ವಿದ್ಯಾರ್ಥಿಗಳು ಸಮಾಜದ ಆದರ್ಶಗಳನ್ನು ಎತ್ತಿಹಿಡಿಯಬೇಕು

B. Janardana Bhat

ಬೆಳ್ಮಣ್ಣು : ಸರಕಾರಿ ಪದವಿಪೂರ್ವ ಕಾಲೇಜಿನ ವಾರ್ಷಿಕ ಬಹುಮಾನ ವಿತರಣಾ ಸಮಾರಂಭವು ಕಾರ್ಕಳದ ಶಾಸಕ ಎಚ್. ಗೋಪಾಲ ಭಂಡಾರಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತ ವಿದ್ಯಾರ್ಥಿಗಳನ್ನು ದಾರಿತಪ್ಪಿಸುವ ವ್ಯವಸ್ಥೆಗಳು ಮತ್ತು ಮಾದರಿಗಳು ಸಮಾಜದಲ್ಲಿ ಸಾಕಷ್ಟಿವೆ. ಆದರೆ ವಿದ್ಯಾರ್ಥಿಗಳು ಅವುಗಳತ್ತ ಮುಖ ಮಾಡದೆ, ಆದರ್ಶವನ್ನು ಬಿಡದೆ ಉತ್ತಮ ಸಮಾಜ ನಿರ್ಮಾಣಕ್ಕೆ ಕಂಕಣಬದ್ಧರಾಗಬೇಕು ಎಂದು ಹಿತವಚನ ಹೇಳಿದರು.
ಸ್ಥಳೀಯ ಜಿಲ್ಲಾ ಪಂಚಾಯತ್ ಸದಸ್ಯರಾದ ಸುಪ್ರೀತ್ ಶೆಟ್ಟಿ, ಬೆಳ್ಮಣ್ಣು ಲಯನ್ಸ್ ಕ್ಲಬ್ ಅಧ್ಯಕ್ಷ ಹಾಗೂ ಎಸ್. ಡಿ. ಎಂ. ಸಿ. ಯ ಶಿಕ್ಷಣ ತಜ್ಞ ಬಿ. ಸೀತಾರಾಮ ಭಟ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಗಣಪತಿ ಆಚಾರ್ಯ, ಮಾಜಿ ಪ್ರಾಂಶುಪಾಲ ಜಯಂತ ರಾವ್ ಪಿ, ಹೆತ್ತವರ ಪ್ರತಿನಿಧಿಯಾಗಿ ಗಣಪತಿ ಕಾಮತ್ ಇವರು ಬಹುಮಾನಗಳನ್ನು ವಿತರಿಸಿ ಸಂದರ್ಭೋಚಿತವಾಗಿ ಮಾತನಾಡಿದರು.
ಪ್ರಾಂಶುಪಾಲ ಡಾ. ಬಿ. ಜನಾರ್ದನ ಭಟ್ ಮತ್ತು ಹಿರಿಯ ಸಹಶಿಕ್ಷಕಿ ಶಾಂತಿ ಭಟ್ ಇವರು ವಾರ್ಷಿಕ ವರದಿಗಳನ್ನು ಮಂಡಿಸಿದರು. ಉಪನ್ಯಾಸಕ ಉಮೇಶ್ ಜಿ. ನಾಯಕ್ ಸ್ವಾಗತಿಸಿದರು, ಸಹಶಿಕ್ಷಕಿ ಅಮಿತಾ ಬಾಯಿ ವಂದನಾರ್ಪಣೆ ಮಾಡಿದರು. ಉಪನ್ಯಾಸಕ ಮಾಧವ ಎ ಕಾರ್ಯಕ್ರಮ ನಿರ್ವಹಿಸಿದರು. ತೇಜಸ್ವಿ ಆರ್ ನಾಯಕ್, ಶುಭಲಕ್ಷ್ಮಿ ನಾಯಕ್, ವಿನಯಶ್ರೀ, ರಣಜಿತ್ ಕುಮಾರ್ ಹಾಗೂ ಸಹಶಿಕ್ಷಕರಾದ ಲಕ್ಷ್ಮೀ ನಾಯಕ್, ಬಸವರಾಜ್, ಆಲ್ವಿನ್ ಅಂದ್ರಾದೆ ವಿವಿಧ ವಿಭಾಗಗಳ ಬಹುಮಾನ ವಿತರಣೆ ಕಾರ್ಯಕ್ರಮವನ್ನು ನಿರ್ವಹಿಸಿದರು. ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

Comments

comments

Leave a Reply

Read previous post:
ಬೆಳ್ಮಣ್ಣು ಕಾಲೇಜಿನ ವಾರ್ಷಿಕ ಕ್ರೀಡಾಕೂಟ

B. Janardana Bhat ಬೆಳ್ಮಣ್ಣು : ಸರಕಾರಿ ಪದವಿಪೂರ್ವ ಕಾಲೇಜಿನ ವಾರ್ಷಿಕ ಕ್ರೀಡಾಕೂಟದ ಉದ್ಘಾಟನಾ ಸಮಾರಂಭವು ಬೆಳ್ಮಣ್ಣು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಲ್ಲಿಕಾ ರಾವ್ ಅವರ ಅಧ್ಯಕ್ಷತೆಯಲ್ಲಿ...

Close