ಕಿನ್ನಿಗೋಳಿ ಪ್ರತಿಭಾ ಕಾರಂಜಿ

ಕಿನ್ನಿಗೋಳಿ : ಸರಕಾರದಿಂದ ನಡೆಸಲ್ಪಡುವ ಪ್ರತಿಭಾ ಕಾರಂಜಿ ವಿದ್ಯಾರ್ಥಿಗಳಿಗೆ ಉತ್ತಮ ವೇದಿಕೆಯಾಗಿದೆ. ಮಕ್ಕಳಲ್ಲಿ ಆತ್ಮವಿಶ್ವಾಸ ವ್ಯಕ್ತಿತ್ವ ವಿಕಸನ ಜಾಗೃತಗೊಳ್ಳುತ್ತದೆ. ಪಾಲಕರು ಮತ್ತು ಶಿಕ್ಷಕರು ಮಕ್ಕಳನ್ನು ಸೃಜನಶೀಲರಾಗಿ ರೂಪಿಸಬೇಕು ಎಂದು ಕಿನ್ನಿಗೋಳಿ ಚರ್ಚಿನ ಸಹಾಯಕ ಧರ್ಮಗುರು ಫಾ| ವಿನೋದ್ ಲೋಬೊ ಹೇಳಿದರು.
ಗುರುವಾರ ಕಿನ್ನಿಗೋಳಿ ಸೈಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪದ್ಮನೂರು ಮತ್ತು ಉಲ್ಲಂಜೆ ಕ್ಲಷ್ಟರ್ ವ್ಯಾಪ್ತಿಯ ಶಾಲೆಗಳ ಪ್ರತಿಭಾ ಕಾರಂಜಿಯ ಅಧ್ಯಕ್ಷತೆ ವಹಿಸಿ, ಉದ್ಘಾಟಿಸಿ ಮಾತನಾಡಿದರು.
ಕಿನ್ನಿಗೋಳಿ ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ, ಜಿಲ್ಲಾ ಪಂಚಾಯಿತಿ ಸದಸ್ಯೆ ಆಶಾ ರತ್ನಾಕರ ಸುವರ್ಣ, ತಾಲೂಕು ಪಂಚಾಯಿತಿ ಸದಸ್ಯೆ ಬೇಬಿ ಸುಂದರ ಕೋಟ್ಯಾನ್, ಮೆನ್ನಬೆಟ್ಟು ಪಂಚಾಯಿತಿ ಉಪಾಧ್ಯಕ್ಷ ಜನಾರ್ದನ ಕಿಲೆಂಜೂರು, ಕ್ಲಷ್ಟರ್ ಮುಖ್ಯಸ್ಥ ಜಗದೀಶ ನಾವಡ, ಶಾಲಾ ಮುಖ್ಯ ಶಿಕ್ಷಕಿ ಆನೆಟ್ ಲೋಬೊ ಉಪಸ್ಥಿತರಿದ್ದರು.

Comments

comments

Leave a Reply

Read previous post:
ಮಾನವೀಯ ಮೌಲ್ಯಗಳು ಎಂದೂ ಬದಲಾವಣೆ ಆಗಲ್ಲ

Pundalika Marathe ಬೆಳ್ಮಣ್:- ಬದಲಾದ ಸನ್ನಿವೇಶಕ್ಕೆ ತಕ್ಕಂತೆ ಪಠ್ಯವಿಷಯಗಳು, ಆಚಾರ ವಿಚಾರಗಳು ಬದಲಾಗುತ್ತಿರುತ್ತವೆ. ಆದರೆ ಮಾವೀಯ ಮೌಲ್ಯಗಳು ಎಂದೂ ಬದಲಾವಣೆಯಾಗುವುದಿಲ್ಲ ಎಂದು ಕಾರ್ಕಳ ತಾಲೂಕು ಪಂಚಾಯತ್ ಸದಸ್ಯ...

Close