ಪುರಸ್ಕಾರ

Pundalika  Marathe

ಬೆಳ್ಮಣ್:-ಸಾರ್ವಜನಿಕ ಶಿಕ್ಷಣ ಇಲಾಖೆ ಬೆಳ್ಮಣ್ ವೃತ್ತದ ನಂದಳಿಕೆ ಮತ್ತು ಮುಂಡ್ಕೂರು ಕ್ಲಸ್ಟರ್ ವ್ಯಾಪ್ತಿಯ ಶಿಕ್ಷಕರ ಸಮಾಲೋಚನಾ ಸಭೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಬೆಳ್ಮಣ್ ಸಂತ ಜೋಸೆಫ್ ಶಾಲಾ ಸಭಾಂಗಣದಲ್ಲಿ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ಮಣ್ ಶಾಲಾ ಮುಖ್ಯ ಶಿಕ್ಷಕಿ ಭಗಿನಿ ಮೊನಿಕಾ ವಹಿಸಿದ್ದರು. ಬೆಳ್ಮಣ್ ವೃತ್ತ ಮಟ್ಟ ದಿಂದ ರಾಜ್ಯ ಮಟ್ಟಕ್ಕೆ ಆಯ್ಕೆಗೊಂಡ ಕ್ರೀಡಾಪಟುಗಳಾದ ಬೆಳ್ಮಣ್ ಸಂತ ಜೋಸೆಫ್ ಶಾಲಾ ಮಾರುತಿ, ಅಕ್ಷಯ್, ಹಿರಿಯರ ಕ್ರೀಡಾಕೂಟದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಗೊಂಡ ಬೆಳ್ಮಣ್ ಹೊಸ್ಮಾರ್ ಶಾಲಾ ಶಿಕ್ಷಕಿ ಗ್ರೆಟ್ಟಾ ಮಸ್ಕರೇನ್ಹಸ್‌ರವರನ್ನು ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.
ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಜಯಂತಿ ಶೆಟ್ಟಿ ಗಣಿತಪಾಠ ಬೋಧನೆಯಲ್ಲಿ ಬಾಯಿಲೆಕ್ಕಗಳ ಮಹತ್ವ, ಆಕರ್ಷಕ ಕಲಿಕೆಯ ಬಗ್ಗೆ ಮಾಹಿತಿ ನೀಡಿದರು. ಬೆಳ್ಮಣ್ ಸರಕಾರಿ ಪದವಿ ಪೂರ್ವ ಕಾಲೇಜಿನ ಶಿಕ್ಷಕಿ ಶಾಂತಿ ಭಟ್ ಗಣಿತಪಾಠ ಬೋಧನೆಯಲ್ಲಿ ಸರಳಗಣಿತ, ಮಗ್ಗಿಕಲಿಕೆ, ಪರಿಣಾಮಕಾರಿ ಬೋಧನೆಯ ಬಗ್ಗೆ ಮಾಹಿತಿ ನೀಡಿದರು. ನಂದಳಿಕೆ ಕ್ಲಸ್ಟರ್ ಸಂಪನ್ಮೂಲ ವ್ಯಕ್ತ ಪಾಂಡುರಂಗ ಶೆಟ್ಟಿ ಸ್ವಾಗತಿಸಿದರು. ಮುಂಡ್ಕೂರು ಕ್ಲಸ್ಟರ್‌ನ ಚಂದ್ರಕಾಂತ ಡೇಸಾ ಇಲಾಖಾ ಮಾಹಿತಿ, ಪ್ರತಿಭಾಕಾಂಜಿ,ಮಕ್ಕಳ ಪ್ರವಾಸದ ಬಗ್ಗೆ ಮಾಹಿತಿ ನೀಡಿದರು. ಶಿಕ್ಷಕರ ಸಂಘದ ತಾಲೂಕು ಉಪಾಧ್ಯಕ್ಷ ಸತೀಶ್ ಶೆಟ್ಟಿ, ಅನುದಾನಿತ ಶಾಲಾ ಸಂಘದ ವಿ.ಕೆ.ರಾವ್ ನಂದಳಿಕೆ, ಶಿಕ್ಷಣ ಸಂಯೋಜಕಿ ಶೈಲಜಾ ಹೆಗ್ಡೆ ಸಕಾಲಿಕ ಮಾಹಿತಿ ನೀಡಿದರು.ಚಂದ್ರಶೇಖರ ಭಟ್ ಪ್ರಾರ್ಥಿಸಿದರು. ಪೊಸ್ರಾಲ್ ಶಾಲಾ ಶಿಕ್ಷಕ ಹರೀಶ್ ಶೆಟ್ಟಿ ಚಿಂತನ ನಡೆಸಿದರು. ಪುನಾರುಕರೆ ಶಾಲಾ ಶಿಕ್ಷಕ ದೇವದಾಸ ಪಾಟ್ಕರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Comments

comments

Leave a Reply

Read previous post:
’ನಿಯಮಿತ ರಕ್ತದಾನ ಸ್ಥಿರ ಆರೋಗ್ಯಕ್ಕೆ ಪೂರಕ’ : ಡಾ| ಶರತ್

Pundalika Marathe ಬೆಳ್ಮಣ್:- ಸ್ವಯಂ ಪ್ರೇರಿತ ರಕ್ತದಾನವು ಆರೋಗ್ಯಕ್ಕೆ ಪೂರಕವಾಗಿಯೂ, ಪರರಿಗೆ ಜೀವದಾನಿಯಾಗಿಯೂ ಆಗಿದ್ದು, ಸೇವಾ ಸಂಸ್ಥೆಗಳ ಸದಸ್ಯರು ಮಾಡಬಹುದಾದ ಶ್ರೇಷ್ಠದಾನವಾಗಿದೆ. ನಮಗೆ ಅವಶ್ಯವಿರುವುದಕ್ಕಿಂತಲೂ 2-3 ಲೀಟರ್...

Close